ದೇವದುರ್ಗ: ತಾಲೂಕಿನ ಡಿ.ಕರಡಿಗುಡ್ಡ ಗ್ರಾಮದಿಂದ ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡಾಂಬರ್ ರಸ್ತೆ ಆರೇಳು ತಿಂಗಳಲ್ಲೇ ಕಿತ್ತು ಹೋಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆ 70 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ. 3.5 ಕಿಮೀ ರಸ್ತೆಗೆ ಲಕ್ಷಾಂತರ ರೂ. ಅನುದಾನ ಕಳಪೆ ಗುಣಮಟ್ಟದ ಕಾಮಗಾರಿ ಹಣ ಇದೀಗ ಪೋಲಾಗಿದೆ. ಎಲ್ಲೆಂದರಲ್ಲಿ ರಸ್ತೆ ಕಿತ್ತು ಹೋಗಿದ್ದು, ಸುಗಮ ಸಂಚಾರಕ್ಕೆ ತೊಂದರೆ ಎನಿಸಿದೆ. ಅಲ್ಲಲ್ಲಿ ಬಿದ್ದ ತೆಗ್ಗುಗಳಲ್ಲಿ ಎದ್ದುಬಿದ್ದು ಸಂಚಾರ ಮಾಡಬೇಕಾದಂತ ಸಂಕಷ್ಟ ಗ್ರಾಮಸ್ಥರಿಗೆ ಎದುರಾಗಿದೆ.
ಅಧಿಕಾರಿಗಳು ಮೌನ: ಕಳೆದ ಎರಡು ತಿಂಗಳ ಹಿಂದೆ ಕಳಪೆ ರಸ್ತೆ ಕಾಮಗಾರಿ ಎಲ್ಲೆಂದರಲ್ಲಿ ಕಿತ್ತು ಹೋದ ಹಿನ್ನೆಲೆ ಡಿ.ಕರಡಿಗುಡ್ಡ ಗ್ರಾಮಸ್ಥರೇ ರಸ್ತೆಗಿಳಿದು ಹೋರಾಟ ಕೈಗೊಂಡಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗ್ರಾಮಸ್ಥರ ಮಧ್ಯೆ ವಾಗ್ಧಾನ ನಡೆದಿತ್ತು. ಅಧಿಕಾರಿ ಎದುರಲ್ಲೇ ಕಳಪೆ ರಸ್ತೆ ಕೈಯಿಂದ ರಸ್ತೆ ಕಿತ್ತು ತೋರಿಸಿದ ಪ್ರಸಂಗ ಜರುಗಿತು. ಇಷ್ಟರಲೇ ಅವಾಂತರ
ಎದುರಾದರೂ ಮೇಲಧಿ ಕಾರಿಗಳು ಕ್ರಮವಹಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿದೆ.
ಶಾಸಕರ ಪರಿಶ್ರಮ: ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಪಡಿಸಲು ಸರಕಾರ ಮಟ್ಟದಲ್ಲಿ ಹಗಲು ರಾತ್ರಿ ಎನ್ನದೇ ಶಾಸಕರು ಪರಿಶ್ರಮ ಪಟ್ಟು ಅನುದಾನ ತರಲಾಗುತ್ತಿದೆ. ಟೆಂಡರ್ ಪಡೆದ ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ಮಾಡುವುದರಿಂದ ಮಾದರಿ ತಾಲೂಕು ಅಭಿವೃದ್ಧಿಗೆ ಕಪ್ಪುಚುಕ್ಕಿ ಎಂಬಂತಾಗಿದೆ.
ಮೂರುವರೆ ಕಿಮೀ 70 ಲಕ್ಷ: ಡಿ.ಕರಡಿಗುಡ್ಡ ಗ್ರಾಮದಿಂದ ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರುವರೆ ಕಿಮೀ ರಸ್ತೆ ಅಭಿವೃದ್ಧಿಗೆ 70 ಲಕ್ಷ ರೂ.ಅನುದಾನ ಮಂಜೂರಾಗಿದೆ. ಆರೇಳು ವರ್ಷಗಳ ಕಾಲ ಗುಣಮಟ್ಟದ ರಸ್ತೆ ನಿರ್ಮಿಸಲು ಗುತ್ತೆದಾರರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಳಪೆ ಗುಣಮಟ್ಟದ ರಸ್ತೆ ಆರೇಳು ತಿಂಗಳಲೇ ಕಿತ್ತು ಹೋಗಿದೆ. ಒಂದು ವರ್ಷ ಅವಧಿ ನಿರ್ವಹಣೆ ಜವಾಬ್ದಾರಿ ಅಲ್ಲಲ್ಲಿ ಕಿತ್ತುರುವ ರಸ್ತೆಗೆ ಡಾಂಬರ್ ಹಾಕದೇ ಬಿಟ್ಟಿರುವ ಹಿನ್ನೆಲೆ ಗ್ರಾಮಸ್ಥರು ಎದ್ದುಬಿದ್ದು ಸಂಚಾರ ಮಾಡಬೇಕಾದಂತ ಸಂಕಷ್ಟ ಬಂದೊದಗಿದೆ.
ಗ್ರಾಮಸ್ಥರು ಆಗ್ರಹ: ಡಿ.ಕರಡಿಗುಡ್ಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು, ಗ್ರಾಪಂ ಅಧಿ ಕಾರಿಗಳು ಕೂಡಲೇ ಗಮನಹರಿಸಬೇಕು. ಬಿದ್ದಿರುವ ಗುಂಡಿಗಳಲ್ಲಿ ಮರಂ ಹಾಕಿ. ರಸ್ತೆಗೆ ಬಾಗಿರುವ ಜಾಲಿಗಿಡಗಳು ದುರಸ್ತಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರಾದ ರಂಗಪ್ಪ, ಬಸವರಾಜ ಆಗ್ರಹಿಸಿದರು.
ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತಿದ್ದು, ಗಮನಕ್ಕಿದೆ. ಡಾಂಬರ್ ಹಾಕಿ ದುರಸ್ತಿ ಮಾಡಿಸುವಂತೆ ಈಗಾಗಲೇ ಗುತ್ತಿಗೆದಾರರಿಗೆ ತಿಳಿಸಿದ್ದೇನೆ. ರಂಗಪ್ಪ ರಾಮದುರ್ಗ, ಪ್ರಭಾರಿ ಎಇಇ.
ದೇವದುರ್ಗ: ಡಿ.ಕರಡಿಗುಡ್ಡ ಗ್ರಾಮದಿಂದ ಕಮದಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿತ್ತು ಹೋಗಿದೆ.
ನಾಗರಾಜ ತೇಲ್ಕರ್