ಮಳೆಗಾಲ ಶುರುವಾಗಿದೆ. ಹಾಗಾಗಿ ಎಲ್ಲರೂ ಛತ್ರಿಯನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡೇ ಓಡಾಡುತ್ತಾರೆ. ಕಪ್ಪು ಬಣ್ಣ ಬಿಸಿಲಿನಿಂದ ಅತಿ ಹೆಚ್ಚು ರಕ್ಷಣೆ ನೀಡುತ್ತೆ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಛತ್ರಿಗಳಲ್ಲಿ ಕಪ್ಪು ಬಣ್ಣ ಬಳಸಲಾಗುತ್ತದೆ ಎಂಬುದೂ ಎಲ್ಲರಿಗೆ ತಿಳಿದಿದೆ. ಆದರೆ ಮಳೆಗಾಲದಲ್ಲಿ ಬಿಸಿಲು ಕಡಿಮೆ ಇರುವುದರಿಂದ ಜನರು ಕಪ್ಪು ಬಣ್ಣ ಅಲ್ಲದೆ, ಬೇರೆ ಬೇರೆ ಬಣ್ಣದ ಛತ್ರಿಗಳನ್ನೂ ಬಳಸುತ್ತಿ¨ªಾರೆ. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಬೋರಿಂಗ್ ಬ್ಲಾಕ್ ಬದಲಿಗೆ ತಮ್ಮ ನೆಚ್ಚಿನ ಕಾಟೂìನ್ ಅಥವಾ ಅನೀಮ್ ಪಾತ್ರಗಳ ಚಿತ್ರವುಳ್ಳ ಛತ್ರಿಗಳನ್ನು ಇಷ್ಟ ಪಡುತ್ತಾರೆ. ಕಾಮನಬಿಲ್ಲಿನ ಬಣ್ಣವುಳ್ಳ ಛತ್ರಿಗಳು ತುಂಬಾ ಸಮಯದಿಂದ ಬಳಕೆಯಲ್ಲಿವೆ. ಆದರೆ ಇದೀಗ ಟ್ರೆಂಡ್ ಆಗುತ್ತಿರುವ ಸ್ಟೈಲ… ಎಂದರೆ ಟ್ರಾನ್ಸ್‌ಪರೆಂಟ್ ಛತ್ರಿಗಳು. ಕೆಲವರು ಟ್ರಾನ್ಸ್‌ಪರೆಂಟ… ಛತ್ರಿಗಳಲ್ಲೂ ಸಣ್ಣ ಪುಟ್ಟ ಚಿತ್ರ, ಆಕಾರ ಅಥವಾ ಚಿನ್ಹೆ ಇರುವುದನ್ನು ಇಷ್ಟಪಡುತ್ತಾರೆ. ಹೂವು, ಎಲೆ, ಚಿಟ್ಟೆ, ಹೃದಯಾಕಾರ, ನೀರಿನ ಗುಳ್ಳೆ, ಪುಗ್ಗೆ, ಮೋಡ, ಚಂದ್ರ, ಸೂರ್ಯ, ತಾರೆಗಳ ಚಿತ್ರಗಳನ್ನು ಟ್ರಾನ್ಸ್‌ಪರೆಂಟ್ ಛತ್ರಿಗಳ ಮೇಲೆ ಬಿಡಿಸಿ¨ªಾರೆ. ಅವುಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ಹಲವರು ಇವನ್ನು ಆನ್‌ಲೈನ್ ಶಾಪಿಂಗ್ ಮೂಲಕವೂ ತರಿಸಿಕೊಳ್ಳುತ್ತಿ¨ªಾರೆ.
ಚಿತ್ರ ಬಿಡಿಸಲು ತಿಳಿದಿದ್ದರೆ, ಈ ಪಾರದರ್ಶಕ ಛತ್ರಿಗಳ ಮೇಲೆ ಪೈಂಟ್‌ನಿಂದ ಚಿತ್ರ, ಆಕಾರ ಅಥವಾ ನಿಮಗಿಷ್ಟದ ಚಿಹ್ನೆಗಳನ್ನು ಬಿಡಿಸಬಹುದು. ಈ ರೀತಿ ನಿಮ್ಮ ಪ್ರತಿಭೆ ಹಾಗು ಕಲೆಯನ್ನೂ ಪ್ರದರ್ಶಿಸಬಹುದು! ಇನ್ನು ಪ್ಲಾಸ್ಟಿಕ್‌ನಿಂದ ಮಾಡಲಾದ ಪಾರದರ್ಶಕ ಛತ್ರಿಗಳ ಕೆಳಬದಿ, ಲೇಸ್ ವರ್ಕ್ ಇರುವ ಛತ್ರಿಗಳೂ ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಈ ರೀತಿ ಲೇಸ್, ಬಣ್ಣ ಬಣ್ಣದ ಬಟ್ಟೆ, ಉಣ್ಣೆ, ವೆಲ್ವೆಟ್ (ಮಕ್ಮಲ…), ಮಸ್ಲಿನ್ ಬಟ್ಟೆ (ತೆಳು ಹತ್ತಿಬಟ್ಟೆ), ಕ್ರೋಶ (ಕೊಕ್ಕೆ ಸೂಜಿಯಿಂದಾದ ದಾರದ ಹೆಣಿಗೆ ಕೆಲಸ) ಹಾಗು ಸ್ಯಾಟಿನ್ ಬಟ್ಟೆ ಉಳ್ಳ ಪಾರದರ್ಶಕ ಛತ್ರಿಗಳೂ ಸಿಗುತ್ತವೆ. ಪ್ಲಾಸ್ಟಿಕ್‌ನ ಪದರ ಇರುವ ಕಾರಣ, ಕೆಳಗಿರುವ ಬಟ್ಟೆ ಒ¨ªೆ ಆಗುವುದಿಲ್ಲ. ಉಟ್ಟ ಉಡುಪಿಗೆ ಮ್ಯಾಚ್ ಆಗುವ ಬಣ್ಣ ಗಳನ್ನೂ ವಾಶೆಬಲ… ಪೈಂಟ… (ಒಗೆಯಬಹುದಾದ ಅಥವಾ ತೊಳೆದು ತೆಗೆಯಬಹುದಾದ ಬಣ್ಣ) ಜೊತೆ ಇಂಥ ಪಾರದರ್ಶಕ ಛತ್ರಿಗಳ ಮೇಲೆ ಮೂಡಿಸಬಹುದಾಗಿದೆ. ಪಾರದರ್ಶಕ ಛತ್ರಿಗಳ ಬಾರ್ಡರ್ ಕೂಡ ಭಿನ್ನ ಭಿನ್ನವಾಗಿ ಬಿಡಿಸಬಹುದು.
ಸಂಪೂರ್ಣವಾಗಿ ಬಣ್ಣ ಹೀನ ಛತ್ರಿಗಳ ಮೇಲೆ ಕೇವಲ ಬಾರ್ಡರ್ ಬಿಡಿಸಿದಾಗ ಅದು ಎದ್ದು ಕಾಣುತ್ತದೆ. ವಾಶೆಬಲ… ಪೈಂಟ್ ಬಳಸಿ ಉಟ್ಟ ಉಡುಪಿಗೆ ಮ್ಯಾಚ್ ಆಗುವ ಬಣ್ಣವನ್ನು ಬಾರ್ಡರ್‌ನಂತೆ ಬಿಡಿಸಬಹುದು.
ಚೈನೀಸ್ ಛತ್ರಿಗಳಲ್ಲೂ ಇಂಥ ಆಯ್ಕೆಗಳಿವೆ. ಮದುವೆ, ಸೀಮಂತ, ಹುಟ್ಟುಹಬ್ಬ, ನಿಶ್ಚಿತಾರ್ಥ ಮತ್ತು ಪಾರ್ಟಿಗಳಲ್ಲಿ ಥೀಮ… ಆಗಿ ಇವುಗಳನ್ನು ಆಯ್ಕೆಮಾಡುತ್ತಾರೆ. ಗಂಡಿನ ಕಡೆಯವರೆಲ್ಲ ನೀಲಿ ಮತ್ತು ಹೆಣ್ಣಿನ ಕಡೆಯವರೆಲ್ಲ ಗುಲಾಬಿ ಬಣ್ಣದ ಛತ್ರಿಗಳನ್ನು ಹಿಡಿದು ಫೋಟೋಗೆ ಪೋಸ್ ಕೊಡುತ್ತಾರೆ. ಚೈನೀಸ್ ಛತ್ರಿ ಮುಖವನ್ನು ಮುಚ್ಚದ ಕಾರಣ ಅವುಗಳನ್ನು ಹೆಚ್ಚಾಗಿ ಇಂಥ ಫೋಟೋಶೂಟ್‌ಗೆ ಬಳಸುತ್ತಾರೆ. ಸಭೆ- ಸಮಾರಂಭಗಳಲ್ಲಿ, ಪಾರ್ಟಿಗಳಲ್ಲಿ ರಿಟರ್ನ್ ಗಿಫr… ಆಗಿ ಪಾರದರ್ಶಕ ಛತ್ರಿಗಳನ್ನು ನೀಡಿ ತಾವು ಟ್ರೆಂಡಿಯಾಗಿರುವುದನ್ನು ತೋರಿಸಿಕೊಳ್ಳುತ್ತಾರೆ! 3 ಫೋಲ್ಡ… ಅಥವಾ 4 ಫೋಲ್ಡ… ಛತ್ರಿಗಳಲ್ಲೂ ಪಾರದರ್ಶಕ ಛತ್ರಿಗಳು ಇವೆ! ಹಾಗಾಗಿ, ಇಷ್ಟು ದೊಡ್ಡ ಕೊಡೆ ಹೊತ್ತುಕೊಂಡು ಹೋಗಬೇಕಲ್ಲವೇ ಅನ್ನುವ ತಲೆ ನೋವು ಬೇಡ. ಆರಾಮಾಗಿ ತಮ್ಮ ತಮ್ಮ ಬ್ಯಾಗ್‌ನಲ್ಲಿ ಪುಟ್ಟ ಪುಟ್ಟ ಪಾರದರ್ಶಕ ಛತ್ರಿಗಳನ್ನು ಹೊತ್ತೂಯ್ಯಬಹುದಾಗಿದೆ.
ಮಳೆ ಬರುವ ಹಾಗಿದೆ… ಕ್ಯೂಟ… ಪಾರದರ್ಶಕ ಛತ್ರಿ ಜೊತೆ ರೆಡಿಯಾಗಿರಿ.
-ಅದಿತಿಮಾನಸ ಟಿ. ಎಸ್.