ದೇವನಹಳ್ಳಿ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟವರ ಅಂತ್ಯಕ್ರಿಯೆಗೆ ಸ್ಮಶಾನಗಳ ಜಾಗ ಗುರುತಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತ ಸ್ಮಶಾನ ಭೂಮಿ ಗುರುತಿಸುವ ಸಂಬಂಧ ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಿ ಜಮೀನು ಗುರುತಿಸುವ ಜತೆಗೆ ಸ್ಥಳೀಯ ಸಮಸ್ಯೆಗಳನ್ನು ನಿವಾರಿಸಬೇಕಾಗಿರುವುದರಿಂದ ಅಧಿಕಾರಿ ಗಳು ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ.
ಆತಂಕ: ಎಷ್ಟು ಜಾಗ ಗುರುತಿಸಬೇಕು. ಎಲ್ಲೆಲ್ಲಿ ಸರ್ಕಾರಿ ಜಾಗಗಳಿವೆ ಎಂಬುವುದರ ಬಗ್ಗೆ ತಹ ಶೀಲ್ದಾರ್‌ಗಳ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯೋನ್ಮುಖವಾಗಿದೆ. ಒಂದೆರಡು ಪ್ರಕರಣ ಗಳಿಗೆ ಸೀಮಿತವಾಗಿದ್ದ ಜಿಲ್ಲೆಯಲ್ಲಿ ಕೋವಿಡ್ 19 ಭೀತಿ ಆರಂಭಿಸಿದ್ದು, ದಿನವೊಂದಕ್ಕೆ ಸೋಂಕಿತರ ಸಂಖ್ಯೆ ಅರ್ಧ ಶತಕ ದಾಟುತ್ತಿದೆ.
ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯುಆತಂಕ ಎದುರಾಗಿದೆ. ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆಸ್ಪತ್ರೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ತಹಶೀಲ್ದಾರ್‌ಗಳೊಂದಿಗೆ ವಿಡಿಯೋ ಕಾನ್ಫ ರೆನ್ಸ್‌ನಲ್ಲಿ ಚರ್ಚಿಸಿ ತೀರ್ಮಾನಕ್ಕೆ ಮುಂದಾಗ ಲಾಗಿದೆ ಎನ್ನಲಾಗಿದೆ.
ಸೋಂಕಿತರಂತೆ ಸಾವಿನ ಪ್ರಮಾಣವೂ ಹೆಚ್ಚಾದರೆ ಹೇಗೆ ಎಂಬ ಆತಂಕ ಮನೆ ಮಾಡಿದೆ. ಕೋವಿಡ್ 19 ನಿಯಂತ್ರಣಕ್ಕೆ ಬೆವರು ಸುರಿಸುತ್ತಿರುವ ಜಿಲ್ಲಾಡಳಿತ ಕೊರೊ ನಾಗೆ ಬಲಿಯಾದ ಜೀವಗಳಿಗೆ ಸೂಕ್ತ ಅಂತ್ಯ ಕ್ರಿಯೆ ಸಿಗುವಂತೆ ಆಗಲಿ ಎಂಬ ಚಿಂತನೆ ನಡೆಸಿದ್ದು, ಮುನ್ನಚ್ಚರಿಕೆಯಿಂದಾಗಿ ಸ್ಮಶಾನಗಳ ಜಾಗ ಗುರುತಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸರ್ಕಾರಿ ಜಾಗವನ್ನು ಯಾವುದೇ ತೊಂದರೆ ಇಲ್ಲದಂತೆ ಗುರ್ತಿಸಲು ಸೂಚಿಸಲಾಗಿದೆ. ನಗರ ಮತ್ತು ಗ್ರಾಮ ಪ್ರದೇಶದ ಜನಸಂದಣಿ ರಹಿತ ಜಾಗ ಗುರ್ತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ಎನ್.ರವೀಂದ್ರ, ಜಿಲ್ಲಾಧಿಕಾರಿ