Advertisement
ಅವರು ಲಾಯಿಲಾದ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆದ ಬೆಳ್ತಂಗಡಿ ರೋಟರಿಯ ಆ್ಯನ್ಸ್ ಕ್ಲಬ್‌ನ 2017-18ನೇ ಸಾಲಿನ ಪದಾ ಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.ವೈಷ್ಣವಿ ಎಂ. ಪ್ರಭು ಅಧ್ಯಕ್ಷರಾಗಿ ಹಾಗೂ ಶೆ„ಲಾ ಎಸ್. ಕಾಮತ್ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಗಾಯತ್ರಿ ಶ್ರೀಧರ್, ಪಲ್ಲವಿ ತುಳುಪುಳೆ, ಡಾ| ಸುಶ್ಮಾ ಡೋಂಗ್ರೆ, ಜಂಟಿ ಕಾರ್ಯದರ್ಶಿಯಾಗಿ ಭಾರತಿ ಅಮರನಾಥ್ ಪ್ರಸಾದ್, ಖಜಾಂಚಿಯಾಗಿ ಡಾ| ದೀಪಾಲಿ ಡೋಂಗ್ರೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜಶ್ರೀ ಡಿ. ರಾವ್ , ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತಿ ಪಿ. ಪ್ರಭು ಹಾಗೂ ಸಲಹಾ ಮಂಡಳಿ ಸದಸ್ಯೆಯರಾಗಿ ಸರಸ್ವತಿ ಆರ್. ಭಟ್, ಪ್ರಭಾ ಪಿ. ಬಾಳಿಗ, ಡಾ| ಭಾರತಿ ಗೋಪಾಲಕೃಷ್ಣ ಅ ಧಿಕಾರ ಸ್ವೀಕರಿಸಿದರು. ಆನ್ಸ್ ಕ್ಲಬ್ ನಿರ್ಗಮನ ಅಧ್ಯಕ್ಷೆ ಡಾ| ಆಶಾ ರಾಘವೇಂದ್ರ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ರಶ್ಮಿ ಭಿಡೆ ಕಳೆದ ಸಾಲಿನ ಚಟುವಟಿಕೆಗಳ ವರದಿ ನೀಡಿದರು.
ವರಿಯುತ್ತಿರುವ ಈಶಾ ಶರ್ಮ ಹಾಗೂ ಉಜಿರೆಯ ಸ್ನೇಹಕಿರಣ ನರ್ಸರಿ ಶಾಲೆ ಅಧ್ಯಾಪಕಿ ಜಾನೆಟ್ ಮೊರಾಸ್ ಅವರನ್ನು ಸಮ್ಮಾನಿಸಲಾಯಿತು. ರಾಜಶ್ರೀ ರಾವ್ ಅವರು ಕೊಡಮಾಡಿದ 25,000 ರೂ. ವಿದ್ಯಾರ್ಥಿ ವೇತನವನ್ನು ಬೆಳ್ತಂಗಡಿಯ ವಾಣಿ ವಿದ್ಯಾ ಸಂಸ್ಥೆಗೆ ನೀಡಲಾಯಿತು. ಸುನಿಲ್ ಶೆಣೆ„ ಕೊಡಮಾಡಿದ 10,000 ರೂ. ವಿದ್ಯಾರ್ಥಿ ವೇತನವನ್ನು ಲಾಯಿಲಾ ಗ್ರಾಮದ ದ.ಕ.ಜಿ.ಪಂ.ಹಿ. ಪ್ರಾ. ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿ ಹೇಮಲತಾ ಅವರಿಗೆ ನೀಡಲಾಯಿತು. ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ| ಸುಧಿಧೀರ್ ಪ್ರಭು ನೂತನ ತಂಡಕ್ಕೆ ಪದಪ್ರದಾನ ಮಾಡಿದರು. ಮನೋರಮಾ ಭಟ್ ಹಾಗೂ ಲಿಲ್ಲಿ ಆ್ಯಂಟೊನಿ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ಶೆ„ಲಾ ಎಸ್. ಕಾಮತ್ ವಂದಿಸಿದರು.