Advertisement
ಉತ್ತರ ಕರ್ನಾಟಕದ ಮೊದಲ ಹಾಗೂ ನೈಋತ್ಯ ರೈಲ್ವೆ ವಲಯದ ಎರಡನೇ ಮ್ಯೂಸಿಯಂ ಇದಾಗಿದೆ. ಜು. 31ರಂದು ಇದು ಲೋಕಾರ್ಪಣೆಗೊಂಡಿದ್ದು, ಆ. 5ರ ನಂತರದಲ್ಲಿ ಸಾರ್ವಜನಿಕರು ವೀಕ್ಷಣೆ ಮಾಡಬಹುದಾಗಿದೆ. ಮೊದಲ ಐದು ದಿನ ಉಚಿತ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಆ. 9ರ ವರೆಗೆ ಸಂಜೆ 4ರಿಂದ 7 ಗಂಟೆವರೆಗೆ ಮ್ಯೂಸಿಯಂ ತೆರೆದಿರುತ್ತದೆ. ಆ. 11ರಿಂದ ಮಂಗಳವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12ರಿಂದ ಸಂಜೆ 7ಗಂಟೆವರೆಗೆ ಶನಿವಾರ, ರವಿವಾರ ಹಾಗೂ ರಜಾ ದಿನಗಳಲ್ಲಿ ಮಧ್ಯಾಹ್ನ 12ರಿಂದ ರಾತ್ರಿ 8ಗಂಟೆವರೆಗೆ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಇದ್ದು, ಪ್ರತಿ ಸೋಮವಾರ ರಜಾ ದಿನವಾಗಿದೆ. 12 ವರ್ಷ ಮೇಲ್ಪಟ್ಟವರಿಗೆ ಪ್ರತಿಯೊಬ್ಬರಿಗೆ 20, 5ರಿಂದ 12 ವರ್ಷದೊಳಗಿನವರಿಗೆ 10 ಹಾಗೂ ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ. ಟಾಯ್ ರೈಲು ಒಬ್ಬರಿಗೆ 10 ರೂ. ಶುಲ್ಕ ಇದ್ದು, ಮೂರು ಸುತ್ತು ಸುತ್ತಲಿದೆ.
Advertisement
5ರಿಂದ ರೈಲ್ವೆ ಮ್ಯೂಸಿಯಂಸಾರ್ವಜನಿಕ ವೀಕ್ಷಣೆಗೆ ಲಭ್ಯ
12:07 PM Aug 03, 2020 | Suhan S |
Advertisement
Udayavani is now on Telegram. Click here to join our channel and stay updated with the latest news.