Advertisement

ಪ್ರಶಸ್ತಿಗೆ ಆಯ್ಕೆ ಪ್ರಕ್ರಿಯೆ ಆರಂಭ 

11:24 AM Aug 19, 2018 | |

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಂದ ಉತ್ತಮ ಉಪನ್ಯಾಸಕ ಹಾಗೂ ಪ್ರಾಂಶುಪಾಲ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡುವ ಪ್ರಕ್ರಿಯೆ ಆರಂಭವಾಗಿದೆ.

Advertisement

ಉತ್ತಮ ಉಪನ್ಯಾಸಕ ಹಾಗೂ ಪ್ರಾಂಶುಪಾಲರ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಸಂಬಂಧ ಜಿಲ್ಲಾ ಉಪನಿರ್ದೇಶಕರು ತಲಾ ಇಬ್ಬರು ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಸಮಿತಿಯು ಅರ್ಹರಿಂದ ಅರ್ಜಿ ಆಹ್ವಾನಿಸಿ ಎಲ್ಲರೀತಿಯಿಂದಲೂ ಪರಿಶೀಲಿಸಿ, ಆ.25ರೊಳಗೆ ಮೊದಲ ಪಟ್ಟಿ ಸಿದ್ಧಮಾಡಬೇಕು.

ಆ.28ರೊಳಗೆ ಪಟ್ಟಿಯನ್ನು ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ. ಸಮಿತಿಯು ಕನಿಷ್ಠ 10 ವರ್ಷ ಬೋಧನಾನುಭವದ ಜತೆಗೆ ಕನಿಷ್ಠ 3 ವರ್ಷ ಆಡಳಿತ ನಿರ್ವಹಣೆ ಮಾಡಿದ ಪ್ರತಿ ಜಿಲ್ಲೆಯಿಂದ ಒಬ್ಬರು ಉಪನ್ಯಾಸಕ ಹಾಗೂ ಒಬ್ಬರು ಪ್ರಾಂಶುಪಾಲರನ್ನು ಆಯ್ಕೆ ಸೇರಿ ಹಲವು ಷರತ್ತು ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next