Advertisement
ನಗರದ ರೋಟರಿ, ಹೋಮಿಯೋಪತಿ ಸಂಶೋಧನಾ ಕೇಂದ್ರ, ಶಾಂತಲಾ ಕಲಾವಿದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಛಾಯಾಗ್ರಾಹಕರಾದ ಗಣೇಶ್ ದೀಕ್ಷಿತ್ ಹಾಗೂ ರೋಟರಿ ಅಧ್ಯಕ್ಷ ಸುಭಾಷ್ ಉದ್ಘಾಟಿಸಿದರು.
Related Articles
Advertisement
ಈ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಬಿಟ್ಟರೆ, ಇಡೀ ದೇಶದಲ್ಲೇ ಜೇಡಗಳ ಛಾಯಾಚಿತ್ರ ಪ್ರದರ್ಶನ, ಕಾರ್ಯಾಗಾರ ನಡೆದಿದ್ದು ಮೈಸೂರಿನಲ್ಲೇ ಮೊದಲು. ಅದಾದ ಬಳಿಕ ಚಾಮರಾಜನಗರದಲ್ಲಿ ಎರಡನೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾಡಿನಂಥ ಪ್ರದೇಶದಲ್ಲಿ ಒಂದು ಎಕರೆ ಪ್ರದೇಶದಲ್ಲಿ 1 ಲಕ್ಷ ಜೇಡಗಳಿರುತ್ತವೆ. ಒಂದು ಜೇಡ ಒಂದು ಕೀಟ ತಿಂದರೂ, ಆ ಪರಿಸರದಲ್ಲಿ 1 ಲಕ್ಷ ಕೀಟಗಳ ನಿಯಂತ್ರಣ ಆದಂತಾಯಿತು. ಒಂದು ಜೇಡ ತನ್ನ ಬಲೆಯಲ್ಲಿ ಕನಿಷ್ಠ 5 ಕೀಟಗಳನ್ನು ಹಿಡಿದರೂ ಲಕ್ಷಾಂತರ ಕೀಟಗಳ ಸಂಹಾರವಾಗುತ್ತದೆ. ಹೀಗಾಗಿ ಜೇಡಗಳು ರೈತ ಸ್ನೇಹಿ ಎಂದು ವಿವರಿಸಿದರು.
ದೇಶದಲ್ಲಿ ವಿಷಕಾರಿ ಇಲ್ಲ: ಸಾಲ್ಟಿಸೈಡೆ, ಲಿನಿಫಿಡೆ, ಅರಾನಿಡೆ ಎಂಬ ಮೂರು ವಿಧದ ಜೇಡಗಳಿವೆ. ಜೇಡಗಳ ಬಗ್ಗೆ ತಪ್ಪು ಕಲ್ಪನೆ ಬೇಡ. ಇಡೀ ಭಾರತದಲ್ಲಿ ಮಾನವನ ಪ್ರಾಣಕ್ಕೆ ಅಪಾಯ ತರಬಲ್ಲ ವಿಷಕಾರಿ ಜೇಡ ಇಲ್ಲ. ಜೇಡಗಳು ಮಾನವ ಸ್ನೇಹಿಗಳೇ ಹೊರತು, ಅವುಗಳಿಂದ ತೊಂದರೆ ಇಲ್ಲ ಎಂದು ಹೇಳಿದರು.
ಸುಮುಖ ತಂಡದವರು ಶಿವಮೊಗ್ಗದ ಹೊಸನಗರದಲ್ಲಿ 6 ಹೊಸ ಬಗೆಯ ಜೇಡಗಳನ್ನು ಕಂಡುಹಿಡಿದಿದ್ದಾರೆ. ಇದರಲ್ಲಿ ಸಾರ್ಟಿಂಗ್ ಹ್ಯಾಟ್ ಸ್ಪೈಡರ್ ಎಂಬ ಜೇಡ, ವಿಶ್ವದ ಪ್ರಮುಖ ಆವಿಷ್ಕಾರಗಳಲ್ಲೊಂದು ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದು ಅಭಿಜಿತ್ ತಿಳಿಸಿದರು.