Advertisement

ಗಲಭೆ ದಿನ ಕೊಡ್ನಾನಿ ಅಸೆಂಬ್ಲಿಯಲ್ಲಿದ್ದರು: ಶಾ

07:50 AM Sep 19, 2017 | Harsha Rao |

ಅಹಮದಾಬಾದ್‌: ಗೋಧ್ರಾ ರೈಲು ದಹನದ ಮಾರನೇ ದಿನ ನಡೆದ ನರೋಡಾ ಗಾಮ್‌ ಗಲಭೆ ಪ್ರಕರಣದ ಆರೋಪಿ, ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸೋಮವಾರ ಅಹಮದಾಬಾದ್‌ನ ಕೋರ್ಟ್‌ಗೆ ಬಂದು ಸಾಕ್ಷಿ ನುಡಿದಿದ್ದಾರೆ.

Advertisement

“2002ರ ಗಲಭೆಯ ದಿನ ಮಾಯಾ ಕೊಡ್ನಾನಿ ಅವರು ವಿಧಾನಸಭೆಯ ಲ್ಲಿದ್ದರು. ಬಳಿಕ ಅವರು ಅಹಮದಾಬಾದ್‌ನ ಸೋಲಾ ಸಿವಿಲ್‌ ಆಸ್ಪತ್ರೆಗೆ ತೆರಳಿದ್ದರು. ನಾನು ಅಲ್ಲಿಯೂ ಅವರನ್ನು ಕಂಡಿದ್ದೆ. ಬಳಿಕ ಪೊಲೀಸರು ನಮ್ಮಿಬ್ಬರನ್ನು ಬೇರೆ ಬೇರೆ ಜೀಪಿನಲ್ಲಿ ರಕ್ಷಣೆ ನೀಡಿ ಕರೆದೊಯ್ದರು. ಆಮೇಲೆ ಕೊಡ್ನಾನಿ ಅವರು ಎಲ್ಲಿಗೆ ಹೋದರು ಎಂಬುದು ನನಗೆ ಗೊತ್ತಿಲ್ಲ,’ ಎಂದು ಅಮಿತ್‌ ಶಾ ಅವರು ನ್ಯಾಯಾಲಯದ ಮುಂದೆ ನುಡಿದಿದ್ದಾರೆ. ಘಟನೆ ನಡೆದ ಸಂದರ್ಭ ದಲ್ಲಿ ಅಮಿತ್‌ ಶಾ ಹಾಗೂ ಕೊಡ್ನಾನಿ ಇಬ್ಬರೂ ಗುಜರಾತ್‌ ಸರ್ಕಾರದಲ್ಲಿ ಸಚಿವರಾಗಿದ್ದರು. ಹೀಗಾಗಿ, ಅಂದು ತಾವು ವಿಧಾನಸಭೆಯಲ್ಲಿದ್ದೆ ಎಂದು ಸ್ವತಃ ಶಾ ಅವರೇ ಸಾಕ್ಷಿ ನುಡಿಯಲಿದ್ದಾರೆ ಎಂದು ಕೊಡ್ನಾನಿ ಕೋರ್ಟ್‌ಗೆ ಅರಿಕೆ ಮಾಡಿದ್ದರು. ಅದರಂತೆ, ಸೋಮವಾರ ಕೋರ್ಟ್‌ಗೆ ಹಾಜರಾದ ಶಾ, ಅಂದಿನ ಎಲ್ಲ ಘಟನೆಗಳನ್ನೂ ಜಡ್ಜ್ ಪಿ.ಬಿ.ದೇಸಾಯಿ ಅವರಿಗೆ ವಿವರಿಸಿದರು.

ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 59 ಮಂದಿ ಕರಸೇವಕರು ಬಲಿಯಾಗಿದ್ದರು. ಇದರ ಮಾರನೇ ದಿನವೇ ನರೋಡಾ ಗಾಮ್‌ನಲ್ಲಿ ಗಲಭೆ ಸ್ಫೋಟಗೊಂಡು, 11 ಮಂದಿ ಮೃತ ಪಟ್ಟಿದ್ದರು. ಪ್ರಕರಣ ಸಂಬಂಧ ಮಾಯಾ ಕೊಡ್ನಾನಿ ವಿರುದ್ಧ ಗಲಭೆಗೆ ಪ್ರಚೋದನೆ, ಕ್ರಿಮಿನಲ್‌ ಸಂಚು ಮತ್ತು ಕೊಲೆ ಮತ್ತಿತರ ಗಂಭೀರ ಪ್ರಕರಣ ದಾಖಲಿಸಲಾಗಿತ್ತು. ಇದಲ್ಲದೆ, ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಮಾಯಾ ಅವರು ದೋಷಿ ಎಂದು ಸಾಬೀತಾಗಿದ್ದು, ಅವರಿಗೆ 28 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next