Advertisement
ಅವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಚಿಣ್ಣರಬಿಂಬ ಜಂಟಿಯಾಗಿ ಆಯೋಜಿಸಿದ್ದ ಚಿಣ್ಣರಬಿಂಬದ ಮಕ್ಕಳ ಹಾಗೂ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವಿದ್ವಾಂಸರಾಗಿ ಪಾಲ್ಗೊಂಡು ಮಾತನಾಡಿದರು.
Related Articles
Advertisement
ಚಿಣ್ಣರ ಬಿಂಬದ ಶಿಕ್ಷಕರಾದ ಅನಿತಾ ಶೆಟ್ಟಿ, ಕುಮುದಾ ಅಳ್ವ, ಸುರೇಖಾ ಮೊಲಿ, ಮಲ್ಲಿಕಾ ಶೆಟ್ಟಿ, ಸುಮಿತ್ರಾ ದೇವಾಡಿಗ, ಪವಿತ್ರಾ ದೇವಾಡಿಗ, ಶಶಿಕಲಾ ಕೋಟ್ಯಾನ್, ಸುಲೋಚನಾ ಶೆಟ್ಟಿ, ಚಿಣ್ಣರ ಬಿಂಬದ ಕೇಂದ್ರ ಸಮಿತಿಯ ಗೀತಾ ಹೇರಳ, ಸಂಗೀತಾ ಶೆಟ್ಟಿಗಾರ್, ರವಿ ಹೆಗ್ಡೆ, ಶೋಭಾ ಶೆಟ್ಟಿ, ಹಾಗೂ ಪಾಲಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಚಿಣ್ಣರಬಿಂಬದ ಚಿಣ್ಣರಾದ ನಿಹಾಲ್ ಪೂಜಾರಿ, ರಚನಾ ಶೆಟ್ಟಿ, ಆಶ್ನಾ ಶೆಟ್ಟಿ, ಸುಶ್ಯಾಮ್ಯ ರಾವ್, ಗಗನ್ ಮೂಲ್ಯ, ವಂಶಿ ಶೆಟ್ಟಿ, ಪ್ರೇರಣಾ ನಾಯಕ್, ಸರ್ವೇಶ್ ಕೊಠಾರಿ, ಪ್ರಥಮ್ ಬಲ್ಲಾಳ್, ರಕ್ಷಿತ್ ಶೆಟ್ಟಿ, ಆರಾಧ್ಯ ಆಚಾರ್, ಸೃಷ್ಟಿ ಶೆಟ್ಟಿ, ಶ್ಲೋಕ ಸಾಲ್ಯಾನ್, ಚೈತನ್ಯ ಶೆಟ್ಟಿ, ಅನೀಶ್ ಶೆಟ್ಟಿ, ರಾಹುಲ್ ಪೂಜಾರಿ, ಗೆಹನಾ ಶೆಟ್ಟಿ, ಶ್ರೀನಿಧಿ ಶೆಟ್ಟಿ, ದರ್ಶಿನಿ ಕಾಂಚನ್, ವಿನೀಶಾ ಶೆಟ್ಟಿ, ನಿನಾದ್ ಶೆಟ್ಟಿ, ವಿವೇಕ್ ಶೆಟ್ಟಿ, ಖುಷಿ ಮೊಗವೀರ, ಆದಿತ್ಯ ಪೂಜಾರಿ, ರಕ್ಷಿತ್ ಶೆಟ್ಟಿ, ಶ್ರೀನಿಧಿ ಶೆಟ್ಟಿ, ತನ್ವಿ ಶೆಟ್ಟಿ, ಶ್ಲೋಕ ಸಾಲ್ಯಾನ್, ಸಾಗರ್ ಪೂಜಾರಿ, ಜೀವಿಕಾ ಶೆಟ್ಟಿ, ವಿನೀತ ಶೆಟ್ಟಿ ಮೊದಲಾದವರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ನೀಡಿದರು. ವಂಶಿ ಶೆಟ್ಟಿ, ಗ್ರೀಷ್ಮಾ ಪ್ರಭು ಮತ್ತು ಆಶ್ನಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಜೀವಿಕಾ ಶೆಟ್ಟಿ ಹಾಗೂ ವಿನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಚಿಣ್ಣರಬಿಂಬ ಸಂಸ್ಥೆ ಹಂತ ಹಂತವಾಗಿ ಬೆಳೆದು ಬಂದಿದೆ. ಇದು ಬೃಹತ್ ಮರವಾಗಿ ಬೆಳೆಯಲು ಇದರ ಹಿಂದೆ ಅದೆಷ್ಟೋ ಜನರ ಪರಿಶ್ರಮವಿದೆ. ಇನ್ನೂ ಹೊಸ ಶಿಬಿರ ಆರಂಭಿಸಬೇಕೆಂದು ತುಳು ಕನ್ನಡಿಗರ ಬೇಡಿಕೆ ಇದೆ. ಆದರೆ ಎಲ್ಲ ಕಡೆಗಳಲ್ಲಿ ಶಿಬಿರ ನಡೆಸುವುದು ಅಷ್ಟು ಸುಲಭವಲ್ಲ. ಕೋವಿಡ್ ಸಮಸ್ಯೆಯಿಂದಾಗಿ ಯಾವುದೇ ಸ್ಪರ್ಧೆಯಾಗಲಿ, ವಾರ್ಷಿಕೋತ್ಸವವಾಗಲಿ ಮಾಡಲಾಗದಿದ್ದರೂ ನಮ್ಮ ಕನ್ನಡ ಕಲಿಕಾ ತರಗತಿ, ಭಜನ ತರಗತಿಗಳು ನಿರಂತರವಾಗಿ ನಡೆಯುತ್ತಿದೆ. ನಮ್ಮ ಮಕ್ಕಳು ಪ್ರತಿಭಾವಂತರು. ಅಭಿನಯ ಚತುರರು. ಅವರಿಗೆ ಮತ್ತಷ್ಟು ತರಬೇತಿ ಕೊಡುವ ಆಲೋಚನೆಯಿದೆ. ನಮಗೆ ತರಗತಿ ನೀಡಲು ತುಂಬಾ ಜನ ಸ್ಥಳಾವಕಾಶವನ್ನು ನೀಡಿ ಸಹಕರಿಸಿದ್ದಾರೆ. ಅವರೆಲ್ಲರನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.-ಪ್ರಕಾಶ್ ಭಂಡಾರಿ, ಪ್ರಮುಖ ರೂವಾರಿ, ಚಿಣ್ಣರ ಬಿಂಬ ಮುಂಬಯಿ