Advertisement
ಮಹಾನ್ ವ್ಯಕ್ತಿಗಳ ಸಾಧನೆ, ತತ್ವ ಗುಣಗಳನ್ನು ಗೌರವಿಸಿ ಜನರಿಗೆ ತಿಳಿಸುವ ಉದ್ದೇಶದಿಂದ ಅವರ ಪ್ರತಿಮೆ ಅಥವಾ ಪುತ್ಥಳಿಗಳನ್ನು ರಸ್ತೆ ಬದಿ, ಮುಖ್ಯ ವೃತ್ತಗಳಲ್ಲಿ ನಿರ್ಮಾಣ ಮಾಡುವುದು ಸಾಮಾನ್ಯ. ಅದರಂತೆಯೇ ರೇಸ್‌ಕೋರ್ಸ್ ವೃತ್ತದಲ್ಲಿ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ರಸ್ತೆ ದಿಕ್ಕಿಗೆ ಪ್ರತಿಮೆಯೊಂದನ್ನು ನಿರ್ಮಿಸಿದ್ದಾರೆ. ಆದರೆ, ಅದನ್ನು ಅನಾವರಣಗೊಳಿಸುವ ಗೋಜಿಗೆ ಬಿಬಿಎಂಪಿಯಾಗಲಿ ಅಥವಾ ನಿರ್ಮಾಣ ಮಾಡಿದವರಾಗಲಿ ಹೋಗಿಲ್ಲ.
Related Articles
Advertisement
ಸರ್ಕಾರೇತರ ಸಂಸ್ಥೆಯೊಂದು ಒಡೆಯರ ಪ್ರತಿಮೆ ನಿರ್ಮಿಸುಲು ಅನುಮತಿ ಕೋರಿದಾಗ ಪಾಲಿಕೆಯಿಂದ ಒಪ್ಪಿಗೆ ನೀಡಲಾಗಿತ್ತು. ಸಂಸ್ಥೆಯವರೇ ಸ್ವಂತ ಖರ್ಚಿನಲ್ಲಿ ಪ್ರತಿಮೆ ನಿರ್ಮಿಸಿದ್ದು, ತಾವು ನಿರ್ಮಾಣ ಕಾರ್ಯಕ್ಕೆ ಅಗತ್ಯ ಸಹಕಾರ ನೀಡಿದ್ದೇವೆ. ಆದರೆ, ಪ್ರತಿಮೆ ನಿರ್ಮಾಣಗೊಂಡ ಬಳಿಕ ಅನಾವರಣಗೊಳಿಸಲು ಯಾರು ಮುಂದಾಗದಿರುವುದು ಸರಿಯಲ್ಲ. -ಪದ್ಮಾವತಿ. ಮಾಜಿ ಮೇಯರ್ ಪ್ರತಿಮೆ ನಿರ್ಮಾಣವಾಗಿ ವರ್ಷವಾಗಿದ್ದರೂ, ಯಾರು ಅನಾವರಣಗೊಳಿಸಲು ಮುಂದಾಗಿಲ್ಲ. ಸದಾ ಪ್ಲಾಸ್ಟಿಕ್ ಚೀಲದಿಂದ ಮುಚ್ಚಿರುವುದರಿಂದ ದೃಷ್ಟಿಗೊಂಬೆಯಂತೆ ಭಾಸವಾಗುತ್ತದೆ. ಮಹತ್ಮರ ಪ್ರತಿಮೆ ನಿರ್ಮಿಸಿ ಅನಾವರಣಗೊಳಿಸದಿರುವುದು ಅವರಿಗೆ ಮಾಡುವ ಅವಮಾನವೇ ಸರಿ.
-ಮಂಜಪ್ಪ, ಸಾರ್ವಜನಿಕರು ಪ್ರತಿಮೆ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿ ಪಡೆದಂತಹ ಸಂಸ್ಥೆಯವನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಮುಂದಿನ ಹದಿನೈದು ದಿನಗಳಲ್ಲಿ ಸಂಸ್ಥೆಯವರು ಉದ್ಘಾಟಿಸದಿದ್ದರೆ, ಪಾಲಿಕೆಯಿಂದ ದಿನಾಂಕ ನಿಗದಿಗೊಳಿಸಿ ಪ್ರತಿಮೆ ಅನಾವರಣಗೊಳಿಸಲಾಗುವುದು.
-ಆರ್.ಸಂಪತ್‌ರಾಜ್, ಮೇಯರ್ * ಜಯಪ್ರಕಾಶ್ ಬಿರಾದಾರ್