Advertisement

ರಾಜ್ಯದ ಐವರಿಗೆ ಯೂತ್‌ ಫಾರ್‌ ಸೇವಾ”ಚೇತನ’ಪ್ರಶಸ್ತಿ

11:09 AM Apr 14, 2017 | Team Udayavani |

ಬೆಂಗಳೂರು: ಸಮಾಜದ ಅಭಿವೃದ್ಧಿಗೆ ಸಮಯ ಮೀಸಲಿಡುವ ಯುವ ಜನರ ಸಹಾಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೂತ್‌ಫಾರ್‌ ಸೇವಾ ಸಂಸ್ಥೆ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರದ ವಿವಿಧ ಭಾಗದ ವಿದ್ಯಾರ್ಥಿಗಳನ್ನು ಗುರುತಿಸಿ ಯುವ ಚೇತನ ಪ್ರಶಸ್ತಿ ನೀಡುತ್ತಿದ್ದು, ಪ್ರಸಕ್ತ ಸಾಲಿನ 10 ಪ್ರಶಸ್ತಿಗಳ ಪೈಕಿ ಐದು ಪ್ರಶಸ್ತಿಗಳು ರಾಜ್ಯಕ್ಕೆ ಸಂದಿವೆ. 

Advertisement

ಗುರುವಾರ ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಗುಜರಾತ್‌, ಮಧ್ಯಪ್ರದೇಶ, ಚೆನ್ನೈ, ಬಿಹಾರ ಹಾಗೂ ಚಿತ್ರಕೂಟದಿಂದ 165 ನಾಮನಿರ್ದೇಶನಗೊಂಡ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅಂತಿಮವಾಗಿ 10 ಮಂದಿ ಸಾಧಕರನ್ನು ಆಯ್ಕೆ ಮಾಡಲಾಗಿತ್ತು.

ಈ ಪೈಕಿ ಕರ್ನಾಟಕದಿಂದ ಬಿಎಂಆರ್‌ಸಿಎಲ್‌ಗೆ ವೀರಸಂದ್ರ ಕೆರೆ ಸಂರಕ್ಷಣೆಗಾಗಿ (ಎಸ್‌ಎಫ್ಡಿ ತಂಡ- ಬೆಂಗಳೂರು), 1500 ರೋಗಿಗಳಿಗೆ ರಕ್ತದಾನದ ವ್ಯವಸ್ಥೆ ಮಾಡಿಸಿರುವ ಬೆಂಗಳೂರಿನ ಎಂ.ಚೇತನ್‌, ಬಿಬಿಎಂಪಿ ಸಹಯೋಗದಲ್ಲಿ 30ಕ್ಕೂ ಅಧಿಕ ಸ್ಥಳ ಸ್ವತ್ಛಗೊಳಿಸಿದ ಬೆಂಗಳೂರಿನ ಅನಿರುದ್ಧ ಎಸ್‌.ದತ್ತ, ಪೆನ್ಸಿಲ್‌ ಸುತ್ತ ಆಕರ್ಷಕ ಹೋಲ್ಡರ್‌ ತಯಾರಿಕಾ ವಿಧಾನವನ್ನು ಮಕ್ಕಳಿಗೆ ಹೇಳಿಕೊಟ್ಟ ಬೆಂಗಳೂರಿನ ಆರ್‌.ರಕ್ಷಿತ್‌, ಹೈಟೆಕ್‌ ರೈಲಿನಲ್ಲಿನ ಸಮಸ್ಯೆ ಬಗ್ಗೆ ಪರಿಣಾಮಕಾರಿ ಲೇಖನ ಪ್ರಕಟಿಸಿದ ಮೂಡಬಿದರೆಯ ಶ್ರೀ ಗೌರಿ ಎಸ್‌. ಜೋಶಿ ಅವರಿಗೆ ಯುವ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next