ವಿಜಯಪುರ: ಸ್ವಯಂ ಉದ್ಯೋಗ ಯೋಜನೆಯಲ್ಲಿ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಂಪೂರ್ಣ ಗುರಿ ಸಾ ಧಿಸಲು ಬ್ಯಾಂಕ್ ಅ ಧಿಕಾರಿಗಳ ಪಾತ್ರ ಪ್ರಮುಖವಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಅಭಿಪ್ರಾಯಪಟ್ಟರು.
ನಗರದಲ್ಲಿ ಡೇ-ನಲ್ಮ್ ಯೋಜನೆಯ ಸ್ವಯಂ ಉದ್ಯೋಗ ಕಾರ್ಯಕ್ರಮ ಉಪ ಘಟಕದಡಿ ಬ್ಯಾಂಕ್ ಅ ಧಿಕಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮತನಾಡಿದ ಅವರು, ನಗರದ ಬಡಜನರ ಜೀವನೋಪಾಯಕ್ಕಾಗಿ ಸಾಲ ಸೌಲಭ್ಯ ನೀಡಲಾದೆ. ಫಲಾನುಭವಿಗಳು ಪದೆ ಪದೆ ಬ್ಯಾಂಕಿಗೆ ಅಲೆದಾಡದಂತೆ ತ್ವರಿತವಾಗಿ ಸಾಲ ಮಂಜೂರು ಮಾಡಿ, ಅವರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಬ್ಯಾಂಕ್‌ಗಳು ಸದರಿ ಸರ್ಕಾರದ ಯೋಜನೆಗಳ ಅನುಷ್ಠಾನಲ್ಲಿ ತ್ವರಿತವಾಗಿ ಸಾಲ ನೀಡಿದಲ್ಲಿ ನಿರುದ್ಯೋಗಿ ಯುವಸಮೂಹ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಆಗಲಿದೆ. ಇದರಿಂದ ಆತನ ಕುಟುಂಬ ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತದೆ ಎಂದರು.
ಹೀಗಾಗಿ ಬ್ಯಾಂಕ್ ಅ ಧಿಕಾರಿಗಳು ಸರ್ಕಾರದ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಆಯ್ಕೆಯಾದ ಎಲ್ಲ ಅರ್ಹ ಫಲಾನುಭವಿಗಳಿಗೆ ಸಾಲಮಂಜೂರು ಮಾಡಬೇಕು. ಇದರಿಂದ ಸರ್ಕಾರ ರೂಪಿಸುವ ಸಾಲ ಯೋಜನೆಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು. ನಂತರ ರುಡ್‌ಸೆಟ್ ನಿರ್ದೇಶಕ ರಾಜೇಂದ್ರ ಜೈನಾಪುರ ಮಾತನಾಡಿ, ನಲ್ಮ್ ಯೋಜನೆ ಉದ್ಯೋಗ ಘಟಕ ಹಾಗೂ ರೂಡ್‌ಸೆಟ್ ಸಂಸ್ಥೆಯ ಧ್ಯೇಯೋದ್ದೇಶ ಸ್ವಾವಲಂಬನೆ, ಎಲ್ಲರೂ ಕೂಡಿಕೊಂಡು ಬಡಜನರ ಆರ್ಥಿಕ ಸ್ಥಿತಿ ಸುಧಾರಣೆಗೆ ಶ್ರಮಿಸೋಣ ಎಂದರು.
ಪ್ರತಿಯೊಬ್ಬರನ್ನು ಸ್ವಾವಲಂಬಿಯಾಗಿಸಿ ಜೀವನ ಬೆಳಗುವಂತೆ ಮಾಡುವುದೇ ರೂಡ್‌ಸೆಟ್ ಸಂಸ್ಥೆಯ ಗುರಿಯಾಗಿದೆ ಎಂದರು. ಜಿಲ್ಲಾ ಕೌಶಲ್ಯ ಮಿಷನ್‌ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿ ಕಾರಿ ಗುರುಪಾದಯ್ಯ ಹಿರೇಮಠ ಮಾತನಾಡಿದರು. ಸುನಂದಾ ಬಾಲಪ್ಪನವರ, ದೇವೇಂದ್ರ ಧನಪಾಲ್, ಡಾ| ಎಸ್. ಎಂ. ಮುಳ್ಳಾಳ ಸೇರಿದಂತೆ ಇದ್ದರು.