Advertisement
ಬಂಡಾಯ ಸಾಹಿತ್ಯ ಸಂಘಟನೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಬಂಡಾಯ ಸಾಹಿತ್ಯ ನಲವತ್ತರ ಹೆಜ್ಜೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂತಾರಾಷ್ಟ್ರೀಯ ಅಗ್ರಹಾರಗಳು ಇಂದು ಆರ್ಥಿಕ, ಧಾರ್ಮಿಕ ಆಧಿಪತ್ಯ ಸಾಧಿಸುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಹಾಗೂ ಸಮರ್ಥಿಸಿಕೊಳ್ಳಬೇಕು ಎನ್ನುವುದರ ಕುರಿತು ಚಿಂತನೆ ಅಗತ್ಯವಿದೆ ಎಂದರು.
Related Articles
Advertisement
“ಜನತಂತ್ರ; ಸೃಜನಶೀಲತೆ’ ವಿಷಯ ಕುರಿತು ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‌ದಾಸ್, ಚುನಾವಣೆಗಳಿಂದು ಜಾತಿ-ಧರ್ಮ, ಹಣ ಹಾಗೂ ದೈಹಿಕ ಬಲದ ಮೇಲೆ ನಡೆಯುತ್ತಿದ್ದು, ಅತಿಹೆಚ್ಚು ಕ್ರಿಮಿನಲ್ ಕೇಸುಗಳು ಹಾಗೂ ಹಣ ಹೊಂದಿರುವವರು ಚುನಾವಣೆಗಳಲ್ಲಿ ಆಯ್ಕೆಯಾಗುತ್ತಿರುವುದು ಆತಂಕಕಾರಿ ವಿಚಾರ ಎಂದರು.
ಅಂಕಿ-ಅಂಶಗಳ ಪ್ರಕಾರ 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ 543 ಸಂಸದರ ಪೈಕಿ 178 ಮಂದಿಯ ಮೇಲೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇವರೆಲ್ಲ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಆದರೆ, ಯಾವುದೇ ಕ್ರಿಮಿನಲ್ ಕೇಸು ಇರದ ಹಾಗೂ ಹಣವಿಲ್ಲದಂತ ಅಭ್ಯರ್ಥಿಗಳು ಡಿಪಾಸಿಟ್ ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉತ್ತಮ ಪ್ರಜಾಪ್ರಭುತ್ವಕ್ಕಾಗಿ ಧರ್ಮ ಹಾಗೂ ರಾಜಕಾರಣ ಬೇರೆ ಬೇರೆ ಇರಬೇಕು. ಆದರಿಂದು ಧರ್ಮ ರಾಜಕಾರಣವನ್ನು ಕೈಗೆತ್ತಿಕೊಂಡಿದ್ದು, ಧರ್ಮದ ಪ್ರಮುಖರು ರಾಜಕೀಯವನ್ನು ಮುನ್ನಡೆಸುವಂತಹ ಪರಿಸ್ಥಿತಿ ಬಂದಿದೆ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಸಂವಿಧಾನದ ಹುದ್ದೆಯಲ್ಲಿದ್ದು, ಇವರಿಂದ ಪ್ರಜಾಪ್ರಭುತ್ವ, ಜಾತ್ಯಾತೀತ, ಸಾಮಾಜಿಕ ನ್ಯಾಯದ ರಕ್ಷಣೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವವನ್ನು ಕೋಮುವಾದೀಕರಣ ಮಾಡುವ ಪ್ರಯತ್ನಗಳು ನಡೆಯುತ್ತಿದ್ದು, ಅದು ಸಾಧ್ಯವಾಗದಿದ್ದಾಗ ಸಂವಿಧಾನಿಕ ಸಂಸ್ಥೆಗಳನ್ನು ಬಲಹೀನಗೊಳಿಸಲಾಗುತ್ತಿದೆ. ಸರ್ಕಾರದ ಕ್ರಮಗಳನ್ನು ಟೀಕಿಸಿದರೆ ರಾಷ್ಟ್ರದ್ರೋಹ ಹಣೆಪಟ್ಟಿ ಕಟ್ಟಿ ಜೈಲಿಗೆ ಕಳುಹಿಸುತ್ತಿದ್ದಾರೆ. ಜೈಲಿಗೆ ಕಳುಹಿಸಿದರೂ ಪರವಾಗಿಲ್ಲ. ಆದರೆ, ಎನ್‌ಕೌಂಟರ್ ಮಾಡಿ ಸಾಯಿಸುವಂತಹ ಪರಿಸ್ಥಿತಿಯಿದ್ದು, ದೇಶದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದನೆ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಬಂಡಾಯ ಸಾಹಿತ್ಯ ಚಳವಳಿ, ಆರ್.ಜೆ.ಹಳ್ಳಿ ನಾಗರಾಜು ಅವರು ರಚಿಸಿರುವ ಬಂಡಾಯ ಸಾಹಿತ್ಯ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಈ ವೇಳೆ ಸಾಹಿತಿ ಚಂದ್ರಶೇಖರ ಪಾಟೀಲ್, ದಲಿತ ಮುಖಂಡ ಮಾವಳ್ಳಿ ಶಂಕರ್, ಲೇಖಕಿ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ ಪ್ರಮುಖರು ಹಾಜರಿದ್ದರು.