ಕುಷ್ಟಗಿ: ಪುರಸಭೆ ಆವರಣದಲ್ಲಿರುವ ನೆಲಮಟ್ಟದ ಜಲಾಗಾರ ಹಾಗೂ ಓವರ್ ಹೆಡ್ ಟ್ಯಾಂಕ್ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯದ ಸೇಫ್ಟಿಕ್ ಟ್ಯಾಂಕ್ ಭರ್ತಿಯಾಗಿ ಹರಿದರೂ ಪುರಸಭೆ ಕ್ರಮ ಕೈಗೊಳ್ಳುತ್ತಿಲ್ಲ. ಪುರಸಭೆ ಆವರಣದಲ್ಲಿರುವ ಸೇಫ್ಟಿಕ್ ಟ್ಯಾಂಕ್ ಭರ್ತಿಯಾಗಿ ಓವರ್ ಹೆಡ್ ಟ್ಯಾಂಕ್ ಅಡಿಯಲ್ಲಿ ಹಾಗೂ ನೆಲಮಟ್ಟದ ಜಲ ಸಂಗ್ರಹಗಾರ ಪಕ್ಕದಲ್ಲೇ ಹರಿದಿದೆ. ಇಷ್ಟಾಗಿಯೂ ಪುರಸಭೆಯ ಸಕ್ಕಿಂಗ್ ಯಂತ್ರ ಬಳಸಿ ಇಲ್ಲವೇ ಖಾಸಗಿ ಟ್ಯಾಂಕರ್ ಮೂಲಕ ಪಟ್ಟಣದ ಹೊರವಲಯದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಬೇಕಿತ್ತು. ಆದರೆ ಪುರಸಭೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ.
ದುರ್ನಾತ ನಿವಾರಿಸಲು ಸಾರ್ವಜನಿಕ ಶೌಚಾಲಯ ಗುತ್ತಿಗೆ ವಹಿಸಿಕೊಂಡವರು ಸೇಫ್ಟಿಕ್ ಟ್ಯಾಂಕ್ ಮೂಲಕ ಪೈಪ್‌ಲೈನ್ ಬಳಸಿ ಚರಂಡಿಗೆ ಸಂಪರ್ಕ ಕಲ್ಪಿಸಿ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ. ಈ ರೀತಿಯ ಕಾಟಾಚಾರ ಕ್ರಮ ಗಮನಕ್ಕೆ ಬರುತ್ತಿದ್ದಂತೆ ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ, ಅಂಬಣ್ಣ ಭಜಂತ್ರಿ, ರಾಜೇಶ ಪತ್ತಾರ ಅವರು ಪುರಸಭೆ ಅಧ್ಯಕ್ಷ ಗಂಗಾಧರ ಸ್ವಾಮಿ ಹಿರೇಮಠ ಅವರ ಗಮನಕ್ಕೆ ತಂದರು.
ನಂತರ ಅಧ್ಯಕ್ಷರು ಕೂಡಲೇ ಓವರ್ ಹೆಡ್ ಟ್ಯಾಂಕ್ ಹಾಗೂ ನೆಲಮಟ್ಟದ ಜಲ ಸಂಗ್ರಹಗಾರ ಪಕ್ಕದಲ್ಲಿ ಹರಿದಿರುವ ಸೇಪ್ಟಿಕ್ ಟ್ಯಾಂಕ್ ಹೊಲಸನ್ನು ಸ್ವತ್ಛಗೊಳಿಸಬೇಕೆಂದು ನೈರ್ಮಲ್ಯಾ ಧಿಕಾರಿ ಮಹೇಶ ಅಂಗಡಿ ಅವರನ್ನು ತರಾಟೆ ತೆಗೆದುಕೊಂಡರು. ಇದೇ ವೇಳೆ ಪುರಸಭೆ ಸದಸ್ಯ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ ಅವರು ಸಾರ್ವಜನಿಕ ಶೌಚಾಲಯ ನಿರ್ವಹಣೆ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ತರಾಟೆತೆಗೆದುಕೊಂಡರಲ್ಲದೇ, ಸದರಿ ಶೌಚಾಲಯ ನಿರ್ವಹಣೆ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ:ಎಪಿಎಂಸಿಯಲ್ಲಿ ಲಾರಿ ಸಾಲು-ಆಕ್ರೋಶ
ಪುರಸಭೆ ಬಳಿಯ ಸಾರ್ವಜನಿಕ ಶೌಚಾಲಯ ಸೇಪ್ಟಿಕ್ ಟ್ಯಾಂಕ್ ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಕರೆಯಿಸಿಕೂಡಲೇ ಸಕ್ಕಿಂಗ್ ಯಂತ್ರ ಬಳಸಿ, ಸೇಫ್ಟಿಕ್ ಟ್ಯಾಂಕ್ ಖಾಲಿ ಮಾಡಲುಸೂಚಿಸಲಾಗಿದೆ
ಅಶೋಕ ಪಾಟೀಲ, ಪುರಸಭೆ ಮುಖ್ಯಾಧಿಕಾರಿ