Advertisement

ನಾಳೆಯಿಂದ ತಿರುಪತಿ ಲಡ್ಡು ಮಾರಾಟ ಆರಂಭ

11:45 PM May 23, 2020 | Sriram |

ಕೋವಿಡ್-19ದಿಂದಾಗಿ ಲಡ್ಡು ಮಾರಾಟವನ್ನು ನಿಲ್ಲಿಸಿದ್ದ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಇದೀಗ ಪ್ರಸಾದ ಲಡ್ಡು ಮಾರಾಟಕ್ಕೆ ಅನುಮತಿ ನೀಡಿದೆ. ಮೇ25ರಿಂದ ಆಂಧ್ರಪ್ರದೇಶದ 13 ಜಿಲ್ಲೆಗಳಲ್ಲಿ ತಿರುಪತಿ ಲಡ್ಡು ದೊರೆಯಲಿದೆ.

Advertisement

ಮಾ 20ರಂದು ದೇವಸ್ಥಾನವು ಇತಿಹಾಸದಲ್ಲೇ ಮೊದಲ ಬಾರಿಗೆ ಬಾಗಿಲು ಮುಚ್ಚಿತ್ತು. ಇದೀಗ ಲಾಕ್‌ ಡೌನ್‌ ನಿಯಮ ಸಡಿಲವಾಗಿರುವ ಹಿನ್ನೆಲೆಯಲ್ಲಿ ತಿರುಪತಿ ಲಡ್ಡು ಪ್ರಸಾದ ಶೇ.50ರಷ್ಟು ರಿಯಾಯಿತಿ ದರದಲ್ಲಿ ಭಕ್ತಾದಿಗಳಿಗೆ ಲಭ್ಯವಾಗಲಿದೆ. ಅದೇ ಲಡ್ಡು ಪ್ರಸಾದ 25 ರು. ಗಳಿಗೆ ದೊರೆಯಲಿದೆ. 1000ಕ್ಕೂ ಹೆಚ್ಚು ಲಡ್ಡು ಬೇಕಾದವರು ತಮ್ಮ ಹೆಸರು, ಮೊಬೈಲ್‌ ನಂಬರ್‌ ಮತ್ತಿತರ ಮಾಹಿತಿಯನ್ನು 5 ದಿನಗಳಿಗೆ ಮುಂಚಿತವಾಗಿ ನೀಡಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next