Advertisement

ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

11:20 AM Aug 31, 2018 | |

ಮೈಸೂರು: ಮಹಾನಗರ ಪಾಲಿಕೆ ಚುನಾವಣೆಗೆ ಶುಕ್ರವಾರ ಮತದಾನ ನಡೆಯಲಿದೆ. ಚುನಾವಣೆ ಮುನ್ನಾ ದಿನವಾದ ಗುರುವಾರ ನಗರದ ನಾಲ್ಕು ಕಡೆಗಳಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. ತೀವ್ರ ಕುತೂಹಲ ಮೂಡಿಸಿರುವ ಮಿನಿ ಸಮರಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 65 ವಾರ್ಡ್‌ಗಳ ಚುನಾವಣೆಗಾಗಿ ನಗರ ವ್ಯಾಪ್ತಿಯಲ್ಲಿ 815 ಮತಗಟ್ಟೆಗಳಲ್ಲಿ ತೆರೆಯಲಾಗಿದೆ.

Advertisement

ಮತದಾನ ಪ್ರಕ್ರಿಯೆಯ ಪೂರ್ವಭಾವಿಯಾಗಿ ನಗರದ ಮಹಾರಾಜ ಕಾಲೇಜು, ಮಹಾರಾಣಿ ಕಾಲೇಜು, ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಟೆರಿಷಿಯನ್‌ ಕಾಲೇಜಿನಲ್ಲಿ ನಡೆದ ಮಸ್ಟರಿಂಗ್‌ ಕಾರ್ಯದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಪಾಲ್ಗೊಂಡರು. 

ಚುನಾವಣೆಗಾಗಿ 815 ಮತಗಟ್ಟೆ ಅಧಿಕಾರಿಗಳು, 815 ಸಹಾಯಕ ಅಧಿಕಾರಿಗಳು, 1,630 ಮತಗಟ್ಟೆ ಸಿಬ್ಬಂದಿ, 326 ಹೆಚ್ಚುವರಿ ಸೇರಿದಂತೆ ಒಟ್ಟು 3,586 ಮಂದಿಯನ್ನು ನಿಯೋಜಿಸಲಾಗಿದೆ. ಹೀಗಾಗಿ ಮಸ್ಟರಿಂಗ್‌ನಲ್ಲಿ ಭಾಗವಹಿಸಿದ್ದ ಚುನಾವಣಾ ಸಿಬ್ಬಂದಿ ನೊಂದಣಿ ಮಾಡಿಕೊಂಡ ಬಳಿಕ ಮತಗಟ್ಟೆಯ ಮಾಹಿತಿ ಹಾಗೂ ಮತಯಂತ್ರದೊಂದಿಗೆ ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಚುನಾವಣಾ ಸಿಬ್ಬಂದಿಯನ್ನು ಅವರು ನಿಯೋಜನೆಗೊಂಡಿರುವ ಶಾಲಾ, ಕಾಲೇಜುಗಳಲ್ಲಿನ ಮತಗಟ್ಟೆಗಳಿಗೆ ವಾಹನಗಳ ಮೂಲಕ ತಲುಪಿಸಲಾಯಿತು. ಈ ನಡುವೆ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 50ಕ್ಕೂ ಹೆಚ್ಚು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದ ಕಾರಣ ಸ್ಥಳಗಳಿಗೆ ಬೇರೆಯವರನ್ನು ನಿಯೋಜಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next