ಜಗಳೂರು: ಅಕ್ಷರ ದಾಸೋಹ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರೆಗೆ ಸೇವಾ ಭದ್ರತೆ, ಆರೋಗ್ಯವಿಮೆ, ಜೀವ ವಿಮೆಯಂತಹ ಸೌಲಭ್ಯಗಳು ಅತ್ಯವಶ್ಯಕವಾಗಿವೆ ಎಂದು ಶಾಸಕ ಎಚ್.ಪಿ.ರಾಜೇಶ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ಜಿಪಂ, ತಾಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಹಮ್ಮಿಕೊಂಡಿದ್ದ ಅಕ್ಷರ ದಾಸೋಹ ಕಾರ್ಯಕ್ರಮದ ಅಡುಗೆ ಸಿಬ್ಬಂದಿಗೆತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಗೌರವ ಧನದಲ್ಲಿಕೆಲಸ ಮಾಡುತ್ತಿದ್ದಾರೆ.
ಅವರಿಗೆ ಯಾವುದೇ ಸೇವಾ ಭದ್ರತೆ ಇಲ್ಲವಾಗಿರುವುದು ವಿಪರ್ಯಾಸ. ಕೊನೆ ಪಕ್ಷ ವಿಮಾ ಸೌಲಭ್ಯವನ್ನಾದರೂಒದಗಿಸಬೇಕಾಗಿದ್ದು ಕೇಂದ್ರ ಸರ್ಕಾರ ಇವರನ್ನು ಇಎಸ್‌ಐ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿದರು. ತಾಲೂಕಿನಲ್ಲಿ ಸುಮಾರು 10 ಸಾವಿರ ಬಿಪಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ ಎಲ್‌ಪಿಜಿ ಗ್ಯಾಸ್ ಸೌಲಭ್ಯ ನೀಡಲು ಉದ್ದೇಶಿಸಲಾಗಿದ್ದು, ಈ ಸಂಬಂಧವಾಗಿ ಸಮಾಜಕಲ್ಯಾಣ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಪಂ ಸಾಮಾಜಿಕನ್ಯಾಯ ಸಮಿತಿ ಅಧ್ಯಕ್ಷ ಎಸ್. ಕೆ.ಮಂಜುನಾಥ್, ಪಪಂ ಉಪಾಧ್ಯಕ್ಷ ಎನ್.ಎಂ. ಹಾಲಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎನ್.ಆರ್.ತಿಪ್ಪೇಸ್ವಾಮಿ, ಕ್ಷೇತ್ರಸಮನ್ವಯಾಧಿಕಾರಿ ಗಿರೀಶ್, ಪ್ರೌಢಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಹಾಲೇಶ್, ಸರ್ಕಾರಿ ನೌಕರಸಂಘದ ಅಧ್ಯಕ್ಷ ಆನಂದಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಿವಕುಮಾರ್, ಜಗನ್ನಾಥರೆಡ್ಡಿ, ಕ್ಷೇತ್ರ ಸಂಪನ್ಮೂಲವ್ಯಕ್ತಿ ರವಿಕುಮಾರ್, ಕಾಡಾ ಸದಸ್ಯ ಪಲ್ಲಾಗಟ್ಟೆ ಶೇಖರಪ್ಪ,ಗಿರೀಶ್ ಒಡೆಯರ್ ಇತರರಿದ್ದರು.