Advertisement
ಗುಜರಾತ್ ರಾಜ್ಯವು ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದೆ. ಹೀಗಾಗಿ ಸಹಜವಾಗಿಯೇ ರಾಜಕೀಯ ಚಟುವಟಿಕೆಗಳು ವೇಗ ಪಡೆಯುತ್ತಿವೆ. ಆದರೆ ಈ ವೇಳೆಯಲ್ಲೇ ಅತ್ತ ಕಾಂಗ್ರೆಸ್ ಪಕ್ಷದಿಂದ ಮಾತ್ರ ಗಾಬರಿ ಮತ್ತು ಹತಾಶೆಯು ವಿಧವಿಧ ರೂಪದಲ್ಲಿ ಎದುರಾಗುತ್ತಿದೆ. ಪ್ರತಿ ದಿನವೂ ಮಾಧ್ಯಮಗಳಲ್ಲಿ ಇದರ ಝಲಕ್ ಸಿಗುತ್ತಿದೆ.
Related Articles
Advertisement
ಕಾಂಗ್ರೆಸ್ ಸೇರಿದ ಕಾಂಗ್ರೆಸ್ಸಿಗ!: ಈಗ ರಾಹುಲ್ ಗಾಂಧಿಯವರ ರಹಸ್ಯ ಭೇಟಿಗಳ/ಮಾತುಕತೆಗಳ ಬಗ್ಗೆ ಚರ್ಚೆ ಮಾಡೋಣ ಬನ್ನಿ. ಎಷ್ಟಿದ್ದರೂ ಕೊನೆಗೆ ಕಾಂಗ್ರೆಸ್ ಜನರ ನಡುವೆಯೇ ಹೋಗಲೇಬೇಕಲ್ಲವೇ? ಹಾಗಿದ್ದರೆ ಜನರೆದುರು ಮುಕ್ತ ಅಜೆಂಡಾದೊಂದಿಗೆ, ಬಹಿರಂಗ ನೀತಿಗಳೊಂದಿಗೆ ಏಕೆ ಎದುರಾಗುತ್ತಿಲ್ಲ? ಅದನ್ನು ಬಿಟ್ಟು ಈ ರಹಸ್ಯ ಭೇಟಿಗಳೇಕೆ ಬೇಕು? ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಭ್ರಮೆಯ ರಾಜಕೀಯ ನಡೆಸುವುದೇ ಜಾಸ್ತಿ ಇಷ್ಟವೆನಿಸುತ್ತದೆ. ರಾಹುಲ್ ಗಾಂಧಿಯವರು ಗುಜರಾತ್‌ನ ಯುವಕ ಅಲ್ಪೇಶ್ ಠಾಕೂರ್‌ನನ್ನು ಭೇಟಿಯಾದರು. ಈ ಭೇಟಿಯ ನಂತರ ಅಲ್ಪೇಶ್ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡುಬಿಟ್ಟರು. ಆದರೆ ಇದೂ ಕೂಡ ಭಾಮಕ ತಥ್ಯ! ಸತ್ಯವೇನೆಂದು ಗೊತ್ತೇ? ಈ ಅಲ್ಪೇಶ್ ಠಾಕೂರ್ ಹಿಂದೊಮ್ಮೆ ಕಾಂಗ್ರೆಸ್‌ನ ಪರವಾಗಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಅಖಾಡಕ್ಕಿಳಿದು ಸೋಲನುಭವಿಸಿದ್ದ. ಹಾಗಿದ್ದರೆ ರಾಹುಲ್ ಗಾಂಧಿ ಮತ್ತು ಅವರ ಪಕ್ಷ ಮೊದಲಿನಿಂದಲೂ ಕಾಂಗ್ರೆಸ್ಸಿಗನಾಗಿರುವ ಅಲ್ಪೇಶ್ ಠಾಕೂರ್‌ನನ್ನು ಮತ್ತೂಮ್ಮೆ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದ ಢೋಂಗಿ ನಾಟಕವಾಡಿತೇಕೆ? ಹೀಗೆ ಮಾಡಲು ಕಾರಣವೇನು? ಇದು ತೆಗೆದುಹಾಕುವಂಥ ಪ್ರಶ್ನೆ ಅಲ್ಲವೇ ಅಲ್ಲ. ತನ್ನದೇ ಪಕ್ಷದ ನಾಯಕನನ್ನು ತನ್ನದೇ ಪಕ್ಷಕ್ಕೆ ಸೇರಿಸಿಕೊಳ್ಳುವ ಇಂಥ ಅಪರೂಪದ ವಿದ್ಯಮಾನ ಬಹುಶಃ ದೇಶದಲ್ಲಿ ಇದೇ ಮೊದಲು ನಡೆದಿರಬೇಕು!
ಸರಿಬಿಡಿ, ಈಗ ಮೂಲ ಪ್ರಶ್ನೆಗೆ ಬರೋಣ. ಒಂದು ವೇಳೆ ನಾವು ಗಮನಕೊಟ್ಟು ವಿಚಾರ ಮಾಡಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಸ್ವಾತಂತ್ರಾ ನಂತರದ ಅತಿದೊಡ್ಡ ಸತ್ಯವೇನೆಂದರೆ ಕಾಂಗ್ರೆಸ್ ಪಕ್ಷ ಇದುವರೆಗೂ ಯಾರಿಗೂ ನ್ಯಾಯ ಒದಗಿಸಿಲ್ಲ, ಆದರೆ ಎಲ್ಲರಿಗೂ ಅನ್ಯಾಯವನ್ನಂತೂ ಮಾಡಿದೆ. ಹೀಗಾಗಿ ಗುಜರಾತ್‌ನಲ್ಲಿ ಕಾಂಗ್ರೆಸ್‌ಗೆ ಸಮಸ್ಯೆಗಳ/ವಿಚಾರಗಳ ಆಧಾರದ ಮೇಲೆ ಮಾತನಾಡುವುದಕ್ಕೆ ಅದರ ಬಳಿ ಏನೇನೂ ಉಳಿದಿಲ್ಲ. ಇದೇ ಕಾರಣದಿಂದಲೇ ಇದುವರೆಗೂ ಕಾಂಗ್ರೆಸ್‌ಗೆ ಗುಜರಾತ್‌ನಲ್ಲಿ ದಶಕಗಳಿಂದ ಆಡಳಿತ ನಡೆಸುತ್ತಾ ಬಂದಿರುವ ಬಿಜೆಪಿ ಸರ್ಕಾರದ ಅಭಿವೃದ್ಧಿ ರಾಜಕಾರಣದ ಮೇಲೆ ಯಾವುದೇ ವಾಸ್ತವಿಕ ಪ್ರಶ್ನೆಯನ್ನು ಎದುರಿಡಲು ಸಾಧ್ಯವಾಗಿಲ್ಲ, ಜೊತೆಗೆ ಬಿಜೆಪಿ ಎದುರಿಡುತ್ತಿರುವ ಪ್ರಶ್ನೆಗಳಿಗೆ ವಾಸ್ತವಿಕ ಉತ್ತರವನ್ನು ಕೊಡುವುದಕ್ಕೂ ಆಗುತ್ತಿಲ್ಲ.
ದೇಶದ ಜನರಿಗೆ ಈಗಂತೂ ಕಾಂಗ್ರೆಸ್‌ನ ಮೇಲೆ ಮತ್ತು ಅದರ ನೇತಾರನ ಮೇಲೆ ಎಳ್ಳಷ್ಟೂ ಭರವಸೆಯಿಲ್ಲಎನ್ನುವುದು ಈ ಪಕ್ಷಕ್ಕೆ ಆಗಲೇ ಅರಿವಾಗಿದೆೆ. ಈ ಕಾರಣಕ್ಕಾಗಿಯೇ ಅದು ಇಲ್ಲದ ಸಮಸ್ಯೆಗಳನ್ನು ಹುಡುಕಲು ಪ್ರಯತ್ನಿಸುತ್ತಿದೆ.
ಅಲ್ಪೇಶ್ ಠಾಕೂರ್‌ನನ್ನು ಪರ ಮಾತನಾಡುತ್ತದೆ ಕಾಂಗ್ರೆಸ್. ಹಾಗಿದ್ದರೆ ರಾಜ್ಯಸಭೆಯಲ್ಲಿ ಓಬಿಸಿ ಕಮೀಶನ್‌ಗೆ
ಸಾಂವಿಧಾನಿಕ ಸ್ಥಾನಮಾನ ಕೊಡುವುದಕ್ಕಾಗಿ ಬಿಜೆಪಿ ಸರ್ಕಾರ ಎದುರಿಟ್ಟಿದ್ದ ವಿಧೇಯಕವನ್ನು ಇದೇ ಕಾಂಗ್ರೆಸ್ ಪಕ್ಷ ವಿರೋಧಿಸಿದ್ದು ಏಕೆ? ಗುಜರಾತ್‌ನ ಜನತೆ ಮೊದಲಿನಿಂದಲೂ ಸಕಾರಾತ್ಮಕ ಮತ್ತು ವಿಕಾಸವಾದಿ ದೃಷ್ಟಿಕೋನದಿಂದ ಮುನ್ನಡೆಯುತ್ತಾ ಬಂದವರು. ಹೀಗಿರುವಾಗ ರಾಹುಲ್ ಗಾಂಧಿಯವರಿಗಾಗಲಿ ಅಥವಾ ಅವರ ಪಕ್ಷದ ಬಳಿಯಾಗಲಿ ಗುಜರಾತಿಗರಿಗೆ ಸರಿಹೋದುವಂಥ ಮಾಡಲ್ ಇಲ್ಲ. ಇವರೇನಿದ್ದರೂ ನಕಾರಾತ್ಮಕ ಅಜೆಂಡಾದ ಮೇಲೆ ರಾಜಕೀಯ ಮಾಡುವವರು. ಇತ್ತ ಭಾರತೀಯ ಜನತಾ ಪಕ್ಷ ಮೊದಲಿನಿಂದಲೂ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ “ಸಕಾರಾತ್ಮಕ’ ನಡೆಯಿಂದಾಗಿ ಪದೇ ಪದೆ ಜನಾದೇಶವನ್ನು ಪಡೆಯುತ್ತಲೇ ಬಂದಿದೆ. (ಲೇಖಕರು ಪ್ರಸ್ತುತ ಬಿಹಾರ ಮತ್ತು ಗುಜರಾತ್ ಬಿಜೆಪಿಯ ಉಸ್ತುವಾರಿ)
ಭೂಪೇಂದ್ರ ಯಾದವ್, ಬಿಜೆಪಿ ಸಂಸದ