Advertisement

ವಾರಾಂತ್ಯದಲ್ಲಿ ಜಿಗಿದ ಷೇರು ಮಾರುಕಟ್ಟೆ

12:48 AM Feb 04, 2023 | |

ಹೊಸದಿಲ್ಲಿ: ಅದಾನಿ ಪರಿಣಾಮದಿಂದಾಗಿ ಒಂದು ವಾರದಿಂದ ಕುಸಿತದ ಹಾದಿಯಲ್ಲಿದ್ದ ಮುಂಬಯಿ ಷೇರುಪೇಟೆ ವಾರಾಂತ್ಯದಲ್ಲಿ ಚೇತರಿಕೆಯೊಂದಿಗೆ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್‌  ಮತ್ತು ನಿಫ್ಟಿ  ಎರಡರಲ್ಲೂ ಏರಿಕೆ ಕಂಡು ಬಂದಿದ್ದು, ಹೂಡಿಕೆದಾರರಿಗೆ ಒಂದಷ್ಟು ಖುಷಿ ಸಿಕ್ಕಿದೆ.

Advertisement

ಶುಕ್ರವಾರ ಬೆಳಗಿನಿಂದ ಮುಂಬಯಿ ಷೇರುಪೇಟೆ ಏರಿಕೆಯ ಹಾದಿಯಲ್ಲೇ ಇತ್ತು. ದಿನದ ಅಂತ್ಯಕ್ಕೆ 909.64 ಅಂಕಗಳೊಂದಿಗೆ 60,841.88ರಲ್ಲಿ ಮುಕ್ತಾಯವಾಯಿತು. ಇದು  ಶೇ. 1.52ರಷ್ಟು ಏರಿಕೆ. ಅತ್ತ ಎನ್‌

ಎಸ್‌ಇ ನಿಫ್ಟಿ  ಕೂಡ 243.65 ಅಂಕಗಳ ಏರಿಕೆಯೊಂದಿಗೆ 17,854.05ಕ್ಕೆ ವಹಿವಾಟು ಮುಗಿಸಿತು. ಇದು ಶೇ.1.38ರಷ್ಟು ಏರಿಕೆ.

ವಾರವಿಡೀ ಕುಸಿತದ ಹಾದಿಯಲ್ಲೇ ಇದ್ದ ಅದಾನಿ ಗ್ರೂಪ್‌ನ ಕೆಲವು ಕಂಪೆನಿಗಳ ಷೇರುಗಳು ಕೂಡ ಶುಕ್ರವಾರ ಏರಿಕೆ ಕಂಡವು. ಶುಕ್ರವಾರ ಷೇರುಪೇಟೆಯ ಚೇತರಿಕೆಗೆ ಪ್ರಮುಖ ಕಾರಣ ಬ್ಯಾಂಕಿಂಗ್‌ ಮತ್ತು ಜಾಗತಿಕ ಮಾರುಕಟ್ಟೆಗಳ ವಿದ್ಯಮಾನಗಳು.

Advertisement

Udayavani is now on Telegram. Click here to join our channel and stay updated with the latest news.

Next