ಪಣಜಿ: “ದ ಸ್ಪೆಲ್ ಆಫ್ ಪರ್ಪಲ್” ಈ ಚಲನಚಿತ್ರವು ಮಹಿಳೆಯರ ಧೈರ್ಯವನ್ನು ಶ್ಲಾಘಿಸಿ ಅವರ ಶೌರ್ಯವನ್ನು ಹೊಗಳುತ್ತದೆ. ಅದೇ ಸಮಯದಲ್ಲಿ ಪಿತೃಪ್ರಧಾನ ವೈವಸ್ಥೆಯ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಮಹಿಳೆಯರ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಸಹ ಈ ಚಿತ್ರದಲ್ಲಿ ಚಿತ್ರಿಸಲಾಗಿದೆ ಎಂದು ಚಲನಚಿತ್ರ ನಿರ್ದೇಶಕಿ ಪ್ರಾಚಿ ಬಜಾನಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಣಜಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಂಗಳವಾರ ಐನಾಕ್ಸ್ ಪರಿಸರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು – ನಮ್ಮ ಸಮಾಜದಲ್ಲಿ ವಿನಾಕಾರಣ ಕೆಲವು ಹೆಂಗಸರು ಮಾಂತ್ರಿಕರು, ಕರ್ಮ ಮಾಡುವವರು ಎಂಬ ಅಭಿಪ್ರಾಯ ಹರಡಿದೆ. ಇಂತಹ ವದಂತಿಗಳನ್ನು ಕೆಲವೊಮ್ಮೆ ಅವರ ಆಸ್ತಿಯನ್ನು ದೋಚಲು ಮತ್ತು ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆಯೇ ಅವರಿಗೆ ಕಿರುಕುಳ ನೀಡಲು ಹರಡಲಾಗುತ್ತದೆ.
ಈ ಚಿತ್ರವು ಅದೇ ವಿಷಯದ ಮೇಲೆ ಅವಲಂಭಿತವಾಗಿದೆ ಮತ್ತು ಗುಜರಾತ್‍ನ ಒಂದು ಸಣ್ಣ ಬುಡಕಟ್ಟು ಹಳ್ಳಿಯ ಮಹಿಳೆಯರು ಈ ಪಿತೃಪ್ರಭುತ್ವ ವ್ಯವಸ್ಥೆಯ ಅನ್ಯಾಯದ ವಿರುದ್ಧ ಹೇಗೆ ಒಟ್ಟುಗೂಡುತ್ತಾರೆ ಮತ್ತು ಹೇಗೆ ಹೋರಾಡುತ್ತಾರೆ ಎಂದು ಈ ಚಲನಚಿತ್ರವು ಹೇಳುತ್ತದೆ ಎಂದು ನಿರ್ದೇಶಕಿ ಪ್ರಾಚಿ ಬಜಾನಿಯಾ ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಿನಿಮಾ ಅಟೋಗ್ರಾಪರ್ ರಾಜೇಶ್ ರಂಜನ್, ನಟರಾದ ಸೃಜನಾ, ಜಿಕ್ಕು ಜೋಶಿ, ಶಿಖಾ ಬಿಷ್ತ ಮಾತನಾಡಿದರು.
ಇದನ್ನೂ ಓದಿ : ಬಸ್ ಗೆ ಬೆಂಕಿ : 12 ಮಕ್ಕಳು ಸೇರಿ ನಿದ್ದೆಯ ಮಂಪರಿನಲ್ಲಿದ್ದ 45 ಪ್ರವಾಸಿಗರು ಸಜೀವ ದಹನ