Advertisement

Daily Horoscope: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ, ನಿರೀಕ್ಷಿತ ಆರ್ಥಿಕ ನೆರವು

07:31 AM Nov 16, 2024 | Team Udayavani |

ಮೇಷ: ತೊಂದರೆಗಳೇನಿದ್ದರೂ ತಾತ್ಕಾಲಿಕ. ಸಣ್ಣ ಉದ್ಯಮಗಳಿಗೆ ಶುಭದಿನ. ಹಣದ ಬೆಳೆಗಳನ್ನು ಬೆಳೆಸುವ ನಿರ್ಧಾರ. ಉದ್ಯೋಗಸ್ಥರಿಗೆ ವೇತನ ಏರಿಕೆ ಸಾಧ್ಯತೆ. ಹತ್ತಿರದ ದೇವಾಲಯಕ್ಕೆ ಸಂದರ್ಶನ.

Advertisement

ವೃಷಭ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆ ಗಳು. ವೃತ್ತಿಪರರಿಗೆ ಕೊಂಚ ಕಡಿಮೆಯಾದ ಒತ್ತಡ. ನಿರೀಕ್ಷಿತ ಲಾಭ ಕೈಸೇರಿ ಹರ್ಷ. ಕೃಷಿ ಸಾಧನಗಳು, ರಸಗೊಬ್ಬರ ವ್ಯಾಪಾರಿಗಳಿಗೆ ಶುಭ ಸೂಚನೆ. ಪುತ್ರಿಯ ವಿವಾಹ ಮಾತುಕತೆಗೆ ಸಿದ್ಧತೆ.

ಮಿಥುನ: ಕ್ಷಣಿಕ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ. ಧಾರ್ಮಿಕ, ಸಾಮಾಜಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ. ನಿರೀಕ್ಷಿತ ಆರ್ಥಿಕ ನೆರವು ಕೈಸೇರಿ ಸಮಾಧಾನ. ಗೃಹಿಣಿಯರು, ಹಿರಿಯರು, ಮಕ್ಕಳಿಗೆ ಸಮಾಧಾನ.ಕೆಲವರಿಗೆ ರಕ್ತದಾನ ಮಾಡುವ ಯೋಗ.

ಕರ್ಕಾಟಕ: ನಿಧಾನ, ಆದರೆ ದೃಢವಾದ ನಡೆಯಿಂದ ಗೆಲುವು. ನಿರೀಕ್ಷಿತ ನೆರವು ವಿಳಂಬವಾದರೂ ಮುನ್ನಡೆ ಅಬಾಧಿತ. ಗೃಹೋದ್ಯಮ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿ. ಹಿರಿಯರಿಗೆ ಸ್ಥಾನ ಗೌರವದಿಂದ ಸಮಾಧಾನ.

ಸಿಂಹ: ಕೈಗೊಂಡ ಕಾರ್ಯಗಳಲ್ಲಿ ಆಶ್ಚರ್ಯಕರ ಯಶಸ್ಸು. ಕಾರ್ಯರಂಗದ ವಿಸ್ತರಣೆಗೆ ಆಹ್ವಾನ. ಸಾಹಿತ್ಯ, ಸಂಗೀತಪ್ರಿಯರಿಗೆ ಮನೋರಂಜನೆ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರಿಗೆ ಹೆಚ್ಚು ಜೀವನೋತ್ಸಾಹ.

Advertisement

ನ್ಯಾ: ಸಣ್ಣ ಪ್ರವಾಸ ಸಂಭವ. ಗುರು ಸಮಾನ ವ್ಯಕ್ತಿಯಿಂದ ಮಾರ್ಗದರ್ಶನ. ನೈಸರ್ಗಿಕ ಕೃಷಿಯಲ್ಲಿ ಆಸಕ್ತರಿಗೆ ಸಂತೋಷದ ಸುದ್ದಿ. ಮಾನಸಿಕ ಸಮಸ್ಯೆ ಸಂತ್ರಸ್ತರಿಗೆ ಸಹಾಯ. ಪಾಲುದಾರಿಕೆಯಲ್ಲಿ ಸಣ್ಣ ಉದ್ಯಮ ನಡೆಸುವ ಪ್ರಸ್ತಾವ.

ತುಲಾ: ಸಾಂಸಾರಿಕ ಸುಖ ವೃದ್ಧಿ. ಭಗವತ್‌ ಕೈಂಕರ್ಯದಿಂದ ಜೀವನ ಯಾತ್ರೆಯ ಎಡರು ತೊಡರುಗಳ ನಿವಾರಣೆ. ಮನೆಯಲ್ಲಿ ಎಲ್ಲರ ಆರೋಗ್ಯ ತೃಪ್ತಿಕರ. ಕಿರಿಯ ಉದ್ಯಮಿಯಿಂದ ಮಾರ್ಗದರ್ಶನ ಕೋರಿಕೆ.

ವೃಶ್ಚಿಕ: ಸ್ವತಂತ್ರ ವ್ಯವಹಾರಸ್ಥರಿಗೆ ಅನು ಕೂಲದ ವಿದ್ಯಮಾನ. ಬಂಧುವರ್ಗದಲ್ಲಿ ಶುಭಕಾರ್ಯಕ್ಕೆ ಸಹಾಯ. ವಿದೇಶವಾಸಿ ಬಂಧುಗಳಿಂದ ಶುಭಸಮಾಚಾರ. ವಸ್ತ್ರ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಧನು: ಮಿತ್ರವರ್ಗದವರೊಡನೆ ಸಂತೋಷಾಚರಣೆ. ಸಹೋದ್ಯಮದ ಸಂಸ್ಥೆಗೆ ಒಳ್ಳೆಯ ಲಾಭ. ಪರಿಸರ ನೈರ್ಮಲ್ಯ ಕಾರ್ಯಕ್ರಮಕ್ಕೆ ಉತ್ತೇಜನ. ವೃದ್ಧಾಶ್ರಮ, ಅನಾಥಾಶ್ರಮಕ್ಕೆ ಭೇಟಿ. ಕೃಷ್ಯುತ್ಪನ್ನ ಮಾರಾಟದಿಂದ ಗಣನಾರ್ಹ ಆದಾಯ.

ಮಕರ: ಕಡಿಮೆಯಾಗದ ಕೆಲಸದ ಒತ್ತಡ. ಸಾಂಸಾರಿಕ ಕ್ಷೇತ್ರದಲ್ಲಿ ಒಂದು ಬಗೆಯ ನೆಮ್ಮದಿ. ಹೊಸಬಗೆಯ ಕೆಲಸವೊಂದನ್ನು ವಹಿಸಿಕೊಳ್ಳಲು ಆಹ್ವಾನ. ವಾಹನ ದುರಸ್ತಿ ಕೆಲಸಗಾರರಿಗೆ, ದ್ರವಪದಾರ್ಥ ವ್ಯಾಪಾರಿಗಳಿಗೆ ಲಾಭ. ಹಿರಿಯರ ಆರೋಗ್ಯ ಸುಧಾರಣೆ.

ಕುಂಭ: ಏಳೂವರೆ ಶನಿಯ ಪ್ರಭಾವದಿಂದ ಕೊಂಚ ಕಿರಿಕಿರಿ. ಹಿರಿಯರ ಆರೋಗ್ಯದಲ್ಲಿ ಎಚ್ಚರ. ಉತ್ಪನ್ನಗಳ ಗುಣಮಟ್ಟದ ಕಡೆಗೆ ಗಮನ ಇರಲಿ. ದೂರದಲ್ಲಿರುವ ಬಂಧುಗಳ ಆಗಮನ. ವ್ಯಾಪಾರಿ ವರ್ಗದವರಿಗೆ ಸಮಾಧಾನ.

ಮೀನ: ಕೆಲವರಿಗೆ ಅರ್ಧವಿರಾಮ, ಕೆಲವರಿಗೆ ಪೂರ್ಣವಿರಾಮ. ಸಾಮಾಜಿಕ ರಂಗದಿಂದ ಒತ್ತಡ. ಪೂರ್ವದಿಕ್ಕಿಗೆ ಪ್ರಯಾಣದ ಸಾಧ್ಯತೆ.ಹೊಸ ವ್ಯವಹಾರ ಆರಂಭದ ದಿನ ಮುಂದಕ್ಕೆ. ನಾಳೆಯ ರಜಾದಿನ ಸದುಪಯೋಗಕ್ಕೆ ಸಿದ್ಧತೆ.

Advertisement

Udayavani is now on Telegram. Click here to join our channel and stay updated with the latest news.

Next