Advertisement
ಲಕ್ಷಾಂತರ ಜನರಿರುವ ಇಡೀ ಸಮ್ಮೇಳನಕ್ಕೆ ನಿತ್ಯ ಊಟ ಹಾಕುವ 68 ವರ್ಷದ ಬಾಬುಲಾಲ್ ಪ್ರಜಾಪತಿ, ಶಾಲೆ ಕಲಿತವರೇ ಅಲ್ಲ. ಅಡುಗೆಯಲ್ಲಿ ಬಲು ಜಾಣ. 1,200 ಬಾಣಸಿಗರು, ಅಡುಗೆ ಸಹಾಯಕರನ್ನು ಸಂಘಟಿಸಿಕೊಂಡು, ನಾನಾ ಭಾಗಗಳಿಂದ ತರಕಾರಿಯನ್ನು ಟ್ರಕ್ಕಿನಲ್ಲಿ ತುಂಬಿಕೊಂಡು ಹುಬ್ಬಳ್ಳಿಯಿಂದ ಕಲಬುರಗಿಗೆ ಬಂದಿದ್ದಾರೆ. ಅಕ್ಷರ ಹಬ್ಬಕ್ಕೆ ಬಂದವರ ಹೊಟ್ಟೆ ಸಂತೃಪ್ತವಾಗುವಂತೆ ನೋಡಿಕೊಳ್ಳುವುದರಲ್ಲಿಯೇ ಖುಷಿ ಕಾಣುವ “ನಳಮಹಾರಾಜ’.
Related Articles
Advertisement
“ಟೇಮ್ ಆತು ಅಂತ ನಾವು ಡ್ನೂಟಿ ಬಿಟ್ಟು ಹೋಗಲ್ರೀ… ನಾವೇ ಹೋದ್ರೆ, ತಿಳಿದವರಾರೂ ಸಮ್ಮೇಳನದಾಗ ಎಂಜಲು ಬಾಚಲ್ರೀ, ಕಸ ಎತ್ತಂಗಿಲ್ರೀ. ನಾವಲ್ಲದೇ ಇನ್ಯಾರಿ ಸರ ಮಾಡೋರು? ಇಷ್ಟ್ ಜನ ಸೇರಿದ್ದು ನನ್ನ ಬದುಕಲ್ಲೇ ನೋಡಿಲ್ರೀ. ಇವರ ಸೇವೆ ಮಾಡೋ ಅವ್ಕಾಶ ಸಿಕ್ಕಿದ್ದೇ ನನ್ ಪುಣ್ಯ’ ಎನ್ನುತ್ತಾ ಪೊರಕೆ ಹಿಡಿದು ಗುಡಿಸುತ್ತಲೇ ಇದ್ದ ಭಾರತೀಬಾಯಿಯ ಕಣ್ಣುಗಳಲ್ಲಿ ಕಂಡಿದ್ದು ಬಸವಣ್ಣ ಹಚ್ಚಿದ ಕಾಯಕದ ಹಣತೆ.
ಬೆಳಗ್ಗೆ ಐದಕ್ಕೆ ಬಂದು, ರಾತ್ರಿ ಹತ್ತಾದರೂ ಇವರ ಕೆಲಸ ಮುಗಿದಿರುವುದಿಲ್ಲ. ಕೇವಲ ಇವರು ಮಾತ್ರವೇ ಅಲ್ಲ. ಇಲ್ಲಿ ಸೋಮನ ಕುಣಿತದವರು, ಸುಗ್ಗಿ ಹಾಡಿಗೆ ಹೆಜ್ಜೆ ಹಾಕಿದ ವೃದ್ಧೆಯರಾರೂ, ಸ್ಲೇಟ್ ಬಳಪ ಹಿಡಿದವರಲ್ಲ. ಇವರ ಬದುಕೇ ನೋವುಂಡ ಅಖಂಡ ಕಾವ್ಯ. ಸಮ್ಮೇಳನ, ಅಕ್ಷರಿಗಳಿಗೆ ಜ್ಞಾನದೂಟ ನೀಡುತ್ತಿದ್ದರೆ, ಅನಕ್ಷರಿಗಳಿಗೆ ದಿನಗೂಲಿಯಾಗಿ ಹೊಟ್ಟೆ ತುಂಬಿಸಿ, ಸಾರ್ಥಕತೆ ಮೆರೆದಿತ್ತು.
ಕಲಬುರಗಿ ಸಾಕ್ಷರತೆ ಪ್ರಮಾಣದಲ್ಲಿ ರಾಜ್ಯದಲ್ಲಿಯೇ 26ನೇ ಸ್ಥಾನದಲ್ಲಿದೆ (2011 ಜನಗಣತಿ ಆಧಾರ). ಬಡತನದ ಕಾರಣ ಜನರು ಗುಳೆ ಹೋಗುವುದರಿಂದ, ಇಲ್ಲಿನ ಹಲವರು ಶಾಲೆಯ ಮೆಟ್ಟಿಲು ಹತ್ತುವುದಿಲ್ಲ.-ಪ್ರೊ. ಸಂಗೀತಾ ಕಟ್ಟಿಮನಿ, ಶಿಕ್ಷಣ ತಜ್ಞೆ, ಕಲಬುರಗಿ ಕನ್ನಡಿಗರೆಲ್ಲರ ಸಂಗಮ ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಆಗಿದೆ. ಸಾಹಿತ್ಯ ಕುರಿತ ಹಲವು ಅರ್ಥಪೂರ್ಣ ಗೋಷ್ಠಿಗಳು ನಡೆಸಿದ್ದು ಮನಸಿಗೆ ಖುಷಿ ನೀಡಿದೆ.
-ಪೂಜಾ ಬೋನ್ಸ್ಲೆ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಕರು ನಿರ್ವಹಿಸಿ¨ªಾರೆ. ಊಟ ಸೇರಿ ಎಲ್ಲಿಯೂ ಯಾವುದೇ ಸಮಸ್ಯೆ ಕಂಡು ಬರಲಿಲ್ಲ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವೆ.
-ಭಾರತಿ ಅಪ್ಪಾಸಾಹೇಬ್ ಇದೇ ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದೇನೆ. ಅಬ್ಟಾ, ಎಷ್ಟೊಂದು ಸಂಖ್ಯೆ! ಕನ್ನಡಿಗರ ಹೃದಯದಲ್ಲಿ ಸಾಹಿತ್ಯ ಅಭಿರುಚಿ ಅರಳಿ, ಸಮ್ಮೇಳನ ಸಾರ್ಥಕವಾಗಲಿ.
-ವಂದನಾ ಮಕ್ಕಳ ಸಾಹಿತ್ಯದ ಕುರಿತ ವಿಚಾರಗಳಿಗೆ ಮತ್ತಷ್ಟು ಗೋಷ್ಠಿಗಳ ಅಗತ್ಯವಿತ್ತು. ಕಾರಣ, ಇಂದಿನ ಮಕ್ಕಳೇ ಕನ್ನಡದ ಭವಿಷ್ಯ. ಅವರಿಗೆ ಸಾಹಿತ್ಯದ ಮೇಲೆ ಪ್ರೀತಿ ಹುಟ್ಟಿಸುವ ಕೆಲಸ ಆಗಬೇಕಿತ್ತು.
-ವಿದ್ಯಾಶ್ರೀ ವಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಿವೆ. ಈ ಕುರಿತು ಮತ್ತಷ್ಟು ಚರ್ಚೆಗೆ ಸಾಹಿತ್ಯ ಸಮ್ಮೇಳನ ವೇದಿಕೆ ಆಗಬೇಕಾಗಿತ್ತು.
-ಪ್ರಭಾಕರ್ * ಕೀರ್ತಿ ಕೋಲ್ಗಾರ್