Advertisement

ಶಾಲೆಯು ಮನೆಯ ಮುಂದುವರಿದ ಭಾಗವಾಗಲಿ

10:46 AM Aug 26, 2018 | |

ಬೆಂಗಳೂರು: ರಾಜ್ಯದಲ್ಲಿ ಶೇ. 98ರಷ್ಟು ಮಕ್ಕಳಿಗೆ ಶಾಲೆ ಎನ್ನುವುದು ಮನೆಯ ಮುಂದುವರಿಕೆ ಆಗಿಲ್ಲ. ಹಾಗಾಗಿ, ಆ ಮಕ್ಕಳ ಪಾಲಿಗೆ ಶಾಲೆ ಎನ್ನುವುದು ಜೈಲು. ಶಾಲೆ ಬಿಡುತ್ತಿದ್ದಂತೆಗೂಡಿನಿಂದ ಹಕ್ಕಿಗಳು ಹೊರಬಂದಂತೆ ಖುಷಿಯಾಗಿ ಹೊರಗೆ ಬರುತ್ತಾರೆ. ಇದು ಮಕ್ಕಳಲ್ಲಿ ಹಿಂಜರಿಕೆ, ಅಸೂಯೆಯನ್ನು ಉಂಟುಮಾಡುತ್ತದೆ. ಕೆಲವೇ ಕೆಲವು ಮಕ್ಕಳಿಗೆ ಶಾಲೆಯು ಮನೆಯ ಮುಂದುವರಿಕೆ ಭಾಗವಾಗಿದೆ ಎಂದು ಶಿಕ್ಷಣ ಸಚಿವ ಎನ್‌. ಮಹೇಶ್‌ ತಿಳಿಸಿದರು.

Advertisement

ಶಿಕ್ಷಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಕೌನ್ಸೆಲಿಂಗ್‌ ಕೋಶ ಆರಂಭ ಮತ್ತು ಶಿಕ್ಷಣದ ವೊಕೇಶನೈಜೇಷನ್‌ (ಸಿಜಿಸಿಸಿ) ಆರಂಭ ಮತ್ತು ಶಿಕ್ಷಣದ ವೊಕೇಶನೈಜೇಷನ್‌ ಕುರಿತು ವಿಷಯ ತಜ್ಞರೊಂದಿಗೆ ಸಮಾಲೋಚನಾ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿಕ್ಷಣ ಕ್ಷೇತ್ರವು ಮೂಲತಃ ಸೇವಾ ವಲಯ. ಆದರೆ, ವ್ಯಾಪಾರಿ ವಲಯವಾಗಿದೆ. ಇದರಿಂದ ಮಗುವನ್ನು ಎಲ್‌ಕೆಜಿಗೆ ಸೇರಿಸಲಿಕ್ಕೂ 5 ಲಕ್ಷ ರೂ. ಶುಲ್ಕ ಪಾವತಿಸಬೇಕಾಗಿದೆ. ಅದೂ ಅಡ್ವಾನ್ಸ್‌ ಬುಕಿಂಗ್‌ ಮಾಡಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಕಂಠಪಾಠಕ್ಕೆ ಪ್ರಮಾಣಪತ್ರ: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಅನಂತಕುಮಾರ್‌ ಹೆಗಡೆ ಮಾತನಾಡಿ,
ವ್ಯಕ್ತಿತ್ವವನ್ನು ಅಳೆಯುವ ಮಾನದಂಡಗಳೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಬರೀ ಉರು ಹೊಡೆದು (ಕಂಠಪಾಠ)
ಬರೆಯುವುದಕ್ಕೆ “2ಡಿ’ (?) ಪ್ರಮಾಣಪತ್ರ ನೀಡಲಾಗುತ್ತಿದೆ. ಮಗುವಿನ ಯೋಚನೆ, ಬುದಿಟಛಿಶಕ್ತಿಯನ್ನೂ ಪರಿಗಣಿಸುವಂತಾ
ಗಬೇಕು ಎಂದು ಪ್ರತಿಪಾದಿಸಿದರು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ. ಶಿಖಾ ಇತರರಿದ್ದರು.

ಎಲ್ಲ ಮಕ್ಕಳಿಗೂ ಬಸ್‌ಪಾಸ್‌ ಕೊಡಿ
ರಾಜ್ಯದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಬಸ್‌ಪಾಸ್‌ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಗೆ ಮನವಿ ಮಾಡಲಾಗಿದೆ ಎಂದು ಸಚಿವ ಎನ್‌. ಮಹೇಶ್‌ ತಿಳಿಸಿದರು. ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಪಾಸು ವಿತರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಎಲ್ಲ ವಿದ್ಯಾರ್ಥಿಗಳಿಗೂ ನೀಡುವಂತೆ ನಾವು ಕೋರಿದ್ದೇವೆ. ಪ್ರಸ್ತಾವನೆಯು ಮುಖ್ಯಮಂತ್ರಿಗಳ ಮುಂದಿದ್ದು, ಸಾರಿಗೆ ಇಲಾಖೆ ಮತ್ತು ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

Advertisement

ದನ ಕಾಯಲು ಕಳಿಸಿ ಎಂದಿದ್ರು ಮೇಷ್ಟ್ರು!
“ನಿನ್ನ ಮಗನ ನಾಲಿಗೆ ಹೊರಳುವುದಿಲ್ಲ. ಆದ್ದರಿಂದ ದನ ಕಾಯಲು ಕಳುಹಿಸು’ಎಂದು ನನ್ನ ಅಪ್ಪನಿಗೆ ಮೇಷ್ಟ್ರು ಸಲಹೆ
ನೀಡಿದ್ದರು. ಅಂದು ನಾನು ಅಧಿಕಾರಿಯಾಗುವುದಾಗಿ ಶಪಥ ಮಾಡಿದೆ’ ಎಂದು ಶಿಕ್ಷಣ ಸಚಿವ ಮಹೇಶ್‌ ಸ್ಮರಿಸಿದರು. ನಾನು
ಚಿಕ್ಕವನಾಗಿದ್ದಾಗ, ನಾಲಿಗೆ ಹೊರಳುವುದಿಲ್ಲವೆಂದು ದನ ಕಾಯಲು ಕಳುಹಿಸುವಂತೆ ನಮ್ಮೂರಿನ ಮೇಷ್ಟ್ರು ಸಲಹೆ ಮಾಡಿದ್ದರು. ಆ ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಕೆಎಎಸ್‌ ಅಧಿಕಾರಿಯಾದೆ. ಈಗ ಶಿಕ್ಷಣ ಇಲಾಖೆಗೆ ಸಚಿವನಾಗಿದ್ದೇನೆ. ನಮ್ಮ ಇಡೀ ವಂಶದಲ್ಲಿ ಸಾಕ್ಷರತೆ ಶುರುವಾಗಿದ್ದು ನನ್ನಿಂದಲೇ ಹಾಗೂ ನಾನು ಎಂಎ ಅರ್ಥಶಾಸ್ತ್ರದಲ್ಲಿ ಫ‌ಸ್ಟ್‌ಕ್ಲಾಸ್‌ನಲ್ಲಿ ಪಾಸಾದೆ ಎಂದು ಮೆಲುಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next