Advertisement

ಹರಾಜಿನಲ್ಲಿ ಭಾಗವಹಿಸದೇ ಇರಲು ರೇಷ್ಮೆ ರೀಲರ್ ಗಳ ನಿರ್ಧಾರ: ರೈತರ ಪರದಾಟ

09:38 AM May 16, 2020 | keerthan |

ರಾಮನಗರ: ಜಿಲ್ಲೆಯಲ್ಲಿ ಶನಿವಾರ ರೇಷ್ಮೆ ಗೂಡು ಹರಾಜಿನಲ್ಲಿ ಭಾಗವಹಿಸದಿರಲು ರೀಲರ್ ಗಳು ನಿರ್ಧರಿಸಿರುವುದರಿಂದ ಜಿಲ್ಲೆಯ ರಾಮನಗರ, ಚನ್ನಪಟ್ಟಣ ಮತ್ತು ಕನಕಪುರ ರೇಷ್ಮ ಗೂಡು ಮಾರುಕಟ್ಟೆಗಳಲ್ಲಿ ಶನಿವಾರ ಹರಾಜು ನಡೆಯುವುದಿಲ್ಲ.

Advertisement

ಲಾಕ್ ಡೌನ್ ನಿಂದಾಗಿ ರೇಷ್ಮೆ ನೂಲು ಮಾರಾಟ ಮಾಡಲಾಗದ ಕಾರಣ ತಮಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ರೇಷ್ಮೆ ಗೂಡು ಖರೀದಿ ಸಾಧ್ಯವಾಗುತ್ತಿಲ್ಲ ಎಂದು ರೀಲರ್ ಗಳು ಸರ್ಕಾರದ ಗಮನ ಸೆಳೆದಿದ್ದರು. ಕೆ.ಎಸ್.ಎಂ.ಬಿ ಮೂಲಕ ಸರ್ಕಾರ ನೂಲು ಖರೀದಿಸುವಂತೆ, ಅಂತರರಾಜ್ಯ ಮಾರಾಟಕ್ಕೆ ಅಗತ್ಯ ನೆರವು ನೀಡುವಂತೆಯು  ಬೇಡಿಕೆ ಇಡಲಾಗಿತ್ತು. ಆದರೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ಶನಿವಾರ ರಾಜ್ಯಾದ್ಯಂತ ರೇಷ್ಮ ಗೂಡು ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಲಾಗಿದೆ ಎಂದು ರೀಲರ್ ಸಂಘ ದ ಅಧ್ಯಕ್ಷ ಮುಹೀಬ್ ತಿಳಿಸಿದ್ದಾರೆ.

ರೇಷ್ಮ ಗೂಡು ಮಾರುಕಟ್ಟೆಗೆ ಗೂಡು ತೆಗೆದು ಕೊಂಡು ಹೋಗಬೇಡಿ ಎಂದು ಪೊಲೀಸರು ರೈತರಿಗೆ ತಾಖಿತು ಮಾಡುತ್ತಿರುವ ಪ್ರಸಂಗಗಳು ವರದಿಯಾಗಿದೆ. ಗೂಡು ಹರಾಜಾಗದೆ, ಮಾರುಕಟ್ಟೆಗಳಲ್ಲಿ ಗೊಂದಲಗಳಿಗೆ ಅವಕಾಶವಾಗಬಾರದು ಎಂಬ ಮುನ್ಬೆಚ್ಚರಿಕೆ ಕ್ರಮ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗೂಡನ್ನು ಮಾರುಕಟ್ಟೆಗೆ ತರುವುದು ಬೇಡ ಎಂದು ರೈತರಿಗೆ ಮನವಿ ಮಾಡಲಾಗಿತ್ತು ಎಂದು ರೈತ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next