Advertisement

ಕಥೆ: ಆಕಾಶ ಯಾಕಿಷ್ಟು ದೂರ?

11:22 AM Mar 02, 2017 | |

ನೂರು, ಲಕ್ಷ, ಕೋಟಿ ವರ್ಷಗಳ ಹಿಂದೆ ಆಕಾಶ, ಭೂಮಿಗೆ ತುಂಬಾ ಸಮೀಪದಲ್ಲಿತ್ತಂತೆ. ಆಗ ಆಕಾಶವನ್ನು ಹಗಲಿನಲ್ಲಿ ಸೂರ್ಯ ಮತ್ತು ರಾತ್ರಿಯ ವೇಳೆ ಚಂದ್ರ ಕಾವಲು ಕಾಯುತ್ತಿದ್ದರು. ಸೂರ್ಯ ಮತ್ತು ಚಂದ್ರನಿಗೆ ಒಬ್ಬರು ಅಜ್ಜಿ ಇದ್ದರು. 

Advertisement

ತುಂಬಾ ತುಂಬಾ ವರ್ಷಗಳ ಹಿಂದೆ ಅಂದರೆ, ನೂರು, ಲಕ್ಷ, ಕೋಟಿ ವರ್ಷಗಳ ಹಿಂದೆ ಆಕಾಶ ನಮಗೆ ಅಂದರೆ ಭೂಮಿಗೆ ತುಂಬಾ ಸಮೀಪದಲ್ಲಿತ್ತಂತೆ. ಆಗ ಆಕಾಶವನ್ನು ಹಗಲಿನಲ್ಲಿ ಸೂರ್ಯ ಮತ್ತು ರಾತ್ರಿಯ ವೇಳೆ ಚಂದ್ರ ಕಾವಲು ಕಾಯುತ್ತಿದ್ದರು. ಸೂರ್ಯ ಮತ್ತು ಚಂದ್ರನಿಗೆ ಒಬ್ಬರು ಅಜ್ಜಿ ಇದ್ದರು. ಅವರು ಸೂರ್ಯ ಮತ್ತು ಚಂದ್ರನಿಗೆ ದಿನವೂ ಅಡುಗೆ ಮಾಡಿ ಬಡಿಸುತ್ತಿದ್ದರು. ಸೂರ್ಯ ಬೆಳ್ಳಂಬೆಳಗ್ಗೆಯೇ ಎದ್ದು ಅಜ್ಜಿ ಮಾಡಿಕೊಟ್ಟ ಬಿಸಿಬಿಸಿ ಊಟ ತಿಂದು, ಆಕಾಶ ಕಾಯಲು ಹೊರಡುತ್ತಿದ್ದ. ಹಗಲೆಲ್ಲಾ ಆಕಾಶವನ್ನು ಕಾದು ಮುಸ್ಸಂಜೆ ಮನೆಗೆ ಬರುತ್ತಿದ್ದ. ಆಗಲೂ ಅಜ್ಜಿ ಮಾಡಿಕೊಡುವ ಬಿಸಿಬಿಸಿ ಊಟ ಮಾಡಿ ಮಲಗುತ್ತಿದ್ದ. ಹಾಗೆಯೇ ಚಂದ್ರನೂ ಹಗಲೆಲ್ಲಾ ಮನೆಯಲ್ಲಿದ್ದು, ಕತ್ತಲಾಗುವ ಮುನ್ನವೇ ಅಜ್ಜಿ ಬೆಳಗ್ಗೆ ಮಾಡಿಟ್ಟ ತಣ್ಣನೆಯ ಊಟ ಮಾಡಿ, ಆಕಾಶ ಕಾಯಲು ಹೋಗುತ್ತಿದ್ದ. ರಾತ್ರಿಯೆಲ್ಲಾ ಆಕಾಶವನ್ನು ಕಾದು ಬೆಳಗಿನ ಜಾವಕ್ಕೆ ಬಂದು ಮತ್ತೆ ರಾತ್ರಿ ಅಜ್ಜಿ ಮಾಡಿಟ್ಟಿದ್ದ ತಣ್ಣನೆಯ ಊಟ ಮಾಡಿ ಮಲಗುತ್ತಿದ್ದ. 

ಒಂದು ದಿನ ಬೆಳಗ್ಗೆ ಸೂರ್ಯ ಎಂದಿಗಿಂತ ಮುನ್ನವೇ ತನ್ನ ಕೆಲಸಕ್ಕೆ ಹೊರಟಿದ್ದ. ಚಂದ್ರ ಭೂಮಿಗೆ ಬರಲು ಇನ್ನೂ ಸ್ವಲ್ಪ ಸಮಯವಿತ್ತು. ಆಗ ಅಜ್ಜಿ ಮನೆಯಲ್ಲಿ ಯಾರೂ ಇಲ್ಲ, ಮನೆಯನ್ನು ಸ್ವತ್ಛ ಮಾಡೋಣವೆಂದುಕೊಂಡರು. ಅಜ್ಜಿ ಬಗ್ಗಿಕೊಂಡು ಬಟ್ಟೆಯಿಂದ ಧೂಳು ಕೊಡವುತ್ತಿದ್ದರು. ಆ ವೇಳೆ ಬೆನ್ನಿನ ಮೇಲೆ ಏನೋ ತಾಗಿದಂತೆ ಭಾಸವಾಯಿತು. ತಲೆ ತಿರುಗಿಸಿ ನೋಡಿದರೆ ಆಕಾಶ ಬೆನ್ನಿಗೆ ತಾಗುತ್ತಿತ್ತು. ಅಜ್ಜಿಗೆ ತುಂಬಾ ಸಿಟ್ಟು ಬಂದಿತು. ಕೆಲಸ ಮಾಡುವಾಗ ಇದೊಂದು ಅಡ್ಡ ಬರಬೇಕೆ ಎಂದು ಕೈಯಲ್ಲಿದ್ದ ಬಟ್ಟೆಯಿಂದ ಒಂದೇಟು ಹಾಕಿದರು. ಅದು ಸ್ವಲ್ಪವಷ್ಟೇ ಮೇಲೆ ಹೋಗಿ ಮತ್ತೆ ಅಜ್ಜಿಯ ಬೆನ್ನಿಗೆ ತಾಗುತ್ತಿತ್ತು. ಅಜ್ಜಿಗೆ ಮತ್ತೆ ಸಿಟ್ಟು ಬಂದಿತು. ಮೂಲೆಯಲ್ಲಿದ್ದ ದೊಣ್ಣೆ ಹಿಡಿದು ಜೋರಾಗಿ ಬೀಸಿದರು.

ಕೂಡಲೇ ಆಕಾಶಕ್ಕೆ ಎಲ್ಲಿಲ್ಲದ ಸಿಟ್ಟು ಬಂದಿತು. ಆಗ ಆಕಾಶ ಅಂದುಕೊಳ್ಳುತ್ತೆ: “ಈ ಭೂಮಿಯ ಸುತ್ತಮುತ್ತ ಇರಲೇಬಾರದು, ಇನ್ನೆಂದೂ ಇತ್ತ ಬರುವುದಿಲ್ಲ’ ಎಂದು ದೂರದೂರಕ್ಕೆ… ದೂರ ದೂರಕ್ಕೆ ಹೋಗಿಬಿಡಬೇಕು ಅಂದುಕೊಂಡು ಎತ್ತರಕ್ಕೆ ಹಾರಿಹೋಯಿತು. ಆಮೇಲೆ ಸೂರ್ಯ ಚಂದ್ರರೂ ತುಂಬಾ ಕೆಳಗಿದ್ದ ಭೂಮಿಗೆ ಬರಲಾಗದೆ ಅಲ್ಲಿಯೇ ಉಳಿದುಬಿಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next