Advertisement
ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಕೆ.ಎ.ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿ, 2023-24ನೇ ಸಾಲಿನ ಬಜೆಟ್‌ನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ 20 ಲಕ್ಷ ರೂ. ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಮುಂದುವರಿಸುವ ಬಗ್ಗೆ ಘೋಷಿಸಲಾಗಿದೆ.
Related Articles
ಬೆಂಗಳೂರು: “ನೀರಾ ನಶೆ’ ಬಗ್ಗೆ ಮೇಲ್ಮನೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆದು ಸದಸ್ಯರು ಪರಸ್ಪರ ಕಾಲೆಳೆದುಕೊಂಡ ಪ್ರಸಂಗ ಶುಕ್ರವಾರ ನಡೆಯಿತು.
Advertisement
ಸಾರಾಯಿ ನಿಷೇಧಕ್ಕೆ ಸಂಬಂಧಿಸಿದ ಪ್ರಶ್ನೋತ್ತರ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಸಾರಾಯಿ, ಶೇಂದಿ ನಿಷೇಧ ಆಗಿದೆ. ನೀರಾ ತೆಗೆಯುವ ಪದ್ಧತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅದಕ್ಕೆ ನೀವು ಎಂದಾದರೂ ನೀರಾ ಕುಡಿದಿದ್ದೀರಾ ಎಂದು ಡಿಸಿಎಂ ಕೇಳಿದರು. ನಾನು ನಿಮ್ಮ ಹಾಗೆ ದಪ್ಪ ಇಲ್ಲ; ಕುಡಿದರೆ ತಡೆದುಕೊಳ್ಳುವ ಶಕ್ತಿ ಇಲ್ಲ, ಏನಾದರೂ ಹೆಚ್ಚು ಕಡಿಮೆ ಆದರೆ ಎಂದು ಕುಡಿಯುವ ಧೈರ್ಯ ಮಾಡಿಲ್ಲ ಎಂದು ಪೂಜಾರಿ ಹೇಳಿದರು. ಪ್ರಕೃತಿ ಮುಂದೆ ಯಾರೂ ಏನೂ ಮಾಡಕ್ಕಾಗುವುದಿಲ್ಲ. 30 ವರ್ಷಗಳ ಹಿಂದೆ ನಾನು ನೀರಾ ಕುಡಿದಿದ್ದೆ, ಅದೊಂದು ತರಹ ಜ್ಯೂಸ್ ಇದ್ದಂತಿತ್ತು. ಅದನ್ನು ಕುಡಿದು ಅಮಲು ಏರಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಆಗ ಬಿ.ಕೆ. ಹರಿಪ್ರಸಾದ್, ಪೂಜಾರಿಯವರು ಕುಡಿಯುವುದಿಲ್ಲ; ಅವರಿಗೇನಿ ದ್ದರೂ ಕುಡಿಸಿ ಅಭ್ಯಾಸವಿದೆ ಎಂದರು. ಅದು ಅವರ ವೃತ್ತಿ ಎಂದು ಶಿವಕುಮಾರ್ ಹೇಳಿದಾಗ, ವೃತ್ತಿ ಅಲ್ಲ, ನಮ್ಮ ಉಪ ಕಸಬು. ಮೊದಲೇ ನಾವು ಹೆಂಡ ಮಾರು ವವರು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ ಎಂದು ಹರಿಪ್ರಸಾದ್ ಹೇಳಿದರು.