Advertisement
ಈಗಾಗಲೇ ಮಳೆ ಆರಂಭವಾಗಿದ್ದು, ಮೋರಿಗಳನ್ನು ಹಾಕಬೇಕಾದ ಸ್ಥಳಗಳಲ್ಲಿ ರಸ್ತೆ ಕೆಸರಿನಿಂದ ಆವೃತವಾಗಿದೆ. ನೀರು ನಿಲ್ಲುತ್ತಿದ್ದು, ವಾಹನಗಳು ಹೂತು ಹೋಗುತ್ತಿವೆ. ಇದರಿಂದ ಈ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅನಾರು ಪ್ರದೇಶದ ಜನರಿಗೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಬದಲಿ ಇರುವ ಇನ್ನೊಂದು ರಸ್ತೆ ಕೂಡ ಸಂಪೂರ್ಣ ಹಾಳಾಗಿದೆ. ಮೋರಿಗಳ ನಿರ್ಮಾಣ ತತ್‌ಕ್ಷಣ ಆಗದಿದ್ದರೆ ಈ ವರ್ಷದ ಮಳೆಗಾಲದಲ್ಲಿ ಅನಾರು ಪ್ರದೇಶದ ಜನರಿಗೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಲಿದೆ.
ಅನಾರು ಪ್ರದೇಶದ ಜನರಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕಕ್ಕೆ ತೊಂದರೆಯಾಗದಂತೆ ಸದ್ಯವೇ ಮೋರಿ ಕಾಮಗಾರಿ ಆರಂಭಿಸಿ, ವ್ಯವಸ್ಥಿತ ರೀತಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
-ಶೈಲಜಾ, ಅಧ್ಯಕ್ಷರು,
ಗ್ರಾ.ಪಂ. ಚಾರ್ಮಾಡಿ