ನವದೆಹಲಿ: ನಮ್ಮ ಸುತ್ತ ಮುತ್ತಲು ದೊರಕುವ ಹಾಗೂ ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗುವ ಬಾಳೆ ಹಣ್ಣು ತನ್ನಲ್ಲಿ ಹಲವಾರು ಉತ್ತಮ ಆರೋಗ್ಯದಾಯಕ ಅಂಶಗಳನ್ನು ಒಳಗೊಂಡಿದೆ. ಈ ಮೂಲಕ ಹೇರಳ ಪೋಷಕಾಂಶಗಳನ್ನು ಒಳಗೊಂಡಿರುವ ಹಳದಿ ಹಣ್ಣು ಎಂದು ಕರೆಸಿಕೊಂಡಿದೆ.
ಸಾಮಾನ್ಯವಾಗಿ ತೆಳ್ಳಗಿರುವವರು ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ದಪ್ಪ ಆಗುತ್ತಾರೆ ಎನ್ನಲಾಗುತ್ತದೆ. ಆದರೆ ಈ ಬಾಳೆಹಣ್ಣನ್ನು ತಿನ್ನುವ ಮೂಲಕ ದೇಹದ ತೂಕವನ್ನೂ ಇಳಿಸಿಕೊಳ್ಳಬಹುದಂತೆ.
ದಿನನಿತ್ಯದ ವಿವಿಧ ಆಹಾರಗಳ ಜೊತೆ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ.ಈ ಬಾಳೆಹಣ್ಣಿನಲ್ಲಿ ನಾರಿನ ಅಂಶ ಹಾಗೂ ಖನಿಜಾಂಶಗಳು ಹೇರಳವಾಗಿರುವುದರೊಂದಿಗೆ ಇದು ಅತೀ ಕಡಿಮೆ ಕೊಬ್ಬಿನ ಅಂಶವನ್ನು ಒಳಗೊಂಡಿದೆ. ಹೀಗಾಗಿ ಪ್ರತಿ ನಿತ್ಯ ವ್ಯಾಯಾಮ ಮಾಡಿದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ದೇಹದ ತೂಕ ನಿಯತ್ರಣಕ್ಕೆ ಬರುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬಾಳೆ ಹಣ್ಣಿನಲ್ಲಿ ಹೇರಳವಾದ ಕಾರ್ಬೋಹೈಡ್ರೇಟ್ ಅಂಶಗಳನ್ನು ಕಾಣಬಹುದಾಗಿದೆ. ಅಲ್ಲದೆ ಇದರಲ್ಲಿ ಕಡಿಮೆ ಪ್ರಮಾಣದ ಪ್ರೋಟೀನ್ ಅಂಶ ಇರುವುದರಿಂದ ವ್ಯಾಯಾಮದ ಬಳಿಕ ಬಾಳೆ ಹಣ್ಣಿನ ಸೇವನೆ ದೇಹದ ತೂಕ ನಿರ್ವಹಣೆಯಲ್ಲಿ ಸಹಕಾರಿಯಾಗುತ್ತದೆ.
ಇದನ್ನೂ ಓದಿ:ಹಿಂಸಾಚಾರ ಒಪ್ಪಲು ಸಾಧ್ಯವಿಲ್ಲ,ರೈತರ ಏಳಿಗೆಗೆ ಬದ್ಧ; ಕೃಷಿ ನೀತಿ ಸಮರ್ಥಿಸಿಕೊಂಡ ರಾಷ್ಟ್ರಪತಿ
ಈ ಹಣ್ಣಿನಲ್ಲಿ ಸ್ಟಾರ್ಚ್ ಮತ್ತು ಪೊಟ್ಯಾಸಿಯಂ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಇದು ನಮ್ಮಲ್ಲಿ ಹೊಟ್ಟೆ ತುಂಬಿದ ಅನುಭವನ್ನು ನೀಡುತ್ತದೆ ಮತ್ತು ದೇಹಕ್ಕೆ ಶಕ್ತಿ ನೀಡುವ ಮೂಲಕ ವ್ಯಾಯಾಮ ಮಾಡಲು ಸಹಕಾರಿಯಾಗುತ್ತದೆ. ಇದಿಷ್ಟೇ ಅಲ್ಲದೆ ಇದು ಹಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಅಂಶವನ್ನು ಒದಗಿಸುವುದರಿಂದ ವ್ಯಾಯಾಮದ ಮೊದಲು ಹಾಗೂ ವ್ಯಾಯಾಮದ ನಂತರ ಬಾಳೆಹಣ್ಣನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.