Advertisement
ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ ಅವರು ಬರಗಾಲ ಪರಿಹಾರ ಯೋಜನೆ ಅಡಿ 1973-74ನೇ ಸಾಲಿನಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮಂಜೂರಿಗೊಳಿಸಿದ್ದರು. ಆದರೆ ಯೋಜನೆಗೆ 250 ಕೋಟಿ ರೂ.ಗಿಂತ ಹೆಚ್ಚಿನ ಹಣ ಖರ್ಚು ಮಾಡಿದರು ಸಹ ರೈತರು ತಮ್ಮ ಜಮೀನುಗಳಿಗೆ ನೀರು ಪಡೆಯಲು ಆಗುತ್ತಿರಲಿಲ್ಲ.
Related Articles
Advertisement
ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಕೋಡಿಗಳ ಮೂಲಕ ಹರಿದು ಬಿಡುವ ನೀರಿನ ರಭಸ ಕಡಿಮೆ ಮಾಡಲು ಕೋಡಿಗಳ ಹತ್ತಿರ 450 ಮೀಟರ್ ಸಿಮೆಂಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. ಎಡಕ್ಕೆ 1.2 ಮೀಟರ್ ಮತ್ತು ಬಲಕ್ಕೆ 6 ಮೀಟರ್ ತಡೆಗೋಡೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.
ತಾಲೂಕಿನ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಯಿಂದ ರೈತರು ನೀರಿನ ಸದುಪಯೋಗಪಡೆದುಕೊಳ್ಳಬೇಕು ಹಾಗೂ ಅನಾವಶ್ಯಕವಾಗಿ ನೀರು ಹರಿದು ಹೋಗದಂತೆ 80 ಕಿಮೀ ಎಡದಂಡೆ ಮುಖ್ಯಕಾಲುವೆ ಮತ್ತು 64 ಉಪ ಕಾಲುವೆಗಳ ನವೀಕರಣಕ್ಕಾಗಿ ಜಲ ಸಂಪನ್ಮೂಲ ಖಾತೆ ಸಚಿವ ಎಂ.ಬಿ. ಪಾಟೀಲ ಹಾಗೂ ಜಿಲ್ಲಾ ಉಸ್ತುವಾಗಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ನಮ್ಮ ಬೇಡಿಕೆಯಂತೆ ಸಚಿವರು ಕಳೆದ ಮಾಚ್ ìನಲ್ಲಿ ಜಲಾಶಯಕ್ಕೆ ಭೇಟಿ ನೀಡಿ ವಾಸ್ತವ ನೋಡಿ ಯೋಜನೆಗೆ 34.60 ಕೋಟಿ ರೂ. ಮಂಜೂರುಗೊಳಿಸಿದ್ದಾರೆ. ಅಲ್ಲದೇ ಪುರ್ನವಸತಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಲು 17 ಕೋಟಿ ರೂ. ನೀಡಲಾಗಿದೆ. ಯೋಜನೆಯನ್ನು ಸಂಪೂರ್ಣವಾಗಿ ಅಧುನೀಕರಣಗೊಳಿಸಲಾಗುತ್ತಿದೆ ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ತಿಳಿಸಿದ್ದಾರೆ.
*ಶಾಮರಾವ ಚಿಂಚೋಳ