ವಿಧಾನಸಭೆ: ದಕ್ಷಿಣ ಭಾರತದ ಮೊದಲ ಮುಸ್ಲಿಂ ಶಾಸಕಿಯಾಗಿ ಆಯ್ಕೆಯಾಗಿದ್ದ ಮುಕ್ತರುನ್ನೀಸಾ ಬೇಗಂ ಸದನದಲ್ಲಿ ಇಸ್ಪೀಕರ್
ಇಸ್ಪೀಕರ್ ಎಂದು ಹೇಳುತ್ತಾ ತಾವು ಪ್ರಸ್ತಾಪಿಸಬೇಕಾಗಿದ್ದನ್ನು ತಪ್ಪದೆ ಹೇಳಿ ಅದಕ್ಕೆ ಸಂಬಂಧಿಸಿದವರಿಂದ ಉತ್ತರ ಪಡೆಯಲು
ಪ್ರಯತ್ನಿಸುತ್ತಿದ್ದರು…
ಇತ್ತೀಚೆಗೆ ನಿಧನರಾದ ಮಾಜಿ ಶಾಸಕಿ ಮುಕ್ತರುನ್ನೀಸಾ ಬೇಗಂ ಅವರಿಗೆ ಸಂತಾಪ ಸೂಚಿಸುವ ವೇಳೆ ಮಾಜಿ ಶಾಸಕಿಯನ್ನು
ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದು ಹೀಗೆ.
ಮುಕ್ತರುನ್ನೀಸಾ ಬೇಗಂ ಅವರು 1985ರಲ್ಲಿ 8ನೇ ವಿಧಾನಸಭೆಗೆ ಮೈಸೂರು ಜಿಲ್ಲೆ ನರಸಿಂಹರಾಜ ಕ್ಷೇತ್ರದಿಂದ ಆಯ್ಕೆಯಾದರು. ದಕ್ಷಿಣ ಭಾರತದಲ್ಲೇ ಸದನ ಪ್ರವೇಶಿಸಿದ ಮೊದಲ ಮುಸ್ಲಿಂ ಶಾಸಕಿ ಎಂಬ ಖ್ಯಾತಿ ಅವರದ್ದಾಗಿತ್ತು ಎಂದರು.
ತಾವು ಮೊದಲ ಬಾರಿ ಶಾಸಕಿಯಾಗಿದ್ದರೂ ಸದನದಲ್ಲಿ ವಿಷಯಗಳನ್ನು ಪ್ರಸ್ತಾಪಿಸುವಲ್ಲಿ ಹಿಂದೆ ಬೀಳುತ್ತಿರಲಿಲ್ಲ. ಅವರ ಕನ್ನಡ ಅಷ್ಟೊಂದು ಸರಿ ಇರಲಿಲ್ಲ. ಸ್ಪೀಕರ್ ಅವರನ್ನು ಇಸ್ಪೀಕರ್ ಎಂದು ಹೇಳುತ್ತಿದ್ದರು. ತಾವೇನಾದರೂ ವಿಷಯ ಹೇಳಬೇಕಾದಾಗ ಇಸ್ಪೀಕರ್ ಇಸ್ಪೀಕರ್ ಎನ್ನುತ್ತಾ ಸಭಾಧ್ಯಕ್ಷರ ಅನುಮತಿ ಪಡೆದು ಎದ್ದುನಿಂತು ಮಾತನಾಡುತ್ತಿದ್ದರು ಎಂದು ನೆನಪಿಸಿಕೊಂಡರು.