Advertisement
– ವಿವಿ ಕಾಯ್ದೆಗೆ ಸಮಗ್ರ ತಿದ್ದುಪಡಿ ಹಿಂದಿನ ಉದ್ದೇಶ ಏನು ?ವಿವಿಗಳಲ್ಲಿ ಏನು ನಡೆಯುತ್ತಿದೆ ಎಂಬುದು ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಯಾವ ವಿವಿಯಲ್ಲಿ ಎಷ್ಟು ಜಾಗ ಇದೆ, ಎಷ್ಟು ಕಟ್ಟಡ ಇವೆ, ಎಷ್ಟು ಪ್ರಾಧ್ಯಾಪಕರಿದ್ದಾರೆ, ಎಷ್ಟು ಹಣಕಾಸು ವ್ಯವಹಾರ ನಡೆಯುತ್ತದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿಯೂ ಬರುವುದಿಲ್ಲ. ಹೀಗಾಗಿ, ಸರ್ಕಾರ, ವಿಶ್ವವಿದ್ಯಾಲಯಗಳ ನಡುವೆ ಇನ್ನೂ ಉತ್ತಮ ಸಂವಹನ ಸೇರಿದಂತೆ ವಿವಿಗಳ ಗುಣಮಟ್ಟ ಸುಧಾರಣೆ ಉದ್ದೇಶದಿಂದಲೇ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.
ನಿಯಂತ್ರಣ ಅಲ್ಲ, ಬೇಕಾದರೆ ನಿಗಾ ಎನ್ನಬಹುದು. ನನ್ನ ಪ್ರಕಾರ ಇದರ ಅಗತ್ಯತೆ ಇದೆ. ಯಾಕೆಂದರೆ, ಕೆಲವು ವಿವಿಗಳಲ್ಲಿ ಅವ್ಯವಹಾರವೂ ನಡೆದಿದೆ. ಕಾಮಗಾರಿಗಳಿಗೆ ಅನುಮೋದನೆ ನೀಡಿದ ಮೊತ್ತಕ್ಕಿಂತ ಡಬಲ್ ಹಣ ಬಿಡುಗಡೆ
ಮಾಡಿಕೊಳ್ಳಲಾಗಿದೆ. ಬೆಂಗಳೂರು ವಿವಿಯಲ್ಲಿ 1100 ಎಕರೆ ಜಾಗ ಇದೆ. ಅದರಲ್ಲಿ ನೂರು ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ಸಂಗತಿಗಳನ್ನು ಸರ್ಕಾರ ಗಮನಿಸದೇ ಹೋದರೆ, ವಿವಿಗಳ ಆಸ್ತಿ ಕೈ ತಪ್ಪುವುದಿಲ್ಲವೇ? – ಇತ್ತೀಚೆಗೆ ನೀವು ಕುಲಪತಿಗಳ ವಿರುದಟಛಿ ಟೀಕೆ ಮಾಡುತ್ತಿದ್ದೀರಿ. ಸರ್ಕಾರದ ಸಚಿವರಾಗಿ ನೀವು
ವಿವಿ ಕುಲಪತಿಗಳು ಭ್ರಷ್ಟರು ಎಂದು ಹೇಳಬಹುದಾ?
ಹೌದು, ಬಹುತೇಕ ವಿವಿಗಳಲ್ಲಿ ನಡೆದಿರುವ ಕಾಮಗಾರಿಗಳಲ್ಲಿ ಸಾಕಷ್ಟು ಗೋಲ್‌ಮಾಲ್ ಆಗಿದೆ. ಒಂದು ಕಾಮಗಾರಿಗೂ ಸರ್ಕಾರದಿಂದ ಅನುಮತಿ ಪಡೆಯುವುದಿಲ್ಲ. ವಿಶ್ವೇಶ್ವರಯ್ಯ ವಿವಿಯ ಮುದ್ದೇನಹಳ್ಳಿ ಕೇಂದ್ರ ಸ್ಥಾಪನೆಗೆ 49 ಕೋಟಿಗೆ ಅನುಮೋದನೆ ಪಡೆದು, 74 ಕೋಟಿ ರೂಪಾಯಿ ಪೇಮೆಂಟ್ ಮಾಡಿದೆ. ಕುಲಪತಿ ಮನೆ ರಿಪೇರಿ ಮಾಡಲಿಕ್ಕೆ 5 ಕೋಟಿ ರೂಪಾಯಿ ಖರ್ಚು ಲೆಕ್ಕ ತೋರಿಸಲಾಗಿತ್ತು. ಅದರ ಬಗ್ಗೆ ತನಿಖೆ ಮಾಡಿದಾಗ ಎಲ್ಲಾ ಬಯಲಿಗೆ ಬಂತು. ಈಗ ವಿಸಿ ಸಸ್ಪೆಂಡ್ ಆಗಿದ್ದಾರೆ. ಅದೇ ರೀತಿ ಧಾರವಾಡದ ಕರ್ನಾಟಕ ವಿವಿ ಕುಲಪತಿ, ಶಿವಮೊಗ್ಗ, ಮೈಸೂರು, ವಿಜಯಪುರ ವಿವಿ ಕುಲಪತಿಗಳು ಅವ್ಯವಹಾರದ ಕೇಸ್‌ನಲ್ಲಿಯೇ ಅಮಾನತ್ತಾಗಿದ್ದಾರೆ.
Related Articles
ಹೌದು. ಈಗಿರುವ ಕಾಯ್ದೆಯಲ್ಲಿ ಅವರ ವಿರುದಟಛಿ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಯಾವ ರೀತಿಯಲ್ಲೂ ಅಧಿಕಾರ ಇಲ್ಲ. ಹೊಸ ಕಾಯ್ದೆ ಪ್ರಕಾರ ತಪ್ಪು ಮಾಡುವ ಎಲ್ಲರಿಗೂ ಶಿಕ್ಷೆ ಆಗುತ್ತದೆ. ಸರ್ಕಾರದ ಕ್ರಮ ವಿಳಂಬ ಆಗಬಹುದು ಆದರೆ, ಕೈ ಕಟ್ಟಿ ಕೂರುವುದಿಲ್ಲ.
Advertisement
– ವಿವಿಗಳ ಕುಲಪತಿ ಹಾಗೂ ಕುಲಸಚಿವರ ನೇಮಕಾತಿಯಲ್ಲಿ ಪ್ರತಿ ಬಾರಿ ಗೊಂದಲ ಯಾಕೆ?ಈಗಿರುವ ಕಾಯ್ದೆಯಲ್ಲಿ ಸರ್ಕಾರ ಏನೂ ಮಾಡುವಂತಿಲ್ಲ. ಕೇವಲ ರಾಜ್ಯಪಾಲರು ಸೂಚಿಸಿರುವ ವ್ಯಕ್ತಿಗಳ ನೇಮಕ ಮಾಡುವುದಷ್ಟೇ ನಮ್ಮ ಕೆಲಸ. ಅಲ್ಲದೇ ವಿಸಿಗಳು ನಿವೃತ್ತಿ ಆಗುವವರೆಗೂ ಶೋಧನಾ ಸಮಿತಿ ರಚನೆ ಆಗದಿರುವುದರಿಂದ ವಿಸಿಗಳ ನೇಮಕ ವಿಳಂಬ ಆಗುತ್ತಿದೆ. ಹೀಗಾಗಿ ಮೂರು ತಿಂಗಳು ಮೊದಲೇ ವಿಸಿಗಳ ನೇಮಕಕ್ಕೆ ಶೋಧನಾ ಸಮಿತಿ ರಚಿಸಿ, ವಿಸಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. – ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿ ವರ್ಷ ಪೂರೈಸುತ್ತಿದ್ದೀರಿ ? ಇಲಾಖೆಯಲ್ಲಿ ಏನಾದರೂ ಬದಲಾವಣೆಯಾಗಿದೆಯಾ?
ಉನ್ನತ ಶಿಕ್ಷಣ ಇಲಾಖೆಯಲ್ಲಿ ಮಾಡಲು ಸಾಕಷ್ಟು ಕೆಲಸ ಇದೆ. ಇಲಾಖೆಯ ವ್ಯಾಪ್ತಿಯಲ್ಲಿ 52 ವಿಶ್ವವಿದ್ಯಾಲಯಗಳಿದ್ದು, 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. 3 ಸಾವಿರಕ್ಕೂ ಹೆಚ್ಚು ಖಾಸಗಿ ಕಾಲೇಜುಗಳಿವೆ. 20 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಮಂತ್ರಿಯಾಗಿ ಒಂದು ವರ್ಷ ಆಯಿತು. ನನಗಿಂತಲೂ ಮೊದಲು
ಆರ್.ವಿ.ದೇಶಪಾಂಡೆ ಮತ್ತು ಟಿ.ಬಿ.ಜಯಚಂದ್ರ ಈ ಇಲಾಖೆಯ ಜವಾಬ್ದಾರಿ ಹೊತ್ತಿದ್ದರು. ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಒಂದೊಂದೇ ಪರಿಹರಿಸುವ ಪ್ರಯತ್ನ ನಡೆಸಿದ್ದೇನೆ. – ಬೊಧಕ ವರ್ಗದ ಕೊರತೆ ನೀಗಿದೆಯಾ ?
ರಾಜ್ಯದ ಎಲ್ಲಾ ವಿವಿಗಳಲ್ಲಿ ಮೂರು ಸಾವಿರ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ 2160 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈ ವರ್ಷ 700 ಜನರ ನೇಮಕ ಮಾಡುತ್ತೇವೆ. 412 ಕಾಲೇಜುಗಳಲ್ಲಿ 375 ಪ್ರಿನ್ಸಿಪಾಲ್ ಹುದ್ದೆಗಳು ಖಾಲಿ ಇವೆ. ಅವುಗಳನ್ನು ನೇರ ನೇಮಕ ಮಾಡಲು ವಿಶೇಷ ನೇಮಕ ಕಾಯ್ದೆ ತರಲು ತೀರ್ಮಾನಿಸಲಾಗಿದೆ. – ಖಾಸಗಿ ವಿವಿಗಳ ನಿಯಂತ್ರಣಕ್ಕೆ ಏನಾದರೂ ಕ್ರಮ ಕೈಗೊಂಡಿದ್ದೀರಾ ?
ಖಾಸಗಿ ವಿವಿಗಳ ನಿಯಂತ್ರಣಕ್ಕೂ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ. ಈಗಾಗಲೇ ಗೋವಾ ವಿವಿ ವಿಶ್ರಾಂತ ಕುಲಪತಿ ಬಿ.ಎಸ್.ಸೋಂದೇ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವಿವಿ ಸ್ಥಾಪನೆಗೆ ಅನುಮತಿ ಪಡೆದು ಇನ್ನೂ ಸ್ಥಾಪನೆ ಮಾಡದ ವಿವಿಗಳ ವಿರುದ್ದ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಈ ಬಗ್ಗೆ ವಿವಿಗಳಿಂದ ಮಾಹಿತಿ ಪಡೆದು
ನಂತರ ಕ್ರಮ ಕೈಗೊಳ್ಳಲಾಗುವುದು. – ಶಂಕರ ಪಾಗೋಜಿ