ನಾಳೆ ಸೋಮವಾರ. ಶನಿವಾರ-ಆದಿತ್ಯವಾರಗಳ ರಜೆ ಮುಗಿದು ಇಂಗ್ಲೆಂಡ್‌ನ ಸೋಮವಾರದ ಬೆಳಗಾಗುವುದೇ ಕಳೆದುಹೋದ ವಾರಾಂತ್ಯದ ನೆನಪಲ್ಲಿ. ಸೋಮವಾರ ಬೆಳಗ್ಗೆ ಕಚೇರಿಯಲ್ಲಿ ಹೆಚ್ಚಿನ ಸಂಭಾಷಣೆಗಳು ಆರಂಭ ಆಗುವುದೇ “ವಾರಾಂತ್ಯ ಹೇಗಿತ್ತು?’ ಎನ್ನುವ ಪ್ರಶ್ನೆಯಿಂದ. ಇಂಗ್ಲೆಂಡ್‌ಗೆ ಬಂದ ಮೊದಲಿಗೆ ಇದೆಂಥ ವಿಚಿತ್ರ ಪ್ರಶ್ನೆ ಎನ್ನುತ್ತ ಉತ್ತರಿಸಲು ಹೆಣಗಾಡುತ್ತಿದ್ದ ವಲಸಿಗರಲ್ಲಿ ನಾನೂ ಒಬ್ಬ ; ವಾರಾಂತ್ಯ ಹೇಗಿರುತ್ತದೆ? ಯಾವಾಗಲೂ ಇದ್ದ ಹಾಗೆ ಇರುತ್ತದೆ ಅದರÇÉೇನು ವಿಶೇಷ ಅನ್ನಿಸುತ್ತಿತ್ತು; ವಾರಾಂತ್ಯ ಅಂದರೆ ನಮ್ಮ ಹವ್ಯಾಸದ ಬೆನ್ನು ಹಿಡಿಯುವುದು ಅಥವಾ ಏನೂ ಮಾಡದೇ ವಿಶ್ರಾಂತಿ ಪಡೆಯುವುದು. ಮತ್ತೆ ವಾರಾಂತ್ಯದ ಬಗ್ಗೆ ವಾರಗಳ ಹಿಂದೆಯೇ ಇಲ್ಲಿನವರ ತಯಾರಿಗಳು ನಡೆಯುವುದು. ಆಮೇಲೆ ವಾರಾಂತ್ಯ ಮುಗಿಸಿ ಬಂದು ಅದರ ಬಗ್ಗೆ ಮಾತಾಡುವುದು- ಇವೆಲ್ಲ ಹೊಸ ಅನುಭವಗಳೇ ಆಗಿದ್ದವು. ನಾವು ಉದ್ದುದ್ದ ವಾಕ್ಯಗಳನ್ನು ಬಳಸಿ ಇಂಡಿಯನ್ ಇಂಗ್ಲಿಷ್‌ನಲ್ಲಿ ನಮ್ಮ ವಾರಾಂತ್ಯದ ಸುದ್ದಿ ಹೇಳಿದರೆ, ಅವರ ಕಾರುಬಾರುಗಳು ಆಂಗ್ಲ ವಾಕ್ಯಗಳ ಸರಳ ಕಸರತ್ತಿನಲ್ಲಿ ವ್ಯಕ್ತ ಆಗುತ್ತವೆ. ವಾರಾಂತ್ಯದ ಯೋಚನೆ, ಯೋಜನೆ, ಚರ್ಚೆಗಳು ವಾರಾಂತ್ಯಕ್ಕೆ ಮತ್ತು ಕಚೇರಿಯ ಹೊರಗಿನ ವೈಯಕ್ತಿಕ ಸಮಯಕ್ಕೆ ಆಂಗ್ಲರ ಬದುಕಿನಲ್ಲಿರುವ ಮಹತ್ವವನ್ನು ಹೇಳುತ್ತವೆ. ಹಲವು ಉದ್ಯೋಗಿಗಳ ಸೋಮವಾರದ ಸುಮಾರು ಹೊತ್ತು ಇನ್ನೊಬ್ಬರ ವಾರಾಂತ್ಯದ ಕತೆ ಕೇಳುವುದರ ಮೂಲಕ ತಮ್ಮ ವಾರಾಂತ್ಯದ ಬಗ್ಗೆ ಹೇಳುವುದರ ಮೂಲಕವೇ ಕಳೆಯುತ್ತದೆ. ಕಚೇರಿಯ ನಮ್ಮ ಕಟ್ಟಡದ ಕಸಗುಡಿಸುವ, ಹೆಕ್ಕುವ ಉದ್ಯೋಗ ಮಾಡುವ ಪೋಲೆಂಡ್‌ನಿಂದ ವಲಸೆ ಬಂದ ಮೂವರು ಹೆಂಗಸರು ಒಂದು ಟೇಬಲ್ ಸುತ್ತ ನಿಂತು ಒಂದು ಕೈ ಸೊಂಟದ ಮೇಲೂ ಇನ್ನೊಂದು ಕೈಯಲ್ಲಿ ಚಹಾ ಕಪ್ ಅನ್ನು ಹಿಡಿದು ಸೋಮವಾರ ಬೆಳಿಗ್ಗೆ ಪಟ್ಟಾಂಗ ಹೊಡೆದ ನಂತರವೇ ಕೆಲಸ ಆರಂಭಿಸುತ್ತಾರೆ.
ವಾರವೊಂದರ ಆರಂಭದಿಂದ ಮತ್ತೂಂದು ವಾರಾಂತ್ಯ ಬರಲು ಭರ್ತಿ ಐದು ದಿನ ಇರುವುದರಿಂದ ಆಂಗ್ಲ ಸಹೋದ್ಯೋಗಿಗಳು ಸೋಮವಾರ, ಮಂಗಳವಾರಗಳನ್ನು “ಏರುಬೆಟ್ಟ’ ಎಂದು ಕರೆಯುತ್ತಾರೆ (uಟ ಜಜಿll). ಗುಡ್ಡವನ್ನು ಏರುವಾಗ ಒಬ್ಬರಿಗೊಬ್ಬರು ಕತೆ ಹೇಳುತ್ತ ಏರಿದರೆ ಬಹುಶಃ ಏರಿನ ದಣಿವು ಆಗಲಾರದು ಎಂದೋ ಏನೋ ಸೋಮವಾರದ ತುಂಬೆಲ್ಲ ಕಚೇರಿಯಲ್ಲಿ ವಾರಾಂತ್ಯದ ಕತೆಗಳೇ ತುಂಬಿರುತ್ತವೆ. ದೋಣಿವಿಹಾರ, ಇಪ್ಪತ್ತು ಕಿಲೋಮೀಟರು ನಡಿಗೆ, ಕಾಡಿನÇÉೋ ಗುಡ್ಡದ ಮೇಲೋ ಸೈಕಲ್ ಹೊಡೆಯುವುದು, ತೋಟದಲ್ಲಿ ಕಳೆ ತೆಗೆದದ್ದು-ಹುಲ್ಲು ಕತ್ತರಿಸಿದ್ದು , ಸಾಕಿದ ನಾಯೋ ಬೆಕ್ಕೋ ಕುದುರೆಯೋ ಕಾಟ ಕೊಟ್ಟದ್ದು… ಹೀಗೆ ಭಿನ್ನ ಅಭಿರುಚಿಗಳು ವಿಭಿನ್ನ ಕತೆಗಳು. ಕಚೇರಿಯಲ್ಲಿ ವಾರಕ್ಕೆ ಮೂವತ್ತೈದರಿಂದ ನಲವತ್ತು ಗಂಟೆ ಕೆಲಸ ಮಾಡುವ ಇವರಲ್ಲಿ ಬಹಳ ಮಂದಿ ಕೆಲಸ ಮಾಡುವ ಹೊತ್ತಿಗೆ ಚೆನ್ನಾಗಿ ದುಡಿದು ತಮ್ಮ ಅಂದಿನ ಕೆಲಸ ಮುಗಿಯುತ್ತಲೇ ಕಚೇರಿಯ ಚಿಂತೆ ಬಿಟ್ಟು ತಮ್ಮ ವೈಯಕ್ತಿಕ ಜೀವನ, ಹವ್ಯಾಸ, ಸಂಗಾತಿ ಅಂತ ತೊಡಗಿಸಿಕೊಳ್ಳುತ್ತಾರೆ. ಇವರಲ್ಲಿ ಕೆಲವರಿಗೆ ಯಾವ ಜವಾಬ್ದಾರಿ ಇಲ್ಲದೆ ಹೇಳಿದ ಕೆಲಸ ಮಾಡಿ ಮನೆಗೆ ಹೋಗುವುದು ಇಷ್ಟ. ಇನ್ನು ಕೆಲವರಿಗೆ ಕೆಲಸ ಮಾಡುವುದಕ್ಕಿಂತ ಕೆಲಸ ಮಾಡಿಸುವುದು ಇಷ್ಟ. ಇನ್ನು ಜವಾಬ್ದಾರಿಯ ಸಹವಾಸವೇ ಬೇಡ ಎಂದು ತಮಗೆ ಸಿಗುವ ಭಡ್ತಿಯನ್ನು ತ್ಯಾಗ ಮಾಡುವವರೂ ಇ¨ªಾರೆ. ಇನ್ನು ಕೆಲವರು ತಮ್ಮ ಕೆಲಸವನ್ನು ಆಚೀಚಿನವರಿಗೆ ಹಂಚುತ್ತ ಮೇಲ್ವಿಚಾರಣೆಯಲ್ಲಿ ನಿಸ್ಸೀಮರು ಎನ್ನುವ ಬಿರುದು ಪಡೆದು ಬೇಗ ಭಡ್ತಿ ಪಡೆಯುವುದೂ ಇದೆ. ಇನ್ನು ಕೆಲಸ ಮಾಡದೆ ಅಂದಿನ ದಿನ ಕಳೆಯುವ ಹುನ್ನಾರದ ಸಹೋದ್ಯೋಗಿಗಳಿಗೂ ಸೋಮವಾರ ಎಂದರೆ ಬಲು ಇಷ್ಟ. ಕಚೇರಿಯ ಸುತ್ತೆಲ್ಲ ಓಡಾಡಿಕೊಂಡು ವಾರಾಂತ್ಯದಲ್ಲಿ ತಾವು ಮಾಡಿದ ಪ್ರಯಾಣದ, ಸಾಹಸದ ಭಾವಚಿತ್ರಗಳನ್ನು ಮೊಬೈಲ್ ಮೂಲಕ ತೋರಿಸುತ್ತ ಮಾತಾಡುತ್ತ ನಾಲ್ಕು ಚಹಾ ಒಂದು ಊಟ ಮುಗಿಸುವುದರೊಳಗೆ ಕಚೇರಿಯೂ ಮುಗಿದು ಅಂದು ಮನೆಗೆ ಹೋಗುವ ಸಮಯವೂ ಬಂದಿರುತ್ತದೆ.
ಸೋಮವಾರದ ಒಳಗೆ ತುಂಬಿಕೊಂಡ ಹಿಂದಿನ ವಾರಾಂತ್ಯದ ಸುದ್ದಿಗಳು ಮಂಗಳ, ಬುಧ, ಗುರುವಾರಕ್ಕೆ ತಮ್ಮ ವರ್ಚಸ್ಸು ಕಳೆದುಕೊಂಡಿರುತ್ತವೆ. ಗುರುವಾರ ಬರುವ ಹೊತ್ತಿಗೆ ಒಂದು ಹೊಸ ಉತ್ಸಾಹ ಮೂಡಿರುತ್ತದೆ. ಗುರುವಾರ-ಶುಕ್ರವಾರಗಳು ಬರುವಾಗ ಇನ್ನು ಇಳಿಜಾರು (ಛಟಡಿn ಜಜಿll) ಎಂದು ಸಮಾಧಾನ ಪಡುತ್ತಾರೆ. ಆಂಗ್ಲರು ಅತಿ ಹೆಚ್ಚು ಖುಷಿಯಲ್ಲಿ ಉತ್ಸಾಹದಲ್ಲಿ ಇರುವ ದಿನ ಶುಕ್ರವಾರವೇ ಇರಬೇಕು. ಅಂದಿನ ಖುಷಿಯ ಸಂಜೆಯನ್ನು ಹಬ್ಬದಂತೆ ಆಚರಿಸುವುದು ಬ್ರಿಟನ್ನಿನ ಎಲ್ಲ ಊರುಗಳಲ್ಲೂ ಕಾಣಿಸುತ್ತದೆ; ಕಿಕ್ಕಿರಿದು ತುಂಬಿದ ಪಬ್‌ಗಳು, ಉದ್ದ ಗಾಜಿನ ತುಂಬ ಬಿಯರ್‌ಗಳನ್ನು ಹಿಡಿದು ರಸ್ತೆ ಪಕ್ಕದÇÉೋ ಹೊಟೇಲಿನ ತಾರಸಿಯ ಮೇಲೋ ಕುಡಿಯುವ, ನಗುವ, ಗಟ್ಟಿ ಸ್ವರದಲ್ಲಿ ಮಾತಾಡುವ ಜನಸಂದಣಿ. ಬ್ರಿಟನ್ನಿನ ಆರ್ಥಿಕತೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೇಗಿದೆ ಎಂದು ತಿಳಿಯಲು ಪ್ರತಿವರ್ಷ ಖರ್ಚಾಗುವ ಬಿಯರುಗಳನ್ನು ಲೆಕ್ಕ ಇಡುವ ಕ್ರಮವೂ ಇದೆ. ಹೆಚ್ಚು ಬಿಯರು ಖರ್ಚಾದ ವರ್ಷ ಅಂದರೆ ದೇಶದ ಆರ್ಥಿಕ ಸ್ಥಿತಿ ಹಿಂದಿಗಿಂತ ಉತ್ತಮ ಎನ್ನುವುದರ ಸೂಚಕವಂತೆ !
ವಾರಾಂತ್ಯ ಶುರು ಆದ ದಿನದ ಸಂಜೆ ಕುಡಿಯುವುದು ಆಂಗ್ಲರ ಅತ್ಯಂತ ಪ್ರಿಯವಾದ ಚಟುವಟಿಕೆಗಳÇÉೊಂದು. ಕುಡಿಯುವುದು ಅವರ ಸಂಸ್ಕೃತಿಯ ಭಾಗವೇ ಆದ್ದರಿಂದ ಅದನ್ನು ದುಶ್ಚಟ ಎಂದು ಅವರು ಪರಿಗಣಿಸುವುದಿಲ್ಲ. ಮತ್ತೆ ಶುಕ್ರವಾರದ ಸಂಜೆಯ ಮೋಜಿನ ಹಿಂದೆ ದೊಡ್ಡ ಪೂರ್ವತಯಾರಿಯೂ ಇರುತ್ತದೆ. ಕುಡಿಯುವವರು ತಮ್ಮ ವಾಹನ ಚಲಾಯಿಸಿಕೊಂಡು ಪಬ್‌ಗಳಿಗೆ ಹೋಗುವುದಿಲ್ಲ. ನಡೆದು ಅಥವಾ ಬಸ್ಸು ಹತ್ತಿ ಹೋಗುತ್ತಾರೆ. ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದರೆ ಅವರ ವಾಹನ ಚಾಲನೆಯ ಪರವಾನಿಗೆ ಕನಿಷ್ಠ ಒಂದೋ ಎರಡೋ ವರ್ಷಕ್ಕೆ ರ¨ªಾಗುತ್ತದೆ ಮತ್ತೆ ಸ್ವಲ್ಪ ದಂಡವನ್ನೂ ತೆರಬೇಕಾಗುತ್ತದೆ. ಇಂಗ್ಲೆಂಡ್ ಫುಟ್ಬಾಲ್ ತಂಡದ ಸದ್ಯದ ಅತ್ಯಂತ ಹೆಸರುವಾಸಿ ಮತ್ತು ಶ್ರೀಮಂತ ಆಟಗಾರ ವೆಯ°… ರೂನಿ ಎನ್ನುವಾತ ಕಳೆದ ಸೆಪ್ಟಂಬರ್ ತಿಂಗಳ ಒಂದು ಶುಕ್ರವಾರ ಅತಿಯಾಗಿ ಕುಡಿದು ಕಾರು ಚಲಾಯಿಸಿ ಸಿಕ್ಕಿಬಿದ್ದು ಎರಡು ವರ್ಷ ಕಾರು ಚಲಾಯಿಸದಂತೆ ಈಗ ನಿರ್ಬಂಧಕ್ಕೆ ಸಿಲುಕಿದ್ದಾನೆ.
ಬಸ್ಸು ಟ್ಯಾಕ್ಸಿ ಹತ್ತುವ ರಗಳೆಯೇ ಬೇಡ ಎಂದು ಕೆಲವು ಆಂಗ್ಲರ ಗುಂಪುಗಳು ಮನೆಯ ಹತ್ತಿರದ ಬಾರಿನಲ್ಲಿ ಕುಡಿಯಲು ಶುರು ಮಾಡಿ ಮುಂದೆ ನಡೆಯುತ್ತ ದಾರಿಯಲ್ಲಿ ಸಿಕ್ಕಿದ ಬಾರು, ಪಬ್‌ಗಳಿಗೆೆಲ್ಲ ಭೇಟಿ ನೀಡಿ ಇನ್ನಷ್ಟು ಕುಡಿಯುತ್ತ ತಡರಾತ್ರಿಯವರೆಗೆ ಕಾಲ ಕಳೆಯುತ್ತಾರೆ. ಹೀಗೆ ಹಲವು ಪಬ್‌ಗಳನ್ನು ಒಂದಾದ ಮೇಲೊಂದರಂತೆ ಹೊಕ್ಕು ಹೊರಡುವುದಕ್ಕೆ ಇವರ ಭಾಷೆಯಲ್ಲಿ ಕuಚಿ ಇrಚಡಿlಜಿnಜ ಎಂದು ಹೆಸರು. ಮೊದಲು ಎಲ್ಲಿಂದ ಶುರು ಮಾಡಬೇಕು, ಆಮೇಲೆ ಎಲ್ಲಿ ಹೋಗಬೇಕು, ಯಾವ ದಾರಿಯಲ್ಲಿ ಸಾಗಬೇಕು, ಯಾವ ಪಬ್‌ನಲ್ಲಿ ಎಷ್ಟು ಹೊತ್ತು ಎಲ್ಲದರ ವೇಳಾಪಟ್ಟಿ ಮತ್ತು ಯೋಜನೆಯನ್ನು ತಯಾರಿಸಿ ಮೊದಲೇ ಆಸಕ್ತ ಸ್ನೇಹಿತರಿಗೆ ಹಂಚಿರುತ್ತಾರೆ. ಇವರು ನಡಿಗೆ ಶುರು ಮಾಡಿದ ಪಬ್‌ಗ ಬಂದು ಸೇರಿಕೊಳ್ಳಲಾಗದವರು ಯೋಜನೆಯಲ್ಲಿ ಇರುವಂತೆ ಎಷ್ಟು ಹೊತ್ತಿಗೆ ಯಾವ ಸ್ಥಳದ ಯಾವ ಪಬ್‌ನಲ್ಲಿ ಸ್ನೇಹಿತರು ಇ¨ªಾರೆಂದು ಅಂದಾಜು ಮಾಡಿ ತಡವಾಗಿ ಅÇÉೇ ಹೋಗಿ ಸೇರಿಕೊಳ್ಳುವುದೂ ಇದೆ.
ವಾರಾಂತ್ಯ ಎಂದು ಕರೆಸಿಕೊಳ್ಳುವ ಶನಿವಾರ-ಆದಿತ್ಯವಾರಗಳನ್ನು ಯಾವುದೋ ಹವ್ಯಾಸದÇÉೋ ಅಥವಾ ವಿರಾಮದÇÉೋ ಕಳೆಯುತ್ತಾ ಕಚೇರಿಯನ್ನು ಸಂಪೂರ್ಣ ಮರೆಯುತ್ತಾರೆ. ವಾರಾಂತ್ಯದ ಕಾಲಹರಣಕ್ಕೆ ಇಂತಹುದೇ ಅಭಿರುಚಿ ಆಗಬೇಕೆಂದಿಲ್ಲ, ಏನೋ ಒಂದು ಆದರಾಯಿತು. ಯಾವುದೆಂದು ಹೇಗೂ ಸೋಮವಾರ ಬೆಳಿಗ್ಗೆ ಕಚೇರಿಯಲ್ಲಿ ತಿಳಿಯುತ್ತದಲ್ಲ , ಮತ್ತೆ ಬೆಟ್ಟ ಹತ್ತುವಾಗ !
-ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್