Advertisement

ಭೀಮಾ ಮಹಾ ಉತ್ಸವಕ್ಕೆ ಸಾಕ್ಷಿಯಾದ ಅಪರೂಪದ ಗ್ರಾಹಕರು

12:52 PM Dec 18, 2017 | |

ಬೆಂಗಳೂರು: ಚಿನ್ನಾಭರಣ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರತಿಷ್ಠಿತ ಭೀಮಾ ಜ್ಯುವೆಲರ್, ತನ್ನ ಗ್ರಾಹಕರಿಗಾಗಿಯೇ ಭಾನುವಾರ ಸಂಜೆ “ಭೀಮಾ ಮಹಾ ಉತ್ಸವ’ ಏರ್ಪಡಿಸಿತ್ತು. 

Advertisement

ನಗರದ ತಾಜ್‌ ವೆಸ್ಟ್‌ಎಂಡ್‌ನ‌ಲ್ಲಿ ನಡೆದ ಈ ಉತ್ಸವದಲ್ಲಿ ಅಟ್ಟಕಲರಿ ತಂಡ ಸೇರಿದಂತೆ ದೇಶದ ಖ್ಯಾತ ಕಲಾವಿದರಿಂದ ನೃತ್ಯ, ಸಂಗೀತ, ಫ್ಯಾಷನ್‌ ಶೋ, ಕಣ್ಮನ ಸೆಳೆಯುವ ಚಿನ್ನಾಭರಣಗಳ ಪ್ರದರ್ಶನಗಳ ಮೂಲಕ ಗ್ರಾಹಕರಿಗೆ ಮನರಂಜನೆಯ ರಸದೌತಣ ಉಣಬಡಿಸಲಾಯಿತು.

ಈ ಮಹಾ ಉತ್ಸವವು ಗ್ರಾಹಕರ ಸಮ್ಮಿಲನಕ್ಕೆ ವೇದಿಕೆಯೂ ಆಗಿತ್ತು. ಚಿನ್ನಾಭರಣ ಮಾರುಕಟ್ಟೆಯಲ್ಲಿ ಭೀಮಾ 92 ವಸಂತಗಳನ್ನು ಪೂರೈಸಿದೆ. ಹಾಗಾಗಿ, ಎರಡು-ಮೂರು ತಲೆಮಾರಿನ ಗ್ರಾಹಕರನ್ನು ಅದು ಹೊಂದಿದೆ. ಆ ಅಪರೂಪದ ಗ್ರಾಹಕರು ಉತ್ಸವಕ್ಕೆ ಸಾಕ್ಷಿಯಾದರು. ಹಳೆಯ ಗ್ರಾಹಕರೊಂದಿಗೆ ಭೀಮಾ ವ್ಯವಸ್ಥಾಪಕ ನಿರ್ದೇಶಕ ಬಿ. ಕೃಷ್ಣನ್‌ ಮತ್ತು ಅವರ ಕುಟುಂಬ ಕೆಲಹೊತ್ತು ಕಳೆದರು. 

50ರಿಂದ 60 ವರ್ಷಗಳ ಹಿಂದಿನ ತನ್ನ ಗ್ರಾಹಕರನ್ನು ಭೀಮಾ ಖುದ್ದು ಮನೆಗೆ ತೆರಳಿ, ಆತ್ಮೀಯವಾಗಿ ಆಹ್ವಾನ ನೀಡಿತ್ತು. ಇದಕ್ಕೆ ಸ್ಪಂದಿಸಿ ಮಾರತ್‌ಹಳ್ಳಿ, ವೈಟ್‌ಫೀಲ್ಡ್‌, ತಾವರೆಕೆರೆ, ತುಮಕೂರು ಸೇರಿದಂತೆ ವಿವಿಧೆಡೆಯಿಂದ ಕುಟುಂಬ ಸಹಿತರಾಗಿ ಬಂದ ಗ್ರಾಹಕರು ಮನರಂಜನೆಯಲ್ಲಿ ಮಿಂದೆದ್ದರು. ಇದಕ್ಕೂ ಮುನ್ನ ಬಿ. ಕೃಷ್ಣನ್‌ ದಂಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುತ್ರ ವಿಷ್ಣು, ಪುತ್ರಿ ರಶ್ಮಿ ಭಾಗವಹಿಸಿದ್ದರು. 

ಬಾಂಧವ್ಯ ಗಟ್ಟಿಗೊಳಿಸಲು ವೇದಿಕೆ: ಕೃಷ್ಣನ್‌ ಮಾತನಾಡಿ, “ಗುಣಮಟ್ಟ ಮತ್ತು ಪರಿಶುದ್ಧತೆಗೆ ಭೀಮಾ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ಇದು ಅಚ್ಚುಮೆಚ್ಚು. ಹತ್ತಾರು ವರ್ಷಗಳಿಂದ ಜನ ಭೀಮಾದೊಂದಿಗೆ ನಂಟು ಹೊಂದಿದ್ದಾರೆ. ಆ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ಇದೊಂದು ವೇದಿಕೆ’ ಎಂದರು.  

Advertisement

ಇದೇ ಸಂದರ್ಭದಲ್ಲಿ ದಸರಾ, ದೀಪಾವಳಿ ಸೇರಿದಂತೆ ಹಬ್ಬದ ಸೀಜನ್‌ನಲ್ಲಿ (ಅ. 9ರಿಂದ ನ. 24) ಭೀಮಾ ಉತ್ಸವ ಹಮ್ಮಿಕೊಂಡಿತ್ತು. ಆ ಅವಧಿಯಲ್ಲಿ ಭೀಮಾ ಜುವೆಲರ್ನಲ್ಲಿ 25 ಸಾವಿರಕ್ಕಿಂತ ಹೆಚ್ಚು ಮೊತ್ತದ ಚಿನ್ನಾಭರಣಗಳನ್ನು ಖರೀದಿಸಿದವರಿಗೆ ಕೂಪನ್‌ ನೀಡಲಾಗಿತ್ತು. ನಂತರ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿಗಳ ಆಯ್ಕೆ ಮಾಡಲಾಗಿತ್ತು. ಹೀಗೆ ಆಯ್ಕೆಯಾದವರಿಗೆ ಭಾನುವಾರ ನಡೆದ ಉತ್ಸವದಲ್ಲಿ ಕಾರು ಕೊಡುಗೆ ನೀಡಲಾಯಿತು. 

ಶಿವಮೊಗ್ಗದಲ್ಲಿ ಶಾಖೆ: ನಗರದಲ್ಲಿ ಭೀಮಾ ಒಟ್ಟಾರೆ ಹತ್ತು ಶಾಖೆಗಳನ್ನು ಹೊಂದಿದೆ. ಇದಲ್ಲದೆ, ಉಡುಪಿ, ಮಂಗಳೂರಿನಲ್ಲೂ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಶೀಘ್ರದಲ್ಲೇ ಶಿವಮೊಗ್ಗದಲ್ಲಿ ವಹಿವಾಟನ್ನು ವಿಸ್ತರಿಸಲಿದೆ ಎಂದು ಇದೇ ವೇಳೆ ಭೀಮಾ ಜುವೆಲರ್ ಪ್ರಕಟಿಸಿತು.

Advertisement

Udayavani is now on Telegram. Click here to join our channel and stay updated with the latest news.

Next