Advertisement

ಬಾಳೆ ಎಲೆಯ ಮಹತ್ವ; ಬಾಳೆ ಎಲೆ ಬಳಕೆಯಿಂದ ಹಲವು ಉಪಯೋಗ

03:04 PM Nov 09, 2021 | Team Udayavani |

ಇಂದಿನ ದಿನಗಳಲ್ಲಿ ನಾವು ಬದಲಾವಣೆ ಬಯಸುತ್ತ, ಬಯಸುತ್ತ ನಮ್ಮ ಆಚಾರ ವಿಚಾರ ಆಚರಣೆಗಳಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದೇವೆ. ಅದರಲ್ಲಿಯೂ ಊಟ ತಿಂಡಿಯ ವಿಧಾನಗಳಲ್ಲಿ. ಮೊದಲಿನ ಕಾಲದಲ್ಲಿ ಹೆಚ್ಚು ನೈಸರ್ಗಿಕವಾದ, ದೇಹಕ್ಕೆ ಒಳ್ಳೆಯ ಪುಷ್ಟಿ ನೀಡುವ, ಹಣ್ಣು ಹಂಪಲು, ಆಹಾರ ಪದಾರ್ಥಗಳನ್ನೂ ತಯಾರಿಸುತ್ತಿದ್ದರು. ಆದರೆ ಇಂದು ನಿಮಗೆ ಗೊತ್ತಿದೆ ನಾವು ಬೆಳಗ್ಗೆ ಬೆಳಗ್ಗೆ ಏಳುತ್ತಲೇ ಜಂಕ್ ಫುಡ್ ನ ಸೇವನೆಯಲ್ಲಿ ನಿರತರಾಗುರುತ್ತೇವೆ.

Advertisement

ಆದರೆ ನಾನಿಂದು ನಿಮಗೆ ನಮ್ಮ ಆಹಾರ ಸೇವನೆಯ ಬಗ್ಗೆ ತಿಳಿಸುತ್ತಿಲ್ಲ. ನಾವು ಚಿಕ್ಕವರಿದ್ದಾಗಿಂದಲೂ ಊಟ ಮಾಡಿದ ಬಾಳೆ ಎಲೆಯ ನೆನಪುಗಳ ಬಗ್ಗೆ ಹೇಳಲು ಇಷ್ಟ ಪಡುತ್ತೇನೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬಾಳೆ ಎಳೆಗಳು ಮಾಯವಾಗಿ ಅದರ ಜಾಗದಲ್ಲಿ ಸ್ಟಿಲ್, ಪ್ಲಾಸ್ಟಿಕ್  ಪ್ಲೇಟ್ ಗಳು ಬಂದು ಬಿಟ್ಟಿದೆ. ಅದನ್ನು ನೋಡಿದಾಗ ಅದರಲ್ಲಿನ ವಿವಿಧ ರೀತಿಯ ಶೈಲಿಗೆ ನಾವು ಮಾರು ಹೋಗಿರುತ್ತೇವೆ. ಈ ಬಾಳೆ ಎಲೆಗಳಾದರೆ ಉದ್ದನೆಯ ಆಕಾರದ ಹಸಿರು ಬಣ್ಣದವು ಅಷ್ಟೇ ಎಂದೂ ನಮಗೆ ಅನ್ನಿಸುತ್ತದೆ.

ಆದರೆ ಈ ಬಾಳೆ ಎಲೆಯನ್ನು ಬಳಸುವುದರಿಂದ ಅದರಲ್ಲಿ ಊಟ ಮಾಡುವುದರಿಂದ ಯಾವ ರೀತಿಯ ಉಪಯೋಗವಿದೆ, ಅದು ನಮ್ಮನ್ನು ಆರೋಗ್ಯವಾಗಿಡಲು ಎಷ್ಟು ಮುಖ್ಯವಾಗಿದೆ ಎಂಬುದೇ ನಮಗೆ ತಿಳಿದಿಲ್ಲ.  ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ನಮ್ಮಲ್ಲಿ ಜೀರ್ಣಕ್ರಿಯೆ ಗಳು ಸುಗಮವಾಗಿ ಆಗುತ್ತದೆ. ಬಾಳೆ ಎಲೆಯ ಮೇಲ್ಪದರದಲ್ಲಿ ಎಪಿಗಾಲ್ಲೋಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುವುದರಿಂದ ಬಿಸಿ ಆಹಾರ ಎಲೆಗೆ ಬಿದ್ದಾಗ ಅದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುವುದರಿಂದ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇನ್ನೂ ಇದರಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ತಡೆಯುವುದರಿಂದ ಕ್ಯಾನ್ಸರ್ ನಿಂದಲೂ ದೂರವಿರಬಹುದು. ಬಾಳೆ ಎಲೆ ಊಟ ಆರೋಗ್ಯಕ್ಕೆ ತಂಪಾಗಿರುದರಿಂದ ನಾವು ಯಾವುದೆ ಚಿಕ್ಕ ಪುಟ್ಟ ಚರ್ಮ ರೋಗಗಳಿಂದಲೂ ದೂರವಿರಬಹುದು. ಹೀಗೆ ಈ ಬಾಳೆ ಎಲೆಯ ಬಳಕೆಯಿಂದ ತುಂಬಾ ಉಪಯೋಗಗಳಿವೆ.

ಬಾಳೆ ಎಲೆಯನ್ನು ಇಂದು ನಾವು ಹೆಚ್ಚಾಗಿ ಕಾಣುವುದು ಮದುವೆ ಮನೆಗಳಲಷ್ಟೇ. ಅದು ಇಂದು ಪ್ಯಾಸ್ಟಿಕ್ ಬಾಳೆ ಎಲೆಗಳನ್ನೂ, ಕಾಗದದ ಬಾಳೆ ಎಲೆಗಳನ್ನು ಬಳಸಲಾಗುತ್ತಿದೆ. ಈ ಬಾಳೆ ಎಲೆ ಸ್ವಲ್ಪ ರೂಢಿಯಲ್ಲಿ ಇರುವುದೆಂದರೆ ಹಳ್ಳಿಯ ಕಡೆಯಲ್ಲಿಯೇ ಇರಬೇಕು.

ಬಾಳೆ ಎಲೆಯನ್ನು ಬಳಸುವುದರಿಂದ ಬರಿ ಸಾಂಪ್ರದಾಯಿಕ ಮಾತ್ರವಲ್ಲ ಪಾರಂಪರಿಕ ಆಚರಣೆಯ ಉದ್ದೇಶಗಳು ಇವೆ. ಅದನ್ನು ಬರಿ ಊಟ ಮಾತ್ರವಲ್ಲ ಮುತ್ತೈದೆಯರಿಗೆ ಬಾಗಿನ ಕೊಡುವಾಗ, ದೇವರ ಪೂಜೆಗಳನ್ನು ಮಾಡುವಾಗ ಕಲಶಗಳನ್ನು ಇಡಲು ಯಾರಿಗಾದರೂ ಧನವನ್ನು ಕೊಡುವ ಸಂದರ್ಭದಲ್ಲಿ ಹೀಗೆ ಬೇರೆ ಬೇರೆ ಕಾರಣಗಳಿಗೂ ಈ ಬಾಳೆ ಎಲೆಯನ್ನು ಉಪಯೋಗಿಸುತ್ತಾರೆ. ಇನ್ನಾದರೂ ನಾವು ಇದರ ಮಹತ್ವ ತಿಳಿದು ಬಾಳೆ ಎಲೆಯ ಬಳಕೆಯನ್ನು ಮಾಡೋಣ. ಇದು ಕಣ್ಣಿಗೂ ತಂಪು ಮನಸ್ಸಿಗೂ ತಂಪು ಆರೋಗ್ಯಕ್ಕೂ ಒಳ್ಳೆಯದು.

Advertisement

ಮಧುರಾ ಎಲ್ ಭಟ್ಟ, ಎಸ್ ಡಿ ಎಂ ಕಾಲೇಜ್ ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next