Advertisement

ಕ್ರಿ.ಪೂ. 1ನೇ ಶತಮಾನದ ಯಕ್ಷಿ ಫ‌ಲಕ ಭಾರತಕ್ಕೆ ವಾಪಸ್‌… ಮೋದಿ ಅಮೆರಿಕ ಪ್ರವಾಸದ ಫಲ

09:21 PM Jul 01, 2023 | Team Udayavani |

ನವದೆಹಲಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಮಾಡಿದ್ದಾಗ ದೇಶದ 105 ಪ್ರಾಚೀನ ವಸ್ತುಗಳು ಭಾರತಕ್ಕೆ ಮರಳಲಿವೆ ಎಂದು ಘೋಷಿಸಿದ್ದರು. ಕ್ರಿ.ಪೂ. 1ನೇ ಶತಮಾನಕ್ಕೆ ಸೇರಿದ ಮಹತ್ವದ ಯಕ್ಷಿ ಫ‌ಲಕವೂ ಅಮೆರಿಕದಿಂದ ಭಾರತಕ್ಕೆ ಮರಳುವ ಪಟ್ಟಿಯಲ್ಲಿದೆ ಎನ್ನುವುದು ಅತ್ಯಂತ ಮಹತ್ವದ ಸಂಗತಿ.

Advertisement

ಇನ್ನು 10ನೇ ಶತಮಾನಕ್ಕೆ ಸೇರಿದ ಕುಬೇರನ ವಿಗ್ರಹ, 9ನೇ ಶತಮಾನಕ್ಕೆ ಸೇರಿದ ಕೆಂಪು ಮರಳುಗಲ್ಲಿನಲ್ಲಿ ತಯಾರಿಸಲ್ಪಟ್ಟ ನರ್ತಿಸುತ್ತಿರುವ ಗಣೇಶನ ಪ್ರತಿಮೆಯೂ ಭಾರತಕ್ಕೆ ಮರಳಲಿದೆ. ಇವೆರಡೂ ಕೇಂದ್ರ ಭಾರತಕ್ಕೆ ಸೇರಿವೆ. ಇನ್ನುಳಿದಂತೆ ಅತ್ಯಂತ ಮಹತ್ವದ ವಸ್ತುಗಳನ್ನು ಭಾರತಕ್ಕೆ ಮರಳಿಸುತ್ತೇವೆಂದು ಅಮೆರಿಕ ಸರ್ಕಾರವೇ ಹೇಳಿದೆ.

ಈ ವಸ್ತುಗಳು ಅಕ್ರಮ ಮಾರ್ಗದಲ್ಲಿ ಅಮೆರಿಕದ ಪಾಲಾಗಿದ್ದವು. ಸದ್ಯ ಜೈಲಿನಲ್ಲಿರುವ ಸುಭಾಷ್‌ ಕಪೂರ್‌ ಇವುಗಳನ್ನೆಲ್ಲ ಅಕ್ರಮವಾಗಿ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಿದ್ದ.  ನ್ಯೂಯಾರ್ಕ್‌ನಲ್ಲಿರುವ ಮೆಟ್ರೊಪಾಲಿಟನ್‌ ಸಂಗ್ರಹಾಲಯದಲ್ಲಿ ಭಾರತಕ್ಕೆ ಸೇರಿದ ಹಲವು ಪ್ರಾಚೀನ ವಸ್ತುಗಳಿವೆ. ಈ ಪೈಕಿ 16 ವಸ್ತುಗಳನ್ನು ಭಾರತಕ್ಕೆ ಮರಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next