Advertisement

ಹಕ್ಕು ಪಡೆಯಲು ಸಂಘಟಿತರಾಗಿ ಹೋರಾಡಿ

03:44 PM Feb 27, 2017 | Team Udayavani |

ಕಲಬುರಗಿ: ಬಡವರು, ದೀನ ದಲಿತರು ಸೇರಿದಂತೆ ಎಲ್ಲ ವರ್ಗಗಳ ಜನತೆ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದ ಮಾರ್ಗ ಹಿಡಿಯಲು ಪ್ರತಿಯೊಬ್ಬರು ಸಂಘಟಿತರಾಗಬೇಕೆಂದು ಭಾರತೀಯ ದಲಿತ ಪ್ಯಾಂಥರ್‌ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸ್ಮನಿ ಇಂಗನಕಲ್‌ ಹೇಳಿದರು. 

Advertisement

ಕಲಬುರಗಿಯ ಪ್ರವಾಸಿ ಮಂದಿರದಲ್ಲಿ ನಡೆದ ಭಾರತೀಯ ದಲಿತ ಪ್ಯಾಂಥರ್‌ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೋಬಳಿ ಸಮಿತಿಗಳನ್ನು ರಚಿಸಬೇಕು.

ಸಾರ್ವಜನಿಕರ ಸಮಸ್ಯೆಗಳು ಹಾಗೂ ಬೇಡಿಕೆಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಣ್ಣು ತೆರೆಸಬೇಕು. ನಿರಂತರವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು. ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಮಿಲಿಂದ ಸನಗುಂದಿ,

ವಿಭಾಗೀಯ ಅಧ್ಯಕ್ಷ ಭೀಮರಾಯ ನಗನೂರ, ಜಿಲ್ಲಾಧ್ಯಕ್ಷ ಶಿವುಕುಮಾರ ತೊಟ್ನಳ್ಳಿ, ಜಿಲ್ಲಾ ಕಾರ್ಯದರ್ಶಿ ಭರತ ಬುಳ್ಳಾ, ವಿವಿಧ ತಾಲೂಕು ಅಧ್ಯಕ್ಷರಾದ ಕಾಶಿನಾಥ ಶೆಳ್ಳಗಿ, ಶರಣು ಊಡಗಿ, ರುದ್ರಮುನಿ ರಾಮತೀರ್ಥ, ಕಾಶಿನಾಥ ದಿವಂಟಗಿ, ಬಸವರಾಜ ಹೆಗಡೆ, ರವಿ ಕುಳಗೇರಿ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next