ಬೆಂಗಳೂರು: ರಾಜ್ಯ ಸರಕಾರ ವಿವಿಧ ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ನಿಗಮ -ಮಂಡಳಿ, ಪ್ರಾಧಿಕಾರಗಳ ನೇಮಕದಲ್ಲಿ ಪಕ್ಷ ನಿಷ್ಠ ಕಾರ್ಯಕರ್ತರು ಮತ್ತು ಮುಖಂಡರಿಗೆ ಹೆಚ್ಚು ಒತ್ತು ನೀಡಲಾಗಿದೆ. ಜತೆಗೆ ಪ್ರಾದೇಶಿಕವಾರು ಸಮತೋಲನ ಕಾಯ್ದುಕೊಳ್ಳಲಾಗಿದೆ.
ಮಣಿರಾಜ ಶೆಟ್ಟಿ- ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಗೋವಿಂದ ಜಕ್ಕಪ್ಪ ನಾಯ್ಕ- ಕರ್ನಾಟಕ ಪಶ್ಚಿಮಘಟ್ಟಗಳ ಸಂರಕ್ಷಣ ಕಾರ್ಯಪಡೆ, ಎ.ವಿ. ತೀರ್ಥರಾಮ- ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ರಘು ಕೌಟಿಲ್ಯ ಅವರನ್ನು ಮತ್ತೆ ಮೈಸೂರು ಪೇಂಟ್ಸ್ ಆಂಡ್ ವಾರ್ನಿಷ್ ನಿಯಮಿತ ಅಧ್ಯಕ್ಷರನ್ನಾಗಿ ನೇಮಿಸಿದೆ. ಗುತ್ತಿಗನೂರು ವಿರೂಪಾಕ್ಷಗೌಡ-ಕರ್ನಾಟಕ ರಾಜ್ಯ ಜವುಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಕೆ.ಪಿ. ವೆಂಕಟೇಶ್-ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಮಲ್ಲಿಕಾರ್ಜುನ ಬಸವಣಪ್ಪ ತುಬಾಕಿ- ಮದ್ಯಪಾನ ಸಂಯಮ ಮಂಡಳಿ, ಎಂ.ಎಸ್. ಕರಿಗೌಡ್ರ-ಮಾರ್ಕೆಟಿಂಗ್ ಆ್ಯಂಡ್ ಅಡ್ವರ್ಟೆಸಿಂಗ್ ಲಿ. (ಎಂಸಿಎ) ದೇವೇಂದ್ರನಾಥ ಕೆ. ನಾದ್- ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ಎಂ.ಕೆ. ಶ್ರೀನಿವಾಸ್- ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಧರ್ಮಣ್ಣ ದೊಡಮನಿ-ಕರ್ನಾಟಕ ಕುರಿ ಉಣ್ಣೆ ಅಭಿವೃದ್ಧಿ ನಿಗಮ, ಗೌತಮ ಗೌಡ-ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಎಂ. ಶಿವಕುಮಾರ್-ಕರ್ನಾಟಕ ಮೃಗಾಲಯ ಪ್ರಾಧಿಕಾರ, ಎಂ. ರೇವಣಪ್ಪ ಕೋಳಗಿ-ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಉಪಾಧ್ಯಕ್ಷ), ಬಿ.ಸಿ. ನಾರಾಯಣಸ್ವಾಮಿ-ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ, ಕಲ್ಲಾ ಶೇಷಗಿರಿ ರಾವ್- ಕಾಡಾ- ಮುನಿರಾಬಾದ್, ಜಿ. ನಿಜಗುಣ ರಾಜು-ಕಾಡಾ, ಮೈಸೂರು, ಕೆ.ವಿ. ನಾಗರಾಜ- ಖಾದಿ ಗ್ರಾಮೋದ್ಯೋಗ ಮಂಡಳಿ, ಎಂ. ಸರವಣ- ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ, ರವಿ ನಾರಾಯಣ ರೆಡ್ಡಿ- ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್, ಎಂ.ಕೆ. ವಾಸುದೇವ-ಕರ್ನಾಟಕ ಮಾರುಕಟ್ಟೆ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.