ಅನುಮತಿ ನೀಡಬೇಕೆಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
Advertisement
ಗುರುವಾರ, ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ಪಶು ಸಂಗೋಪನಾ ಸಚಿವ ಎ. ಮಂಜು ಈ ವಿಚಾರ ತಿಳಿಸಿದ್ದಾರೆ. “”ಉದ್ದೇಶಿತ ಆನೆ ಕಾರಿಡಾರ್‌ಗೆ ಈಗಾಗಲೇ 2,500 ರೈತರು ತಮ್ಮ ಭೂಮಿ ನೀಡಲು ಮುಂದೆ ಬಂದಿದ್ದಾರೆ. ಈ ಭೂಮಿಯ ಜತೆಗೆ ಸರ್ಕಾರಿ ಭೂಮಿಯನ್ನೂ ಸೇರಿಸಿ ವಿಶಾಲವಾದ ಆನೆ ಕಾರಿಡಾರ್ ನಿರ್ಮಿಸಲುನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ನೀಡಿರುವ ಕ್ಯಾಂಫಾ ನಿಧಿಯಲ್ಲಿ ಸುಮಾರು 300 ಕೋಟಿ ರೂ.ಗಳಷ್ಟು ಹಣ ನಿರುಪಯುಕ್ತವಾಗಿ ಉಳಿದಿರುವುದರಿಂದ ಆ ಹಣವನ್ನು ಈ ಯೋಜನೆಯ ಖಾಸಗಿ ಭೂ ಸ್ವಾಧೀನಕ್ಕೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಆಲೋಚಿಸಿದೆ. ಇದಕ್ಕೆ ಕೇಂದ್ರದ ಒಪ್ಪಿಗೆ ಬೇಕಾಗಿರುವುದರಿಂದ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ” ಎಂದು ಅವರು ತಿಳಿಸಿದರು.
ಎ. ಮಂಜು, ಕರ್ನಾಟಕ ಪಶು ಸಂಗೋಪನಾ ಸಚಿವ