Advertisement

ಅಂತರ್ಜಲ ಹೆಚ್ಚಿಸಲು ಕೆರೆಗಳ ಪುನರುಜ್ಜೀವನ ಕ್ರಾಂತಿ

03:45 AM Jan 15, 2017 | Team Udayavani |

ಮಲ್ಪೆ: ನೀರಿನ ಶೇಖರಣೆ, ಅಂತರ್ಜಲ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಪುನರುಜ್ಜೀವನದ ಮೂಲಕ ದೊಡ್ಡ ಕ್ರಾಂತಿಯನ್ನು ಉಡುಪಿಯಲ್ಲಿ ನಡೆಸಲಾಗುತ್ತಿದೆ ಎಂದು ಮೀನುಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ.

Advertisement

ಅವರು ಮಲ್ಪೆ ಉಡುಪಿ ಭಾಗದಲ್ಲಿ ವಿವಿಧ ಅನುದಾನಗಳಡಿ ನಡೆಸಲಾದ ಕೆರೆ ಅಭಿವೃದ್ಧಿ ಸಹಿತ 5 ಕೋ. ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ಗತವೈಭವ ಮರುಕಳಿಸಲಿದೆ
ಹಿಂದೆ ರಾಜಮಹಾರಾಜರು ಕೆರೆ ಕಟ್ಟಿಸುತ್ತಿದ್ದರು. ಈಗ ನಾವು ಅದನ್ನು ಮುಚ್ಚಿ ಅದರ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. ಕೆರೆಗಳ ಹಿಂದಿನ ಗತ ವೈಭವ ಮತ್ತೆ ಮರುಕಳಿಸಬೇಕಾಗಿದೆ. ನೀರಿನ ಅಭಾವ ತಪ್ಪಿಸಲು ಉಡುಪಿ ನಗರಪ್ರಾಧಿಕಾರದ ವತಿಯಿಂದ ಕಳೆದ ಮೂರುವರೆ ವರ್ಷದ ಅವಧಿಯಲ್ಲಿ ಸುಮಾರು 5 ಕೋ. ರೂ. ವೆಚ್ಚದಲ್ಲಿ ವಿವಿಧ ಕಡೆ ಕೆರೆ ಅಭಿವೃದ್ಧಿಪಡಿಸ ಲಾಗುತ್ತಿದೆ ಎಂದರು. 

ಈ ಹಿಂದೆ 1,000 ರೂ. ಇದ್ದ ಕೆರೆ ಶುಲ್ಕವನ್ನು ಈಗ ಸರಕಾರ 600 ರೂ. ಗೆ ಇಳಿಸಿದ್ದು, ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ಆ ಶುಲ್ಕವನ್ನು ನೀರಾವರಿ ಯೋಜನೆಗೆ ಬಳಸಲಾಗುತ್ತದೆ ಎಂದರು.

ಸುಮಾರು 25 ಲ. ರೂ. ವೆಚ್ಚದ ಕುತ್ಪಾಡಿ ಗರೋಡಿ ಬಳಿಯ ಸರಕಾರಿ ಕೆರೆ, 25 ಲ. ರೂ. ವೆಚ್ಚದಲ್ಲಿ ಕೊಡವೂರು ಕಂಗಣಬೆಟ್ಟು ಕಂಗೂರು ಮಠ ಬಳಿಯ ಸರಕಾರಿ ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಸಚಿವರು ನೆರವೇರಿಸಿದರು.

Advertisement

ಮೀನುಗಾರಿಕಾ ಜಟ್ಟಿ ನಿರ್ಮಾಣ
ಕಲ್ಮಾಡಿ ಬೊಬ್ಬರ್ಯ ಪಾದೆ ಬಳಿ 2 ಕೋ. ರೂ. ವೆಚ್ಚದ ಮೀನುಗಾರಿಕಾ ಜಟ್ಟಿ ನಿರ್ಮಾಣಕ್ಕೆ ಗುದ್ದಲಿಪೂಜೆ, 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮಲ್ಪೆ ತೊಟ್ಟಂ ಸಂಪರ್ಕ ಸೇತುವೆ, 1.80 ಕೋ. ರೂ. ವೆಚ್ಚದ ಕದಿಕೆ, ಗುಜ್ಜರ್‌ಬೆಟ್ಟು, ಹೂಡೆ ಕಾಂಕ್ರಿಟ್‌ ರಸ್ತೆ ಮತ್ತು ಕಲ್ಮಾಡಿ ಬೊಬ್ಬರ್ಯ ಪಾದೆ ಬಳಿಯ 10 ಲ. ರೂ. ಜಟ್ಟಿ ಸಂಪರ್ಕ ರಸ್ತೆ ಉದ್ಘಾಟನೆಯನ್ನು ಸಚಿವರು ನೆರವೇರಿಸಿದರು.

ನಗರ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷ ಸಂಧ್ಯಾ ತಿಲಕ್‌ರಾಜ್‌, ದಿವಾಕರ ಎ. ಕುಂದರ್‌, ನಗರಸಭಾ ಸದಸ್ಯರಾದ ನಾರಾಯಣ ಪಿ. ಕುಂದರ್‌, ರಮೇಶ್‌ ಕಾಂಚನ್‌, ಗಣೇಶ್‌ ನೆರ್ಗಿ, ಜನಾರ್ದನ ಭಂಡಾರ್ಕರ್‌, ಪ್ರಮುಖರಾದ ಸತೀಶ್‌ ಅಮೀನ್‌ ಪಡುಕರೆ, ಶೇಖರ್‌ ಜಿ.ಕೋಟ್ಯಾನ್‌, ಕೇಶವ ಎಂ. ಕೋಟ್ಯಾನ್‌, ಪ್ರಖ್ಯಾತ್‌ ಶೆಟ್ಟಿ, ಪ್ರಶಾಂತ್‌ ಪೂಜಾರಿ, ಯತೀಶ್‌ ಕರ್ಕೇರ, ಸದಾಶಿವ ಕಟ್ಟೆಗುಡ್ಡೆ, ಗಣಪತಿ ಶೆಟ್ಟಿಗಾರ್‌, ಲಕ್ಷ್ಮಣ ಸುವರ್ಣ, ಬಿ.ಕೆ. ಸೋಮನಾಥ್‌, ಸಾಯಿರಾಜ್‌ ಕೋಟ್ಯಾನ್‌, ಹರೀಶ್‌ ಕಿಣಿ, ಕಿಶನ್‌ ಹೆಗ್ಡೆ ಕೊಳ್ಳೆಬೈಲ್‌, ಜತಿನ್‌ ಕಡೆಕಾರ್‌, ತಾರಾನಾಥ್‌ ಸುವರ್ಣ, ಧನಪಾಲ್‌, ಸುಜಯಾ ಪೂಜಾರಿ, ಶಿವಾನಂದ ಸುವರ್ಣ, ಸುರೇಂದ್ರ ಸುವರ್ಣ, ಪ್ರವೀಣ್‌ ಕಾಂಚನ್‌, ಬಿ.ಪಿ. ರಮೇಶ್‌ ಪೂಜಾರಿ, ಸುರೇಶ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next