Advertisement

ಅಪಕ್ವ -ವಿಕೃತ ಮನಸ್ಥಿತಿ ನಾಶಕ್ಕೆ ವಿದ್ಯೆಯೇ ಪರಿಹಾರ

03:52 PM Dec 12, 2021 | Shwetha M |

ವಿಜಯಪುರ: ಅಪಕ್ವ-ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಆ ಆಧ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆಯಾಗಿದೆ ಎಂದು ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಶ್ರೀಗಳು ಹೇಳಿದರು.

Advertisement

ವಿಜಯಪುರದ ಶೃಂಗೇರಿ ಶಂಕರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಭಗವದ್ಗೀತಾ ಅಭಿಯಾನದ ಕುರಿತು ಮಾತನಾಡಿ, ಇಂದು ಮಾನವ ಅನೇಕ ವಿಕಾರಗಳಿಗೆ ಬಲಿಯಾಗುತ್ತಿದ್ದಾನೆ. ವಿಕೃತವಾದ ಮನಸ್ಸು ಆಡ್ಡ ದಾರಿಯನ್ನು ಹಿಡಿಸುತ್ತಿದೆ ಎಂದು ವಿಷಾದಿಸಿದರು.

ಭಗವದ್ಗೀತೆ ಮೂಲಕ ಸಮಾಜದಲ್ಲಿ ಸುಃಖ-ಶಾಂತಿ ನೆಲೆಸುವಂತೆ ಹಾಗೂ ಪ್ರತಿ ವ್ಯಕ್ತಿಯನ್ನು ಸುಸಂಸ್ಕೃತನನ್ನಾಗಿ ರೂಪಿಸುವುದಕ್ಕೆ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದಿಂದ 2007ರಿಂದ ನಾಡಿನಾದ್ಯಂತ ಭಗವದ್ಗೀತಾ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ವಿವರಿಸಿದರು.

ಇಲ್ಲಿವರೆಗೆ ಈ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನಾಡಿನಾದ್ಯಂತ ನಡೆಸಲಾಗಿದ್ದು, ಆದರೆ ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿಲ್ಲ. ಆದರೂ ಗೀತೆಯ ಮೂಲಕ ವ್ಯಕ್ತಿ ನಿರ್ಮಾಣದ ಕಾರ್ಯ ನಿರಂತರವಾಗಿ ನಡೆಯಬೇಕು ಎಂಬ ಉದ್ದೇಶದಿಂದ ಈ ವರ್ಷದ ಮಟ್ಟಿಗೆ ಯಾವುದೇ ಸಾರ್ವಜನಿಕ ಸಮಾರಂಭಗಳಿಲ್ಲದೇ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದರು.

ಶಂಕರ ಮಠಕ್ಕೆ ಆಗಮಿಸಿದ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತಿಸಲಾಯಿತು. ನಂತರ ಸ್ವಾಮಿಗಳು ಹಾಗೂ ಗಣಪತಿ ಶಾರದಾಂಬಾ ಚಂದ್ರ ಮೌಳೀಶ್ವರರ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾದರು.

Advertisement

ಶಾರದಾ ಭಜನಾ ಮಂಡಳಿಯಿಂದ ಭಜನೆ ಮತ್ತು ಭಗವದ್ಗೀತಾ ಪಠಣ ಮಂಡಳಿ ಸದಸ್ಯರಿಂದ ಗೀತಾ ಪಠಣ ನಡೆಯಿತು. ಮಹಾ ಮಂಗಳಾರತಿ ನಡೆದು ಭಕ್ತಾದಿಗಳಿಗೆ ಮಹಾ ಪ್ರಸಾದ ವಿತರಿಸಲಾಯಿತು.

ಅರುಣ ಸೊಲಾಪುರಕರ, ಡಾ| ಶೈಲೇಶ ದೇಶಪಾಂಡೆ, ಡಾ| ಜಯಶ್ರೀ ಮುಂಡೇವಾಡಿ, ಶಂಕರ ಮಠದ ಅಧ್ಯಕ್ಷ ಮಹೇಶ ದೇಶಪಾಂಡೆ, ಕಾರ್ಯದರ್ಶಿ ಪ್ರಮೋದ್‌ ಶಾಸ್ತ್ರೀ, ಅಥಣಿ ಉಪಾಧ್ಯಕ್ಷ ಶ್ಯಾಮ್‌ ಜೋಶಿ, ಸದಸ್ಯರಾದ ಹನುಮಂತ ವೈದ್ಯ, ಗಿರೀಶ ಬಾಗಲಕೋಟಕರ, ರಂಗಭಟ್ಟ ಜೋಶಿ, ಕೃಷ್ಣಭಟ್‌ ಗಲಗಲಿ ಇದ್ದರು. ಗೀತಾ ಅಭಿಯಾನ ಸಮಿತಿಯ ಸಂಗನಗೌಡ ಪಾಟೀಲ ಸ್ವಾಗತಿಸಿದರು. ಡಾ| ಬಾಬುರಾಜೇಂದ್ರ ನಾಯಕ ವಂದಿಸಿದರು. ಶ್ರೀರಾಮಭಟ್‌ ಕಾರ್ಯಕ್ರಮ ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next