Advertisement

ತಾಯಿಯ ಸ್ಮರಣೆಗಾಗಿ ಪಿರಾಮಿಡ್‌ ಮಾದರಿ ದೇವಸ್ಥಾನ

03:31 PM Jun 01, 2022 | Team Udayavani |

ತಾಂಬಾ: ತಾಯಿ ಸ್ಮರಣೆಗಾಗಿ ಮಕ್ಕಳು ಹಲವು ರೀತಿಯ ಚಟುವಟಿಕೆ ಮೂಲಕ ಹೆತ್ತವರನ್ನು ಸಮಾಜದಲ್ಲಿ ಸ್ಮರಿಸಲು ಮುಂದಾಗುವುದು ಸಾಮಾನ್ಯ. ವಿಜಯಪುರ ಜಿಲ್ಲೆಯಲ್ಲಿ ತಾಯಿಯ ಸ್ಮರಣೆಗಾಗಿ ಮಕ್ಕಳು ಪಿರಾಮಿಡ್‌ ಮಾದರಿಯ ದೇಗುಲ ಕಟ್ಟಿಸಿ ಗಮನ ಸೆಳೆದಿದ್ದಾರೆ.

Advertisement

ಹೊನ್ನಳ್ಳಿ ಗ್ರಾಮದಲ್ಲಿ ಪ್ರೇಮಾವತಿ ಕುಮಾನಿ ಎಂಬವರು 3 ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಾಯಿ ಸ್ಮರಣೆಗಾಗಿ ಏನಾದರೂ ಮಾಡಬೇಕು ಎಂದು ಯೋಚಿಸಿದ ಪ್ರೇಮಾವತಿ ಅವರ ಮಕ್ಕಳು ತಮ್ಮೂರಲ್ಲೇ ತಾಯಿಯ ದೇವಸ್ಥಾನ ಕಟ್ಟಲು ಯೋಜಿಸಿ ಕಾರ್ಯರೂಪಕ್ಕೆ ತಂದಿದ್ದಾರೆ.

ಪ್ರೇಮಾವತಿ ಅವರ ಮಕ್ಕಳಾದ ರಾಜಕುಮಾರ, ಗಂಗುಬಾಯಿ, ದುಂಡಪ್ಪ, ಶ್ರೀಶೈಲ, ಪ್ರಕಾಶ ಹಾಗೂ ಕುಟುಂಬ ಸದಸ್ಯರು ಸೇರಿ ಅವ್ವನ ವಿಚಾರಧಾರತೆಗಳು ತಮ್ಮೊಂದಿಗಿರಲಿ ಎಂಬ ಸದಾಶಯದೊಂದಿಗೆ ಪಿರಾಮಿಡ್‌ ಮಾದರಿಯಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.

ಹೊನ್ನಳ್ಳಿ ಗ್ರಾಮದ ವಿಜಯಪುರ ರಸ್ತೆಯಲ್ಲಿರುವ 4.10 ಎಕರೆ ಭೂಮಿಯಲ್ಲಿ ಅವರ ತಂದೆಯವರು ಬಡ ಮಕ್ಕಳಿಗಾಗಿ ನಿರ್ಮಿಸಿದ ಶಾಲಾ ಆವರಣದಲ್ಲಿ ಸುಮಾರು 25 ಲಕ್ಷ ರೂ. ಖರ್ಚು ಮಾಡಿ ತಾಯಿಯ ದೇವಸ್ಥಾನ ನಿರ್ಮಿಸಿ ಅಲ್ಲಿ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ಇದನ್ನೂ ಓದಿ:ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗೆ ಇ.ಡಿ. ಸಮನ್ಸ್ ಜಾರಿ, ಕಾಂಗ್ರೆಸ್ ಆಕ್ರೋಶ

Advertisement

ಎಸ್‌.ಡಿ. ಕುಮಾನಿಯವರ ಹಿರಿಯ ಪುತ್ರ ರಾಜಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ಹೆತ್ತವರ ಪಾತ್ರ ಬಹಳ ಮಹತ್ವದಾಗಿರುತ್ತದೆ. ಆದರೆ ಮಕ್ಕಳು ತಮ್ಮ ಭವಿಷ್ಯ ರೂಪಿಸಿಕೊಂಡ ಬಳಿಕ ಹೆತ್ತವರನ್ನು ನಿರ್ಲಕ್ಷಿಸುತ್ತಾರೆ. ಪ್ರಪಂಚದಲ್ಲಿರುವ ಯಾವ ಮಕ್ಕಳು ಕೂಡಾ ಹೆತ್ತವರನ್ನು ನಿರ್ಲಕ್ಷಿಸಬಾರದು. ಕೊನೆವರೆಗೂ ಹೆತ್ತವರ ಸೇವೆ ಸಲ್ಲಿಸಬೇಕು. ಈ ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ತಾಯಿಯ ದೇವಸ್ಥಾನವನ್ನು ನಿರ್ಮಿಸಿದ್ದೇವೆ ಎಂದರು.

ಪ್ರೇಮಾವತಿ ಅವರ ಅಂತ್ಯಕ್ರಿಯೆ ನಡೆಸದ ಸ್ಥಳದಲ್ಲಿ 45×35 ಅಡಿ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಸುತ್ತಲೂ ಪತ್ರಿ, ಬನ್ನಿ, ಅರಳಿಮರ, ತೆಂಗು, ಬೇವು ಹೀಗೆ ವಿವಿಧ ಸಸಿಗಳನ್ನು ನೆಟ್ಟಿದ್ದಾರೆ. ಕುಟುಂಬದ ಸದಸ್ಯ ಅಲ್ಲಮಪ್ರಭು ಮಲ್ಲಿಕಾರ್ಜುಮಠ ಅವರ ಸಲಹೆ ಮೇರೆಗೆ ದೇವಸ್ಥಾನ ನಿರ್ಮಿಸುವ ಮಾದರಿಯನ್ನು ಪಿರಾಮಿಡ್‌ ರೂಪ ನೀಡಲಾಗಿದೆ ಎಂದು ಕುಮಾನಿ ಕುಟುಂಬವದರು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next