Advertisement

ಶಾಲೆ ಕಟ್ಟಡವೇ ಆಯ್ತುಗಡಿನಾಡ ಎಕ್ಸಪ್ರಸ್‌

09:40 PM Mar 23, 2019 | Team Udayavani |

ಆಳಂದ: ಛುಕ್‌..ಬುಕ್‌.. ಸದ್ದು ಇಲ್ಲದೆ ಬಂತು ಗಡಿನಾಡಿನ ಫಲಕ ಹಾಕಿದ ಎಕ್ಸಪ್ರಸ್‌ ರೈಲು. ಬರುತ್ತಿದ್ದಂತೆ ತಡಮಾಡದೆ ಬಡ-ಬಡನೆ ಹತ್ತಿದರು ಮಕ್ಕಳು, ಶಿಕ್ಷಕರು. ಆದರೂ ಅದು ಮುಂದಕ್ಕೆ ಹೋಗಲಿಲ್ಲ. ಹೋಗದಿದ್ದರೂ ಅವರೆಲ್ಲರಿಗೂ ರೈಲಿನಲ್ಲೇ ಕುಳಿತಂತೆ ಭಾಸವಾಯಿತು.

Advertisement

ಇಂಥಹದ್ದೊಂದು ಗಳಿಗೆಗೆ ಸಾಕ್ಷಿಯಾಗಲು ಕಾರಣವಾಗಿದ್ದು ಗುರು ಬಂಗರಗಿ ಅವರ ಕಲಾ ತಂಡ. ಈ ತಂಡ ತಾಲೂಕಿನ ನಿರಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ದಾನಿಗಳ ನೆರವಿನಿಂದ ಬಿಡಿಸಿದ ರೈಲಿನ ಪೇಂಟಿಂಗ್‌ ಎಲ್ಲರ ಗಮನ ಸೆಳೆಯುತ್ತಿದೆ. 

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಾರೆ. ಕೂಲಿ ಮಾಡುವರು ಸಹ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಶಾಲೆ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ.

ಶಾಲೆಯ ಅಭಿವೃದ್ಧಿಗಾಗಿ ದಾನಿಗಳ ಸಹಕಾರ ಪಡೆದು, ಉತ್ತಮ ಕಲಿಕಾ ವಾತಾವರಣ ಕಲ್ಪಿಸಲು ಸತತ ಪ್ರಯತ್ನ ನಡೆದಿದೆ. ಗ್ರಾಮದ ಯುವ ಮುಖಂಡ ವಿಜಯಕುಮಾರ ಕೋರೆ ಸಹಾಯ ಹಸ್ತದಿಂದ ಶಾಲೆಗೆ ರೈಲು ಬಣ್ಣ ಲೇಪನ ಮಾಡಿಸಲಾಗಿದೆ ಎಂದು ಶಾಲೆಯ ಶಿಕ್ಷಕ ರಾಜ್ಯ ಸಂಪನ್ಮೂಲ ವ್ಯಕ್ತಿ ಹುಸೇನ ವಡಗೇರಿ ಹರ್ಷ ವ್ಯಕ್ತಪಡಿಸುತ್ತಾರೆ.
 
ಗ್ರಾಪಂ ಅಭಿವೃದ್ಧಿ ಅಧಿಕಾರಿ ದಶರಥ ಪಾತ್ರೆ ಕುಡಿಯಲು ನೀರಿನ ವ್ಯವಸ್ಥೆ ಹಾಗೂ ಮುಖ್ಯ ಶಿಕ್ಷಕರ ಕೋಣೆಗೆ ಅಂದವಾದ ನೆಲಹಾಸಿಗೆ ಮತ್ತು ನಲಿಕಲಿ ಮಾದರಿ ಶಾಲೆ ಮಾಡುವ ಉದ್ದೇಶದಿಂದ ವೃತ್ತಾಕಾರದ ಟೇಬಲ್‌ಗ‌ಳನ್ನು ಕೊಡಿಸಿದ್ದಾರೆ.
 
ಇನ್ನೊಬ್ಬ ದಾನಿ, ನಿರಗುಡಿ ಗ್ರಾಪಂ ಅಧ್ಯಕ್ಷ ಸಿದ್ಧಾರಾಮ ದೇಶಮುಖ ಮಕ್ಕಳಿಗೆ ಟೇಬಲ್‌ಗ‌ಳ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಈಗಾಗಲೇ ಇನ್‌ಫೋಸಿಸ್‌ ಸಂಸ್ಥೆ ಶಾಲೆಗೆ ಐದು ಕಂಪ್ಯೂಟರ್‌ಗಳನ್ನು ದೇಣಿಗೆಯಾಗಿ ನೀಡಿದ್ದು, ಚಂದ್ರಶೇಖರ ಕಟ್ಟಿಮನಿ ಅವರ ಶ್ರಮವೂ ಇದರಲ್ಲಿದೆ ಎಂದು ಶಿಕ್ಷಕಿ ಚಂದ್ರಕಲಾ ಮೂಲಗೆ ತಿಳಿಸುತ್ತಾರೆ. 

ಕ್ರಿಯಾಶೀಲ ಶಿಕ್ಷಕರಾದ ಜೀತೇಂದ್ರ ತಳವಾರ, ಎ.ಜಿ.ಟಿ ಶಿಕ್ಷಕರು ಪ್ರತಿಭಾವಂತ ವಿದ್ಯಾರ್ಥಿನಿಯಾದ ಶಬಾನಾಳಿಗೆ ಹತ್ತನೇ ತರಗತಿಗೆ ಬೇಕಾದ ಎಲ್ಲ ಪರಿಕರಗಳನ್ನು ವ್ಯವಸ್ಥೆ ಮಾಡಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಗಳಲ್ಲಿ ಉದ್ಯೋಗಸ್ಥರಾದವರು ಇಂದಿನ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿದ್ದಾರೆ ಎಂದು ಮುಖ್ಯ ಶಿಕ್ಷಕ ದಿಗಂಬರ ಬಂಡಗರ ಹರ್ಷ ವ್ಯಕ್ತಪಡಿಸುತ್ತಾರೆ.

Advertisement

ಶಿಕ್ಷಕರಾದ ಚಂದ್ರಕಲಾ ಮೂಲಗೆ, ಚಂದ್ರಶೇಖರ ಕಟ್ಟಿಮನಿ, ಜೇತೇಂದ್ರ ತಳವಾರ, ರಾಜೇಂದ್ರ ನಾಗೂರೆ, ಅತಿಥಿ ಶಿಕ್ಷಕರಾದ ಜಯಶ್ರೀ, ಪ್ರೀತಿ ಮೂಲಗೆ, ಅಂಬಿಕಾ ನಾಗೂರೆ, ಸಂಗೀತಾ ಗಂಭೀರೆ, ಶ್ರವಣಕುಮಾರ, ರಾಹುಲ್‌ ಮೂಲಗೆ, ವಿಕಾಸ ದೇಶಮುಖ ರವಿ ಹೀರಾಪುರ ಹಾಗೂ ನಿರಗುಡಿ ಗ್ರಾಮಸ್ಥರು ಶಾಲೆಯನ್ನು ಮಾದರಿಯನ್ನಾಗಿಸುವ ನಿಟ್ಟಿನಲ್ಲಿ ಸಂಕಲ್ಪ ತೊಟ್ಟಿದ್ದಾರೆ.

„ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next