ಹೊಸಕೋಟೆ: ಪಟ್ಟಣದ ನಗರಸಭೆಗೆ 2018-19ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ 25.16 ಕೋಟಿ ರೂ.,ಗಳಷ್ಟು ಆದಾಯ ನಿರೀಕ್ಷಿಸಿದ್ದು, 69.43 ಲಕ್ಷ ರೂ.,ಗಳ ಉಳಿತಾಯ ಬಜೆಟ್‌ನ್ನು ನಗರಸಭೆ ಅಧ್ಯಕ್ಷ ಎನ್.ಟಿ.ಹೇಮಂತಕುಮಾರ್ ಮಂಡಿಸಿದರು.
ಸಂಪನ್ಮೂಲ ಸಂಗ್ರಹಣೆ ನಿರೀಕ್ಷೆ: ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ 4 ಕೋಟಿ ರೂ.,(ಹಿಂದಿನ ಸಾಲಿನ 3.16 ಕೋಟಿ ರೂ.,ಗಳಿಗಿಂತಲೂ ಶೇ. 21ರಷ್ಟು ಹೆಚ್ಚಳ ನಿರೀಕ್ಷೆ), ರಾಜ್ಯ ಹಣಕಾಸು ನಿಧಿ ವೇತನ ಅನುದಾನ 2.35 ಕೋಟಿ ರೂ., ವಿದ್ಯುತ್ ಅನುದಾನ 2.36 ಕೋಟಿ ರೂ., ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 36 ಲಕ್ಷ ರೂ., ಕಟ್ಟಡ, ಉದ್ಯಮ ಪರವಾನಗಿ ಶುಲ್ಕದಿಂದ 8 ಲಕ್ಷ ರೂ., ನೆಲಬಾಡಿಗೆಯಿಂದ 14.21 ಲಕ್ಷ ರೂ., ನೈರ್ಮಲೀಕರಣ, ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಅನುದಾನ 25 ಲಕ್ಷ ರೂ., ನೀರು ಸರಬರಾಜು ತೆರಿಗೆ 55 ಲಕ್ಷ ರೂ., ಬರ ಪರಿಹಾರ ಅನುದಾನ 50 ಲಕ್ಷ ರೂ., ನೀರು ಸರಬರಾಜು ಸಂಪರ್ಕ ಶುಲ್ಕದಿಂದ 13.50 ಲಕ್ಷ ರೂ., ಸ್ವತ್ಛ ಭಾರತ್ ಮಿಷನ್ ಅನುದಾನ 30 ಲಕ್ಷ ರೂ., ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ 2.50 ಕೋಟಿ
ರೂ.,ಗಳು ಸಂಪನ್ಮೂಲ ಸಂಗ್ರಹಣೆಗೆ ನಿರೀಕ್ಷಿಸಿರುವ ಪ್ರಮುಖ ಆದಾಯ ಮೂಲಗಳಾಗಿವೆ ಎಂದು ಹೇಳಿದ್ದಾರೆ.
ವಿವಿಧ ಯೋಜನೆ: ಸಿಬ್ಬಂದಿ ವೇತನ, ಭತ್ಯೆಗಾಗಿ 2.59 ಕೋಟಿ ರೂ., ಹೊರಗುತ್ತಿಗೆ ಬೀದಿ ದೀಪಗಳ ನಿರ್ವಹಣಾ ವೆಚ್ಚಕ್ಕಾಗಿ 2.5 ಕೋಟಿ ರೂ., ಬೀದಿ ದೀಪಗಳ ವಿದ್ಯುತ್ ವೆಚ್ಚ, ಹೊರಗುತ್ತಿಗೆ ನೈರ್ಮಲ್ಯ ನಿರ್ವಹಣಾ ವೆಚ್ಚ (ಬೀದಿಗಳ ಸ್ವತ್ಛತೆ), 2.20 ಕೋಟಿ ರೂ., ನೀರು ಸರಬರಾಜು ವಿದ್ಯುತ್ ಸ್ಥಾವರಗಳ ವೆಚ್ಚ 1.41 ಕೋಟಿ ರೂ., ನೀರು ಪೈಪ್ ಲೈನ್ ದುರಸ್ತಿ ಕಾಮಗಾರಿ ವೆಚ್ಚಗಳು 2.50 ಕೋಟಿ ರೂ., ವಾಹನಕ್ಕೆ ಇಂಧನ, ದುರಸ್ತಿ ಮತ್ತು ನಿರ್ವಹಣೆಗೆ 37 ಲಕ್ಷ ರೂ., ನೈರ್ಮಲ್ಯ ಸಾಮಗ್ರಿಗಳ ವೆಚ್ಚಕ್ಕೆ 10 ಲಕ್ಷ ರೂ., ಗಳನ್ನು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಉಪಾಧ್ಯಕ್ಷೆ ಗಿರಿಜಮ್ಮ, ಸದಸ್ಯರು, ಪೌರಾಯುಕ್ತ ನಿಸಾರ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.