Advertisement
ಒಂದು ಸಲ ರೈತನೊಬ್ಬನ ಹಸು ಬೆಟ್ಟದ ಕಡೆಗೆ ಮೇಯಲು ಹೋಗಿತ್ತು. ಸಂಜೆ ಅದು ಎಂದಿನಂತೆ ಮರಳಿ ಕೊಟ್ಟಿಗೆಗೆ ಬರಲಿಲ್ಲ. ಚಿಂತೆಯಲ್ಲಿ ರೈತ ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದ. ಬೆಳಗಾದ ಕೂಡಲೇ ಹಸುವನ್ನು ಹುಡುಕಿಕೊಂಡು ಹೋದ. ಒಂದೆಡೆ ದನಗಾಹಿಯೊಬ್ಬ ಅರಮನೆಯ ಹಸುಗಳನ್ನು ಮೇಯಿಸುತ್ತ ಇದ್ದ. ರೈತ ಬಂದು ಅಲ್ಲಿ ನೋಡಿದಾಗ ಅವನ ಹಸು ಕೂಡ ಅದೇ ಮಂದೆಯೊಳಗೆ ಸೇರಿಕೊಂಡು ಮೇಯುತ್ತ ಇತ್ತು. ರೈತ ಸಂತೋಷದಿಂದ ತನ್ನ ಹಸುವನ್ನು ಹೊಡೆದುಕೊಂಡು ಹೋಗಲು ಮುಂದಾದ. ಆಗ ದನಗಾಹಿ, “”ಅದು ಅರಮನೆಯ ಹಸು. ಅದನ್ನು ಎಲ್ಲಿಗೆ ಕರೆದೊಯ್ಯುತ್ತಿರುವೆ?” ಎಂದು ಆಕ್ಷೇಪಿಸಿದ. ರೈತ, “”ಏನಣ್ಣ ಇದು, ನಿನ್ನೆ ಮೇಯಲು ಬಂದ ನನ್ನ ಹಸು ಮರಳಿ ಬಾರದೆ ನಿಮ್ಮ ಹಸು ಮಂದೆಯನ್ನು ಸೇರಿಕೊಂಡಿದೆ ಅಷ್ಟೇ. ನಾನೇನು ಸುಳ್ಳು ಹೇಳುತ್ತೇನೆಯೆ?” ಎಂದು ಹೇಳಿದ.
Related Articles
Advertisement
“”ಮಹಾರಾಜರೇ, ಇದು ಒಗಟಿನ ಚೀಲ. ಇದರಲ್ಲಿ ಮೂರು ಪ್ರಾಣಿಗಳ ಮೂಳೆಗಳಿವೆ. ಒಂದು ಪ್ರಾಣಿ ಕೋಪದಿಂದ, ಇನ್ನೊಂದು ನಿದ್ರೆಯಿಂದ, ಕೊನೆಯದು ದುರಾಶೆಯಿಂದ ಒಂದೇ ಕಡೆ ಸತ್ತಿವೆ. ಇದು ಹೇಗೆ ಆಯಿತು ಎಂಬುದು ಒಗಟು. ಯಾರಾದರೂ ನಿಜವಾದ ಕಾರಣ ಹೇಳುತ್ತಾರೆಯೇ ಎಂದು ಈ ಮೂಟೆ ಹೊತ್ತು ತಿರುಗಾಡಿದೆ. ಇದರ ರಹಸ್ಯವನ್ನು ಬಿಡಿಸಲು ಮುಂದೆ ಬಂದವರಿಗೆಲ್ಲ ಅವಕಾಶ ನೀಡಿದೆ. ಆದರೂ ಯಾರೂ ಸಫಲರಾಗಲಿಲ್ಲ. ಬಸವಳಿದು ನಾನು ಮುದುಕನಾದೆ. ಆಗ ಯಾರೋ ಒಬ್ಬರು ಇದಕ್ಕೆ ಸಮಾಧಾನ ಹೇಳಲು ನೀವೊಬ್ಬರೇ ಸಮರ್ಥರು, ನಿಮ್ಮಂಥ ಬುದ್ಧಿವಂತರು ಬೇರೊಬ್ಬರಿಲ್ಲ ಎಂದು ಹೇಳಿದ ಕಾರಣ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿತು ನರಿ.
ರಾಜ ಹೆಮ್ಮೆಯಿಂದ ಮೀಸೆ ತಿರುವಿದ. “”ನೀನು ಸರಿಯಾದ ಸ್ಥಳಕ್ಕೆ ಬಂದಿರುವೆ. ಇದರ ಕಾರಣವನ್ನು ಅರೆಕ್ಷಣದಲ್ಲಿ ನಾನು ಹೇಳಿಬಿಡಲೆ?” ಎಂದು ಕೇಳಿದ. “”ತುಂಬ ಸಂತೋಷ. ನೀವೇ ಇದರ ರಹಸ್ಯ ಬಿಡಿಸಿ ದೊಡ್ಡವರಾಗಿ. ಆದರೆ ನೀವು ಸೋತುಹೋದರೆ ನನಗೆ ಒಂದು ಹಸುವಿನ ತೂಕದಷ್ಟೇ ಚಿನ್ನ ಕೊಡಲು ತಪ್ಪಬಾರದು. ಹಾಗೆಂದು ಪತ್ರದಲ್ಲಿ ಬರೆದುಕೊಡಬೇಕು. ಇದಕ್ಕೆ ನೀವು ಸಿದ್ಧರಿಲ್ಲವಾದರೆ ನಾನು ಹೋಗಿಬಿಡುತ್ತೇನೆ” ಎಂದಿತು ನರಿ. “”ಅದಕ್ಕೇನಂತೆ. ನಾನು ಗೆಲ್ಲುವ ವಿಚಾರದಲ್ಲಿ ಸಂದೇಹವಿಲ್ಲ. ಆದರೂ ಲಿಖೀತವಾಗಿ ಬರೆದುಕೊಡುತ್ತೇನೆ” ಎಂದು ಹೇಳಿ ರಾಜನು ಪತ್ರವನ್ನು ಬರೆದುಕೊಟ್ಟ. ನರಿ ಪತ್ರವನ್ನು ಸ್ವೀಕರಿಸಿ, “”ಸರಿ, ಉತ್ತರ ಹೇಳಿ” ಎಂದು ಕೇಳಿತು. ರಾಜನು, “”ಪ್ರಶ್ನೆಗೆ ಉತ್ತರ ಸುಲಭ. ಮೂರು ಪ್ರಾಣಿಗಳ ಮೇಲೂ ಏಕಕಾಲದಲ್ಲಿ ಸಿಡಿಲು ಬಡಿದು ಅವು ಸತ್ತಿರಬೇಕು” ಎಂದು ಹೇಳಿದ.
“”ಇಲ್ಲ ದೊರೆಯೇ, ಇದು ನಿಜವಾದ ಕಾರಣ ಅಲ್ಲ. ಸತ್ಯವೇನೆಂಬುದನ್ನು ನೀವೇ ಕೇಳಿ. ಒಂದು ಆನೆ ರಾತ್ರೆ ಕಾಡಿನಲ್ಲಿ ಮಲಗಿ ನಿದ್ರಿಸುತ್ತ ಇತ್ತು. ವಿಷದ ಹಾವೊಂದು ಅಲ್ಲಿಗೆ ಹರಿದಾಡುತ್ತ ಬಂತು. ನಿದ್ರೆಯಲ್ಲಿರುವ ಆನೆ ಅದನ್ನು ತಿಳಿಯದೆ ಹಾವಿನ ಮೇಲೆ ಕಾಲಿಟ್ಟಿತು. ಹಾವು ಕೋಪಗೊಂಡು ಆನೆಯನ್ನು ಕಚ್ಚಿತು. ಆನೆ ಎಚ್ಚೆತ್ತು ಹಾವನ್ನು ತುಳಿದು ಸಾಯಿಸಿತು. ಹೀಗೆ ನಿದ್ರೆಯಿಂದ ಆನೆ, ಕೋಪದಿಂದ ಹಾವು ಪ್ರಾಣಬಿಟ್ಟವು. ಸ್ವಲ್ಪ$ ಹೊತ್ತಿನಲ್ಲಿ ಒಂದು ನರಿ ಅಲ್ಲಿಗೆ ಬಂದು ಸತ್ತಿರುವ ಆನೆಯನ್ನು ಕಂಡು ದುರಾಶೆಯಿಂದ ಕುಣಿದಾಡಿತು. ಈ ಆನೆಯ ದೇಹದ ಒಳಗೆ ಹೋದರೆ ವರ್ಷಗಟ್ಟಲೆ ಮಾಂಸವನ್ನು ತಿನ್ನುತ್ತ ಹಬ್ಬ ಮಾಡಬಹುದು ಎನ್ನುತ್ತ ಆನೆಯ ಚರ್ಮವನ್ನು ಕೊರೆದು ಒಳಗೆ ಪ್ರವೇಶಿಸಿ ಮಾಂಸವನ್ನು ತಿನ್ನತೊಡಗಿತು. ಆದರೆ ಬಿಸಿಲಿನಿಂದಾಗಿ ಆನೆಯ ಚರ್ಮ ಒಣಗಿ ಅದರ ರಂಧ್ರ ಮುಚ್ಚಿಹೋಯಿತು ಒಳಗೆ ಸೇರಿದ್ದ ನರಿ ಉಸಿರುಗಟ್ಟಿ ಜೀವ ತೊರೆಯಿತು. ಮಹಾರಾಜಾ, ಒಂದೇ ಕಡೆ ಮೂರು ಕಾರಣದಿಂದ ಪ್ರಾಣಿಗಳು ಹೇಗೆ ಸತ್ತು ಹೋದವೆಂಬುದನ್ನು ಬುದ್ಧಿವಂತರಾದರೂ ಊಹಿಸಲು ನಿಮ್ಮಿಂದ ಆಗಲಿಲ್ಲ” ಎಂದು ನರಿ ರಹಸ್ಯವನ್ನು ಬಿಡಿಸಿತು.
ರಾಜನು ಸೋತು ತಲೆತಗ್ಗಿಸಿದ. ನರಿಗೆ ಪತ್ರದಲ್ಲಿ ಬರೆದುಕೊಟ್ಟ ಪ್ರಕಾರ ಒಂದು ಹಸುವಿನ ತೂಕದಷ್ಟು ಬಂಗಾರವನ್ನು ಕೊಟ್ಟು ಕಳುಹಿಸಿದ. ನರಿ ಅದನ್ನು ಮೂಟೆ ಕಟ್ಟಿ ತಂದು ರೈತನ ಮುಂದೆ ಇರಿಸಿತು. ರೈತ ವಿಸ್ಮಯದಿಂದ ಕಣ್ಣರಳಿಸಿ ನೋಡಿ, “”ಏನಿದು, ಎಲ್ಲಿಂದ ತಂದೆ?” ಎಂದು ಕೇಳಿದ. “”ತೆಗೆದುಕೋ, ಈ ಬಂಗಾರದಲ್ಲಿ ನೂರು ಹಸುಗಳನ್ನು ಕೊಳ್ಳಬಹುದು. ನಿನಗೆ ಆದ ಅನ್ಯಾಯವನ್ನು ಸರಿಪಡಿಸಿದ್ದೇನೆ. ಪ್ರತಿಯಾಗಿ ಒಂದು ಬುಟ್ಟಿ ಸೌತೆಕಾಯಿ ಕೊಟ್ಟುಬಿಡು” ಎಂದಿತು ನರಿ.
ಪ. ರಾಮಕೃಷ್ಣ ಶಾಸ್ತ್ರಿ