Advertisement

ಮೊಹಮ್ಮದ್‌ ಶಮಿಯ ಹೋರಾಟದ ಹಾದಿ

07:21 PM Nov 22, 2019 | Lakshmi GovindaRaj |

ಬಂಗಾಳದ ವೇಗದ ಬೌಲರ್‌ ಮೊಹಮ್ಮದ್‌ ಶಮಿಯದ್ದು ಹೋರಾಟದ ಬದುಕು. ಅದನ್ನೆಲ್ಲ ಅವರು ಮೀರಿನಿಂತ ಪರಿ ಮಾತ್ರ ಅನನ್ಯ. ಭಾರತ ಕ್ರಿಕೆಟ್‌ ತಂಡದ ಅವಿಭಾಜ್ಯ ಅಂಗವಾಗಿರುವ ಅವರು, ಇತ್ತೀಚೆಗೆ ತಾವಾಡಿದ ಪಂದ್ಯಗಳೆಲ್ಲೆಲ್ಲ ಮೆರೆಯುತ್ತಿದ್ದಾರೆ. ಮೊನ್ನೆಯಷ್ಟೇ ಇಂದೋರ್‌ನಲ್ಲಿ ಮುಗಿದ ಟೆಸ್ಟ್‌ನಲ್ಲಿ ಅವರು ಒಟ್ಟು 7 ವಿಕೆಟ್‌ ಪಡೆದರು. ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಭಾರತದ ಎಲ್ಲ ಅಂಕಣಗಳೂ ಸ್ಪಿನ್‌ಗೆ ನೆರವು ನೀಡುತ್ತವೆ. ಅಂತಹಕಡೆ ವೇಗಿ ಶಮಿ ಮಿಂಚಿದ್ದೇ ಈಗ ಚರ್ಚೆಯ ವಿಷಯ.

Advertisement

ಕಳೆದವರ್ಷ ಶಮಿ ಪತ್ನಿ ಹಸಿನ್‌ ಜಹಾನ್‌ ಮಾಡಿದ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಮ್ಯಾಚ್‌ಫಿಕ್ಸಿಂಗ್‌ಗೆ ಯತ್ನ ಮುಂತಾದ ಆರೋಪಗಳನ್ನು ನೋಡಿದಾಗ, ಇವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕು ಮುಗಿದೇ ಹೋಯಿತು ಎಂದು ಹಲವರು ಭಾವಿಸಿದ್ದರು. ಆದರೆ ಶಮಿ ಅದನ್ನೆಲ್ಲ ಮೆಟ್ಟಿ ನಿಂತಿದ್ದಾರೆ. ಶಮಿ ಮೇಲೆ ಹಾಕಲಾಗಿದ್ದ ಫಿಕ್ಸಿಂಗ್‌ ಆರೋಪ ಸುಳ್ಳೆಂದು ಬಿಸಿಸಿಐ ಸ್ಪಷ್ಟಪಡಿಸಿದೆ. ನ್ಯಾಯಾಲಯಕ್ಕೆ ಶರಣಾಗುವಂತೆ ಕೋಲ್ಕತದ ಅಲಿಪುರ ನ್ಯಾಯಾಲಯ ಹೊರಡಿಸಿದ್ದ ವಾರೆಂಟನ್ನು, ಬಂಗಾಳದ ಉಚ್ಚ ನ್ಯಾಯಾಲಯ ಕಳೆದವರ್ಷವೇ ರದ್ದುಪಡಿಸಿದೆ.

ಇನ್ನುಳಿದಂತೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸದ್ಯದ ಪರಿಸ್ಥಿತಿ ನೋಡಿದಾಗ, ಶಮಿ ಎಲ್ಲರೀತಿಯ ಆರೋಪಗಳಿಂದ ಪಾರಾಗುವುದು ನಿಶ್ಚಿತ. ಈ ವೇಳೆ ಶಮಿ ಮಾನಸಿಕವಾಗಿ ಕುಗ್ಗಿದ್ದರು. ತನ್ನ ವಿರುದ್ಧದ ಆರೋಪಗಳು ಸಹಜವಾಗಿ ಅವರನ್ನು ಹೈರಾಣು ಮಾಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಮಿಯ ಪತ್ನಿ ಮಾಡಿದ್ದ ಆರೋಪಗಳು ಸುದ್ದಿಯಾಗಿತ್ತು. ಆಗ ಅವರನ್ನು ತಂಡದಿಂದ ಹೊರಹಾಕುವಂತೆ ಒತ್ತಡಗಳೂ ಬಂದಿದ್ದವು. ಅದನ್ನೆಲ್ಲ ಬಿಸಿಸಿಐ ಗಂಭೀರವಾಗಿ ಪರಿಗಣಿಸಲಿಲ್ಲ. ಅವರು ದೋಷಿ ಎಂದು ಸಾಬೀತಾದರೆ ಮಾತ್ರ, ತಂಡದಿಂದ ಹೊರಹಾಕುವುದಾಗಿ ಅದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next