Advertisement

ಸಂಯುಕ್ತಾ ಈಗ ವೈಲ್ಡ್‌ಲೈಫ್ ಫೋಟೋಗ್ರಾಫ‌ರ್‌

12:00 PM Jun 06, 2017 | Team Udayavani |

ಸಂಯುಕ್ತಾ ಹೊರನಾಡು ಈಗ ವೈಲ್ಡ್‌ಲೈಫ್ ಫೋಟೋಗ್ರಾಫ‌ರ್‌. ಕಾಡೆಲ್ಲ ಸುತ್ತಾಡಿ ಪ್ರಾಣಿಗಳ ಫೋಟೋ ತೆಗೆಯೋದರಲ್ಲಿ ಸಂಯುಕ್ತಾ ಬಿಝಿ. ಅವರ ವೈಲ್ಡ್‌ಲೈಫ್ ಫೋಟೋಗ್ರಾಫಿಯ ಆಸಕ್ತಿ ಎಷ್ಟಿದೆ ಎಂದರೆ ಈಗ ವಿದೇಶಕ್ಕೂ ಹೊರಟಿದ್ದಾರೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು.

Advertisement

ನಟನೆ ಬಿಟ್ಟು ಸಂಯುಕ್ತಾ ಯಾವಾಗ ಫೋಟೋಗ್ರಾಫ‌ರ್‌ ಆದರು ಎಂದು. ಸಂಯುಕ್ತಾಗೆ ಫೋಟೋಗ್ರಫಿ ಆಸಕ್ತಿ ಮುಂಚಿನಿಂದಲೂ ಇತ್ತು. ಆದರೆ ಈಗ ವೈಲ್ಡ್‌ಲೈಫ್ ಫೋಟೋಗ್ರಾಫ‌ರ್‌ ಆಗಿರೋದು ರಿಯಲ್‌ ಆಗಿ ಅಲ್ಲ, ರೀಲ್‌ ಮೇಲೆ. ಹೌದು, ಸಂಯುಕ್ತಾ ಹೊರನಾಡು ಈಗ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ವೈಲ್ಡ್‌ಲೈಫ್ ಫೋಟೋಗ್ರಾಫ‌ರ್‌ ಆಗಿ ನಟಿಸುತ್ತಿದ್ದಾರೆ.

ಈಗಾಗಲೇ ಆ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೆ ಚಿತ್ರತಂಡ ಶ್ರೀಲಂಕಾದಕ್ಕೆ ಹಾರಲಿದೆ. ಸಂಯುಕ್ತಾ ನಟಿಸಿರುವ “ಸರ್ಕಾರಿ ಕೆಲಸ ದೇವರ ಕೆಲಸ’ ಬಿಡುಗಡೆಯಾಗಿದ್ದು, “ದಯವಿಟ್ಟು ಗಮನಿಸಿ’, “ಕಾಫಿ ತೋಟ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅಂದಹಾಗೆ, ವೈಲ್ಡ್‌ ಲೈಫ್ ಫೋಟೋಗ್ರಾಫ‌ರ್‌ ಗೆಟಪ್‌ನಲ್ಲಿ ಸಂಯುಕ್ತಾ ಹೀಗೆ ಕಾಣುತ್ತಾರೆ ನೋಡಿ … 

Advertisement

Udayavani is now on Telegram. Click here to join our channel and stay updated with the latest news.

Next