Advertisement
ನಗರದ ವಿವಿಧೆಡೆಯಲ್ಲಿ ಕೃತಕ ನೆರೆ ಪೀಡಿತ ಹಲವು ಪ್ರದೇಶಗಳಿವೆ. ಮಳೆಗಾಲ ಬಂತೆಂದರೆ ಇಲ್ಲಿನ ನಿವಾಸಿಗಳಿಗೆ ನಿದ್ದೆಯೇ ಬಾರದು. ಇಂಥ ಸ್ಥಳಗಳ ಪೈಕಿ ಪ್ರಮುಖವಾದುದು ಪಾಂಡೇಶ್ವರ, ಸುಭಾಶ್‌ನಗರ, ಅತ್ತಾವರ ಹಾಗೂ ಜಪ್ಪು ಪ್ರದೇಶ.
Related Articles
Advertisement
ಅತ್ತಾವರ ವಾರ್ಡ್‌ನ ಜಪ್ಪು ಕುಡಾ³ಡಿ ಬಳಿ ರಾಜಕಾಲುವೆಯ ಅಸಮರ್ಪಕ ವ್ಯವಸ್ಥೆಯಿಂದಾಗಿ ಇಕ್ಕೆಲಗಳಲ್ಲೂ ಸಮಸ್ಯೆ ಉದ್ಭವಿಸಿತ್ತು. ನೆರೆ ನೀರಿನಿಂದ ಸ್ಥಳೀಯರಿಗೆ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಇದೀಗ ಇಲ್ಲಿನ ರಾಜಕಾಲುವೆಯ ಆಯ್ದ ಭಾಗಗಳಲ್ಲಿ 1.50 ಕೋ.ರೂ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಅದೂ ತ್ವರಿತಗತಿಯಲ್ಲಿ ನಡೆಯಬೇಕಿದೆ.
ರಾಜಕಾಲುವೆಯ ದಾರಿ ಬದಲಾಗಲಿ!
ಜಪ್ಪು ವಾರ್ಡ್‌ನ ಕಟ್ಟೆಪುಣಿ ವ್ಯಾಪ್ತಿಗೆ ಪಂಪ್ ವೆಲ್ ಸೇರಿದಂತೆ ಕೆಲವೆಡೆಯಿಂದ ಮಳೆ ನೀರು ಹರಿದು ಬರುವ ಕಾರಣ, ಒತ್ತಡ ಹೆಚ್ಚು. ಸಂಕಷ್ಟವೂ ಈ ವಾರ್ಡ್‌ನವರಿಗೇ ಹೆಚ್ಚು. ರಾಜಕಾಲುವೆಯ ಎತ್ತರ ಕಡಿಮೆಯಾಗಿದ್ದು, ಸ್ವತ್ಛವೂ ಆಗಿಲ್ಲ. ಸ್ಥಳೀಯ ಕಾರ್ಪೊರೇಟರ್ ಭರತ್ ಕುಮಾರ್ ಅವರ ಪ್ರಕಾರ “ಪೆಗಾಸಸ್’ ಭಾಗ ಸೇರಿದಂತೆ ಬಹುಕಡೆಯಿಂದ ಮಳೆ ನೀರು ಕಟ್ಟೆಪುಣಿ ಭಾಗಕ್ಕೆ ಬರುವುದರಿಂದ ಇಲ್ಲಿನ ರಾಜಕಾಲುವೆಯಲ್ಲಿ ನೀರಿನ ಒತ್ತಡ ಅಧಿಕವಾಗಿದೆ. ಇದಕ್ಕಾಗಿ ಪೆಗಾಸಸ್ ಭಾಗದಿಂದ ನೀರನ್ನು ಜಪ್ಪಿನಮೊಗರು ದ್ವಾರದ ಕಡೆಗೆ ತಿರುಗಿಸಿ ನೇತ್ರಾವತಿಗೆ ಕಳುಹಿಸಿದರೆ ಬಹುತೇಕ ಸಮಸ್ಯೆ ನಿವಾರಣೆಯಾಗುತ್ತದೆ’ ಎನ್ನುತ್ತಾರೆ.
ರಾಜಕಾಲುವೆಯಲ್ಲಿ ಒಳ ಚರಂಡಿಯದ್ದೇ ನೀರು!
ಪಾಂಡೇಶ್ವರ ಭಾಗದಿಂದ ಹರಿದುಬರುವ ರಾಜಕಾಲುವೆಯು ಒಳಚರಂಡಿ ನೀರಿನಿಂದ ಸಂಪೂರ್ಣ ಮಲಿನವಾಗಿದೆ. ಪರಿಣಾಮವಾಗಿ ರಾಜಕಾಲುವೆಯ ನೀರು ನದಿಗೆ ಸೇರುವ ಮೀನುಗಾರಿಕಾ ದಕ್ಕೆಯಲ್ಲಿ ವಾಸನೆ ಹಾಗೂ ಗಲೀಜು ಪರಿಸ್ಥಿತಿಯಿದೆ. ಸ್ಮಾರ್ಟ್ ಸಿಟಿಯ ರಾಜಕಾಲುವೆಗಳ ಸ್ವರೂಪವೂ ಬದಲಾಗಬೇಕಿದೆ.