ನವದೆಹಲಿ: ಮಳೆ ಕೊರತೆಯಿಂದಾಗಿ ಕರ್ನಾಟಕ ದಲ್ಲಿ ಆಹಾರಧಾನ್ಯಗಳ ಉತ್ಪಾದನೆ ಶೇ.25ರಷ್ಟು ಕುಸಿತವಾಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಕೃ ತಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ. ಒಟ್ಟು 73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯುವ ಗುರಿ ಹಾಕಿಕೊಳ್ಳಲಾಗಿತ್ತು.
ಆದರೆ, 60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಗುರಿ ತಲುಪಲಾಗಿದೆ. ತಡವಾಗಿ ಮುಂಗಾರು ಆಗಮಿಸಿದ್ದರಿಂದ ರಾಗಿ ಮತ್ತು ಹುರುಳಿ ಬಿತ್ತನೆ ಮಾಡಲು ರೈತರಿಗೆ ಸೂಚಿಸ ಬೇಕಾಯಿತು ಎಂದು ಅವರು ಸುದ್ದಿಸಂಸ್ಥೆ ಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿರುವ 2 ದಿನಗಳ ಬಿತ್ತನೆ ತಂತ್ರಜ್ಞಾನಕ್ಕೆ ಸಂಬಂಧಿಸಿ ದಂತೆ ಇರುವ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವರು ನವದೆಹಲಿಗೆ ಆಗಮಿಸಿದ್ದಾರೆ. ಇಲ್ಲಿ ಮಾತನಾಡಿದ ಅವರು, ಮಳೆ ಕೊರತೆಯಿಂದಾಗಿ ಕೃಷಿಗೆ ತೀವ್ರ ಹಿನ್ನಡೆಯಾಗಿದೆ.
ಕಳೆದ ವರ್ಷ ಕರ್ನಾಟಕದಲ್ಲಿ 98.27 ಲಕ್ಷ ಟನ್‌ಗಳಷ್ಟು ಬೇಸಗೆ ಬೆಳೆ ಬೆಳೆಯಲಾಗಿತ್ತು. ಹಾಲಿ ಬೆಳೆ ವರ್ಷಕ್ಕೆ 100.80 ಲಕ್ಷ ಟನ್‌ಗಳಷ್ಟು ಗುರಿ ಹಾಕಿಕೊಳ್ಳಲಾ ಗಿತ್ತು. ಆದರೆ, ಜೂನ್ ಮತ್ತು ಜುಲೈನಲ್ಲಿ ಸರಿಯಾಗಿ ಮಳೆ ಬಾರದ ಕಾರಣ, ಬಿತ್ತನೆ ಕಾರ್ಯ ನಡೆಯಲಿಲ್ಲ. ಹೀಗಾಗಿ, ಮುಂಗಾರು ಬೆಳೆಯ ಪ್ರಮಾಣ ಶೇ.25ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.
ಶೇ.5ರಷ್ಟು ಮಾತ್ರ ಮಳೆ: ಕರ್ನಾಟಕದಲ್ಲಿ ಜೂನ್ ತಿಂಗಳ ಮಳೆಯ ಪ್ರಮಾಣ ಶೇ.5ರಷ್ಟು ಕಡಿಮೆ ಯಾಗಿದೆ. ಜುಲೈನಲ್ಲಿ ಶೇ.38ರಷ್ಟು ಮಳೆ ಕೊರತೆಯಾಗಿದೆ ಎಂದು ರೆಡ್ಡಿ ಹೇಳಿದ್ದಾರೆ. ಆಗಸ್ಟ್ ಮಧ್ಯ ಭಾಗದಿಂದ ಉತ್ತಮವಾಗಿ ಮಳೆಯಾಗ ಲಾರಂಭಿಸಿತು. ಆದರೆ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ನಿರೀಕ್ಷೆ ಮಾಡಿದಷ್ಟು ಮಳೆಯಾಗಿಲ್ಲ ಎಂದಿದ್ದಾರೆ.
ಜೂನ್-ಜುಲೈನಲ್ಲಿ ಮಳೆ ಕೊರತೆಯಾ ದದ್ದು ಬೆಳೆಗೆ ಹಿನ್ನಡೆಯಾ ಯಿತು ಎಂದು ಅವರು ಹೇಳಿದ್ದಾರೆ. ಕೃಷ್ಣಾ ಕೊಳ್ಳ ದಲ್ಲಿರುವ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಹಾಲಿ ಮುಂಗಾರಿನಲ್ಲಿ ಭರ್ತಿ ಯಾಗಿವೆ ಎಂದೂ ತಿಳಿಸಿದ್ದಾರೆ.