Advertisement

Kannada Cinema; ಶೀಘ್ರದಲ್ಲಿ ಬಿಡುಗಡೆಯಾಗಲಿದೆ ‘ಆರಾಮ್‌ ಅರವಿಂದ ಸ್ವಾಮಿ’ ಹಾಡು

02:58 PM Dec 11, 2023 | Team Udayavani |

ನಟ ಅನೀಶ್‌ ತೇಜೇಶ್ವರ್‌ ಅಭಿನಯದ “ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Advertisement

ಈಗಾಗಲೇ ತನ್ನ ಪ್ರಮೋಷನಲ್‌ ವಿಡಿಯೋ ಮೂಲಕ ಒಂದಷ್ಟು ಗಮನ ಸೆಳೆಯುತ್ತಿರುವ “ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಅನ್ನು ಇದೇ ತಿಂಗಳು ಬಿಡುಗಡೆಯಾಗಲಿದೆ.

“ಆರಾಮ್‌ ಅರವಿಂದ್‌ ಸ್ವಾಮಿ’ ರೋಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಸಿನಿಮಾವಾಗಿದ್ದು, ಈ ಹಿಂದೆ “ನಮ್‌ ಗಣಿ ಬಿ. ಕಾಂ ಪಾಸ್‌’, “ಗಜಾನನ ಅಂಡ್‌ ಗ್ಯಾಂಗ್‌’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅಭಿ ಷೇಕ್‌ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

“ಆರಾಮ್‌ ಅರವಿಂದ್‌ ಸ್ವಾಮಿ’ ಸಿನಿಮಾದಲ್ಲಿ ನಾಯಕ ಅನೀಶ್‌ ತೇಜೇಶ್ವರ್‌ಗೆ ಜೋಡಿಯಾಗಿ ಮಿಲನಾ ನಾಗರಾಜ್‌ ಹಾಗೂ ಹೃತಿಕಾ ಶ್ರೀನಿವಾಸ್‌ ಜೋಡಿಯಾಗಿ ಅಭಿನಯಿಸಿದ್ದಾರೆ. “ಅಕಿರ’ ಸಿನಿಮಾ ಖ್ಯಾತಿಯ ಶ್ರೀಕಾಂತ್‌ ಪ್ರಸನ್ನ, “ಗುಳ್ಟು’ ಸಿನಿಮಾ ಖ್ಯಾತಿಯ ಪ್ರಶಾಂತ್‌ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

“ಆರಾಮ್‌ ಅರವಿಂದ್‌ ಸ್ವಾಮಿ’ ಸಿನಿಮಾದ ಹಾಡುಗಳಿಗೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದು, ಸಿನಿಮಾಕ್ಕೆ ಸಾಗರ್‌ ಛಾಯಾಗ್ರಹಣ, ಉಮೇಶ್‌ ಸಂಕಲನವಿದೆ.  ಬೆಂಗಳೂರು, ಕೇರಳ, ಕನಕಪುರ, ಮೈಸೂರು ಸುತ್ತಮುತ್ತ “ಆರಾಮ್‌ ಅರವಿಂದ್‌ ಸ್ವಾಮಿ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next