Advertisement

ತಾಯಿ ಇದ್ದರೆ ತಾನೇ ಮಲತಾಯಿ ಧೋರಣೆ?

11:11 PM Oct 13, 2019 | Lakshmi GovindaRaju |

ಬಾಗಲಕೋಟೆ: ಪ್ರವಾಹ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರ, ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್‌ ರಮೇಶಕುಮಾರ್‌, ತಾಯಿ ಇದ್ದರೆ ತಾನೇ ಮಲತಾಯಿ? ಪ್ರಧಾನಿ ಮೋದಿಗೆ ತಾಯಿ ಹೃದಯವೇ ಇಲ್ಲ. ಮಲತಾಯಿ ಮನೆಯ ಲ್ಲಾದರೂ ಇಟ್ಟುಕೊಳ್ಳುತ್ತಾಳೆ. ಆದರೆ, ಕೇಂದ್ರ ಸರ್ಕಾರದ ನೀತಿ ಅದಕ್ಕಿಂತಲೂ ಅಧ್ವಾನವಾಗಿದೆ ಎಂದು ಟೀಕಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ತಾಯಿ ಹೃದಯವೇ ಇಲ್ಲದವರು, ಮಲತಾಯಿ ರೀತಿಯೂ ನಡೆದುಕೊಳ್ಳಲ್ಲ. ಅಧಿವೇಶನ ವೇಳೆ ಕ್ಯಾಮರಾ ಒಳಗಡೆ ಬಿಡಬೇಡಿ ಎಂಬ ನಿರ್ಣಯ ದುಃಖಕರ. ಹಿಂದೆ ಇಂದಿರಾ ಗಾಂಧಿ ಅವರನ್ನು ಬಿಜೆಪಿಯವರು ಸರ್ವಾಧಿಕಾರಿ ಧೋರಣೆ, ಮಾಧ್ಯಮಗಳ ಕತ್ತು ಹೊಸಕಿ ಹಾಕಿದ್ದಾರೆ ಎಂದಿದ್ದರು. ಇಂದು ಕಾಶ್ಮೀರದಲ್ಲಿ ಏನಾಗುತ್ತಿದೆ? ಅಲ್ಲಿನ ವಿಚಾರಗಳು ಹೊರಗೆ ಬರುತ್ತಿವೆಯೇ? ಕಾಶ್ಮೀರ ಪ್ರತಿಬಿಂಬವೇ ಕರ್ನಾಟಕ ವಿಧಾನಸಭೆಯಲ್ಲಿ ಕಾಣುತ್ತಿದೆ ಎಂದರು.

ಮೂಲ-ವಲಸಿಗರು; ಅಸ್ಪೃಶ್ಯತೆ ಇದ್ದಂತೆ: ಒಂದು ಸಲ ಕಾಂಗ್ರೆಸ್‌ನಲ್ಲಿ ಕಾಲಿಟ್ಟ ಮೇಲೆ ಎಲ್ಲವೂ ಕಾಂಗ್ರೆಸ್‌. ಹಳೆಯದು, ಹೊಸದು ಎಂದಿಲ್ಲ. ಆದರೂ, ಸ್ವಲ್ಪ ಏನೇನೋ ಇರುತ್ತವೆ. ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ ಕಾಯಿದೆ ಇದೆ. ಹಾಗಂತ ಅಸ್ಪೃಶ್ಯತೆ ಸಂಪೂರ್ಣ ಹೋಗಿದೆಯೇ? ಹಾಗೆಯೇ ನಮ್ಮಲ್ಲೂ ಮೂಲ, ವಲಸಿಗರು ಎಂಬುದು ಇರುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next